Viral Video: ಬೆಂಕಿ ಅವಘಡದಿಂದ ಮನೆಯನ್ನು ರಕ್ಷಣೆ ಮಾಡಿದ ಶ್ವಾನ, ಹೇಗಿದೆ ನೋಡಿ ಇದರ ಬುದ್ಧಿವಂತಿಕೆ

ಶ್ವಾನಗಳು ಈ ಭೂಮಿಯ ಅತ್ಯಂತ ನಿಷ್ಠಾವಂತ ಪ್ರಾಣಿಗಳು. ಮನುಷ್ಯನ ಉತ್ತಮ ಸ್ನೇಹಿತನಾಗಿರುವ  ನಾಯಿಗಳು ಎಷ್ಟೋ ಬಾರಿ ತನ್ನ ಪ್ರಾಣವನ್ನೇ ಒತ್ತೆಯಿಟ್ಟು ತನ್ನ ಮಾಲೀಕನ ಪ್ರಾಣವನ್ನು ರಕ್ಷಿಸಿರುವಂತಹ ಉದಾಹರಣೆಗಳಿವೆ. ಇಂತಹ ಹೃದಯಸ್ಪರ್ಷಿ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತವೆ. ಇದೀಗ ಅಂತಹದ್ದೇ ವಿಡಿಯೋವೊಂದು ವೈರಲ್ ಆಗಿದ್ದು, ಶ್ವಾನವೊಂದು ತನ್ನ ಬುದ್ಧಿವಂತಿಕೆಯಿಂದ  ಬೆಂಕಿ ಅವಘಡವನ್ನು ತಪ್ಪಿಸಿದೆ.

Viral Video: ಬೆಂಕಿ ಅವಘಡದಿಂದ ಮನೆಯನ್ನು ರಕ್ಷಣೆ ಮಾಡಿದ ಶ್ವಾನ, ಹೇಗಿದೆ ನೋಡಿ ಇದರ ಬುದ್ಧಿವಂತಿಕೆ
ವೈರಲ್​ ವಿಡಿಯೋ
Edited By:

Updated on: Feb 19, 2024 | 2:11 PM

ಶ್ವಾನಗಳನ್ನು  ಅತ್ಯಂತ ನಂಬಿಕೆಯ ಪ್ರಾಣಿಗಳು ಎಂದು ಕರೆಯಲಾಗುತ್ತದೆ. ಅವುಗಳು ನಂಬಿಕೆಯ  ಪ್ರಾಣಿಗಳು ಮಾತ್ರವಲ್ಲದೆ ಬುದ್ಧಿವಂತ ಪ್ರಾಣಿಗಳೂ ಕೂಡಾ ಹೌದು. ಅವುಗಳಿಗೆ ಮನುಷ್ಯರಂತೆ ಮಾತು ಬಾರದಿರಬಹುದು ಆದರೆ ಅವುಗಳು ತಮ್ಮ ವಾತ್ಸಲ್ಯ ಮತ್ತು ಮಾನವೀಯ  ಗುಣಗಳ ಮೂಲಕವೇ ಎಲ್ಲರ ಹೃದಯವನ್ನು ಗೆಲ್ಲುತ್ತವೆ. ಶ್ವಾನಗಳ ಮಾನವೀಯ ಗುಣ, ಬುದ್ಧಿವಂತಿಕೆಯ ಕುರಿತ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಇದೀಗ ಅಂತಹದ್ದೇ ವಿಡಿಯೋವೊಂದು ಹರಿದಾಡುತ್ತಿದ್ದು, ಶ್ವಾನವೊಂದು ತನ್ನ ಬುದ್ಧಿವಂತಿಕೆಯಿಂದ  ಭಾರಿ ದೊಡ್ಡ ಅವಘಡವನ್ನು ತಪ್ಪಿಸಿದೆ. ಈ ಶ್ವಾನದ ಸಮಯ ಪ್ರಜ್ಞೆ ಮತ್ತು ಬುದ್ಧಿವಂತಿಕೆಗೆ ನೆಟ್ಟಿಗರು ತಲೆ ಬಾಗಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಶ್ವಾನವೊಂದು ತನ್ನ ಬುದ್ಧಿವಂತಿಕೆಯಿಂದ ಮನೆಯನ್ನು ಬೆಂಕಿ ಅವಘಡದಿಂದ ರಕ್ಷಿಸುತ್ತಿರುವಂತಹ ದೃಶ್ಯವನ್ನು ಕಾಣಬಹುದು. ಈ ವಿಡಿಯೋವನ್ನು @sachkadwahai ಎಂಬ ಹೆಸರಿನ ಇನ್ಸ್ಟಾಗ್ರಾಮ್  ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ವೈರಲ್​​ ವಿಡಿಯೋ ಇಲ್ಲಿದೆ;

ವೈರಲ್ ವಿಡಿಯೋದಲ್ಲಿ ಶ್ವಾನವೊಂದು ಮನೆಯ ಹೊರಗಡೆ ನೆಮ್ಮದಿಯಾಗಿ ವಿಶ್ರಾಂತಿ ಪಡೆಯುತ್ತಿರುವುದನ್ನು ಕಾಣಬಹುದು. ಅಲ್ಲೇ ಸಮೀಪದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಒಂದನ್ನು ಮನೆಯವರು ಚಾರ್ಚ್ ಗೆ ಇಟ್ಟಿದ್ದರು.  ಆದರೆ ಇದ್ದಕ್ಕಿದ್ದಂತೆ ಎಲೆಕ್ಟ್ರಿಕ್ ಸ್ಕೂಟರ್ ಗೆ ಸಂಪರ್ಕಗೊಂಡಿರುವ ಎಕ್ಸ್ಟೆನ್ಶನ್ ಬೋರ್ಡ್ ಮೇಲೆ ಬೆಂಕಿ ಕಾಣಿಸಿಕೊಳ್ಳುತ್ತದೆ. ಬೆಂಕಿಯನ್ನು ಕಂಡು ಗಾಬರಿಗೊಂಡ ಶ್ವಾನ, ಈ ಬೆಂಕಿಯಿಂದ ನನ್ನ ಮಾಲೀಕರಿಗೆ ತೊಂದರೆಯಾಗುವ ಮೊದಲು ಅದನ್ನು ಆರಿಸಬೇಕು ಎನ್ನುತ್ತಾ, ತನ್ನ ಪ್ರಾಣವನ್ನೂ ಲೆಕ್ಕಿಸದೆ, ಓಡಿ ಹೋಗಿ, ಬೆಂಕಿ ಹಿಡಿದಂತಹ ಎಕ್ಸ್ಟೆನ್ಶನ್ ಬೋರ್ಡ್ ಅನ್ನು ಬಾಯಿಯಿಂದ ಕಚ್ಚಿ ಎಳೆಯುವ ಮೂಲಕ ಬೆಂಕಿ ಹರಡುವುದನ್ನು ತಪ್ಪಿಸುತ್ತದೆ.  ಹೀಗೆ ಈ ನಾಯಿ ತನ್ನ ಬುದ್ಧಿವಂತಿಕೆಯಿಂದ ಇಡೀ ಮನೆಯನ್ನು ಬೆಂಕಿ ಅವಘಡದಿಂದ ರಕ್ಷಿಸಿದೆ.  ಈ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: ಇದು ಸಿಂಗಲ್ಸ್ ಕಷ್ಟ, ಗರ್ಲ್ ಫ್ರೆಂಡ್ ಇಲ್ಲ ಅದಕ್ಕೆ ಬಟ್ಟೆ ಅಂಗಡಿಯ ಗೊಂಬೆ ಜೊತೆ ಬೈಕ್ ರೈಡ್​​ 

ಮೂರು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 70 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಎರಡು ಸಾವಿರ ಲೈಕ್ಸ್ ಗಳನ್ನು ಪಡೆದುಕೊಂಡಿದೆ. ಹಾಗೂ ನೆಟ್ಟಿಗರು ಕಮೆಂಟ್ಸ್ ಮೂಲಕ ನಾಯಿಯ ಬುದ್ಧಿವಂತಿಕೆಯನ್ನು ಕೊಂಡಾಡಿದ್ದಾರೆ. ಒಬ್ಬ ಬಳಕೆದಾರರು ʼತುಂಬಾ ಸ್ಮಾರ್ಟ್ ಆಗಿದೆ ಈ ಶ್ವಾನʼ ಎಂಬ ಕಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಯಾರಾದರೂ ಈ ಶ್ವಾನದ ಸಹಾಯಕ್ಕೆ ಧಾವಿಸಬಹುದಿತ್ತಲ್ಲವೇʼ ಎಂದು ಹೇಳಿದ್ದಾರೆ.  ಮತ್ತೊಬ್ಬ ಬಳಕೆದಾರರು ʼಶ್ವಾನದ ಬುದ್ಧಿವಂತಿಕೆಯನ್ನು ಮೆಚ್ಚಲೇಬೇಕುʼ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ