ಸಾಮಾಜಿಕ ಮಾಧ್ಯಮಗಳಲ್ಲಿ ವನ್ಯ ಜೀವಿಗಳಿಗೆ ಸಂಬಂಧಿಸಿದ ಹಲವು ವಿಡಿಯೊಗಳು ಸಖತ್ ಸುದ್ದಿಯಾಗುತ್ತವೆ. ಅಂತೆಯೇ ಜಂಗಲ್ ಸಫಾರಿ ಮಾಡುವವಾಗ ತೆಗೆದ ವಿಡಿಯೋಗಳು ಕೂಡ ವೈರಲ್ ಆಗುತ್ತಿರುತ್ತವೆ. ಸಫಾರಿ ಮಾಡುವಾಗ ಪ್ರಾಣಿಗಳು ದಾಳಿಗೆ ಪ್ರಯತ್ನಿಸುವ ಕೆಲವು ಭೀಕರ ವಿಡಿಯೊಗಳನ್ನು ನೀವು ನೋಡಿರುತ್ತೀರಿ. ಸದ್ಯ ಅಂತರ್ಜಾಲದಲ್ಲಿ ಸಫಾರಿ ಮಾಡುವ ಜೀಪ್ ಒಂದರ ಒಳಗೆ ನುಗ್ಗುವ ಸಿಂಹಿಣಿಯೊಂದರ ವಿಡಿಯೊ ವೈರಲ್ ಆಗಿದೆ. ಆದರೆ ವಿಡಿಯೊ ನೋಡಿದವರಿಗೆ ಅಚ್ಚರಿಯಾಗುವ ವಿದ್ಯಮಾನವೊಂದು ಸ್ಥಳದಲ್ಲಿ ಜರುಗಿದೆ. ಅದೇನು ಅಂತೀರಾ, ಇಲ್ಲಿದೆ ಮಾಹಿತಿ.
ವೈರಲ್ ಆಗಿರುವ ವಿಡಿಯೋದಲ್ಲಿ ಸಫಾರಿ ವೇಳೆ ವ್ಯಕ್ತಿಯೊಬ್ಬ ತನ್ನ ಮೊಬೈಲ್ ಫೋನಿನಲ್ಲಿ ಸಿಂಹವನ್ನು ಚಿತ್ರೀಕರಿಸುವುದನ್ನು ನೀವು ನೋಡಬಹುದು. ಅದೇ ಸಮಯದಲ್ಲಿ, ಇತರ ಕೆಲವು ಜನರು ಸಹ ಜೀಪ್ನಲ್ಲಿ ಕುಳಿತಿರುವುದು ಕಾಣುತ್ತದೆ. ಆಗ ಇದ್ದಕ್ಕಿದ್ದಂತೆ, ಸಿಂಹಿಣಿಯೊಂದು ಇದ್ದಕ್ಕಿದ್ದಂತೆ ಜೀಪ್ನ ಕಡೆಗೆ ಬಂದು, ಒಳಗೆ ಪ್ರವೇಶಿಸಿದೆ. ಜನರಿಗೆ ಒಮ್ಮೆ ಸಹಜವಾಗಿ ಗಾಬರಿಯಾಗುತ್ತದೆ. ಆದರೆ ಅಚ್ಚರಿಯೆಂಬಂತೆ, ಹೆಣ್ಣು ಸಿಂಹವು ಎಲ್ಲರನ್ನೂ ಅಪ್ಪಿ ಮುದ್ದಾಡುತ್ತದೆ. ಸದ್ಯ ಈ ವಿಡಿಯೊ ಅಂತರ್ಜಾಲದಲ್ಲಿ ಸಖತ್ ವೈರಲ್ ಆಗಿದೆ.
ವಿಡಿಯೊ ಇಲ್ಲಿದೆ:
Oh holy hell! pic.twitter.com/8NB8ngOFNq
— Jamie Gnuman197… (@Jamie24272184) September 25, 2021
ಈ 11-ಸೆಕೆಂಡುಗಳ ವಿಡಿಯೋವನ್ನು ಟ್ವಿಟರ್ ನಲ್ಲಿ ಹಂಚಿಕೊಳ್ಳಲಾಗಿದೆ. ಹಲವರು ಇದನ್ನು ತಮಾಷೆಯಾಗಿ ಸ್ವೀಕರಿಸಿದ್ದು, ಮತ್ತಷ್ಟು ಜನರು ಸಿಂಹಿಣಿಯ ನಡೆಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಒಬ್ಬರು ತಮಾಷೆಯಾಗಿ ಕಾಮೆಂಟಿನಲ್ಲಿ, ‘ಯಾರು ಸಿಂಹಿಣಿಯನ್ನು ತಬ್ಬಿಕೊಳ್ಳಲು ನಿರಾಕರಿಸುತ್ತಾರೋ, ಅವರು ತಲೆ ಕಳೆದುಕೊಳ್ಳಬಹುದು’ ಎಂದು ಬರೆದಿದ್ದಾರೆ. ಅದೇ ಸಮಯದಲ್ಲಿ, ಇನ್ನೊಬ್ಬ ಬಳಕೆದಾರರು, ‘ಆಕೆಗೆ ಹಸಿವಿಲ್ಲದಿರುವುದು ಒಳ್ಳೆಯದು, ಇಲ್ಲದಿದ್ದರೆ ಈ ಜನರಿಗೆ ಏನಾಗುತ್ತಿತ್ತು?’ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ:
ಮನ ಬಂದಂತೆ ಇಂಜೆಕ್ಷನ್ ಚುಚ್ಚುವ ನಕಲಿ ವೈದ್ಯೆ; ಮೊಬೈಲ್ನಲ್ಲಿ ಸೆರೆಯಾಯ್ತು ಅಸಲಿ ಸತ್ಯ
ಚಾಮರಾಜನಗರ: ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸಿ ಆತಂಕ ಮೂಡಿಸಿದ್ದ ಚಿರತೆ ಸೆರೆ, ನಿಟ್ಟುಸಿರುಬಿಟ್ಟ ಜನ
Viral Video: ರಸ್ತೆ ಗುಂಡಿಗಳ ಸಮಸ್ಯೆಯನ್ನು ಹೀಗೂ ಹೇಳಬಹುದಾ?; ಮಜವಾದ ಈ ವಿಡಿಯೊ ನೋಡಿ
(A lioness comes inside Safari Jeep, what happened next? watch the video)