ಮನ ಬಂದಂತೆ ಇಂಜೆಕ್ಷನ್ ಚುಚ್ಚುವ ನಕಲಿ ವೈದ್ಯೆ; ಮೊಬೈಲ್​ನಲ್ಲಿ ಸೆರೆಯಾಯ್ತು ಅಸಲಿ ಸತ್ಯ

ಸಣ್ಣ ರೂಮ್ ಒಂದರಲ್ಲಿ ಭಾನುವಾರ ಜನರಿಗೆ ಚಿಕಿತ್ಸೆ ನೀಡುತ್ತಾಳೆ ಈ ನಕಲಿ ವೈದ್ಯೆ. ಇನ್ನು ಅನಿತಾ ಜತೆಗೆ ಅಸಿಸ್ಟೆಂಟ್ ಕೂಡ ಇದ್ದಾನೆ.  ಈ ವೈದ್ಯೆಯ ಬಳಿ ಬೇರೆ ಬೇರೆ ಜಿಲ್ಲೆಗಳಿಂದಲೂ ಜನರು ಬಂದು ಚಿಕಿತ್ಸೆ ಪಡೆಯುತ್ತಾರೆ.

ಮನ ಬಂದಂತೆ ಇಂಜೆಕ್ಷನ್ ಚುಚ್ಚುವ ನಕಲಿ ವೈದ್ಯೆ; ಮೊಬೈಲ್​ನಲ್ಲಿ ಸೆರೆಯಾಯ್ತು ಅಸಲಿ ಸತ್ಯ
ಮನ ಬಂದಂತೆ ಇಂಜೆಕ್ಷನ್ ಚುಚ್ಚುವ ನಕಲಿ ವೈದ್ಯೆ
Follow us
TV9 Web
| Updated By: preethi shettigar

Updated on: Sep 26, 2021 | 11:13 AM

ಯಾದಗಿರಿ: ಅಮಾಯಕ ಜನರ ಜೀವದ ಜೊತೆ ಚಲ್ಲಾಟವಾಡುತ್ತಿರುವ ನಕಲಿ ವೈದ್ಯೆಯ ಕಟು ಸತ್ಯ ಸಾರ್ವಜನಿಕರ ಮುಂದೆ ಬಯಲಾಗಿದೆ. ಯಾದಗಿರಿ ನಗರದ ಹೊಸಹಳ್ಳಿ ಕ್ರಾಸ್ ಬಳಿ ಮನ ಬಂದಂತೆ ಇಂಜೆಕ್ಷನ್ ಚುಚ್ಚುವ ವೈದ್ಯೆಯ ಅಸಲಿ ಸತ್ಯವನ್ನು ಸ್ಥಳೀಯರೆ ತಮ್ಮ ಮೊಬೈಲ್​ನಲ್ಲಿ ಸೆರೆಹಿಡಿದಿದ್ದಾರೆ. ಎಲ್ಲಿ ನೋವು ಇದೆ ಅದೆ ಜಾಗಕ್ಕೆ ಇಂಜೆಕ್ಷನ್ ಚುಚ್ಚುತ್ತಾಳೆ ಈ ವೈದ್ಯೆ. ಕಾಲಿಗೆ ನೋವಿದ್ದರೆ ಕಾಲು,ಕೈ ನೋವಾದರೆ ಕೈ, ಬೆನ್ನು ನೋವಾದರೆ ಬೆನ್ನು, ಬೆರಳಿಗೆ ನೋವಿದ್ದರೆ ಬೆರಳಿಗೆ ಸಹ ಇಂಜೆಕ್ಷನ್ ಚುಚ್ಚುತ್ತಾಳೆ.

ಸಂಡೇ ಸ್ಪೆಷಲ್ ಲೇಡಿ ಡಾಕ್ಟರ್ ನಕಲಿ ವೈದ್ಯೆ ಅನಿತಾ ಒಂದೊಂದು ಇಂಜೆಕ್ಷನ್​ಗೆ ಮುಗ್ಧ ಜನರಿಂದ 250 ರಿಂದ 300 ರೂಪಾಯಿವರೆಗೆ ತೆಗೆದುಕೊಳ್ಳುತ್ತಾಳೆ. ಭಾನುವಾರ ಮಾತ್ರ ವೈದ್ಯೆ ಅನಿತಾ ಆಸ್ಪತ್ರೆ ಬಾಗಿಲು ತೆರೆದಿರುತ್ತದೆ. ಇನ್ನು ಉಳಿದ ದಿನಗಳಲ್ಲಿ ನಕಲಿ ವೈದ್ಯೆ ಅನಿತಾ ಕಣ್ಣಿಗೆ ಕಾಣಿಸಿಕೊಳ್ಳುವುದಿಲ್ಲ.

ಸಣ್ಣ ರೂಮ್ ಒಂದರಲ್ಲಿ ಭಾನುವಾರ ಜನರಿಗೆ ಚಿಕಿತ್ಸೆ ನೀಡುತ್ತಾಳೆ ಈ ನಕಲಿ ವೈದ್ಯೆ. ಇನ್ನು ಅನಿತಾ ಜತೆಗೆ ಅಸಿಸ್ಟೆಂಟ್ ಕೂಡ ಇದ್ದಾನೆ.  ಈ ವೈದ್ಯೆಯ ಬಳಿ ಬೇರೆ ಬೇರೆ ಜಿಲ್ಲೆಗಳಿಂದಲೂ ಜನರು ಬಂದು ಚಿಕಿತ್ಸೆ ಪಡೆಯುತ್ತಾರೆ. ಇಷ್ಟೆಲ್ಲಾ ಅವಾಂತರಗಳು ನಡೆಯುತ್ತಿದ್ದರೂ, ಆರೋಗ್ಯ ಇಲಾಖೆ ಮಾತ್ರ ಈ ಬಗ್ಗೆ ಗಮನಹರಿಸಿಲ್ಲ ಎನ್ನುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಈ ನಕಲಿ ವೈದ್ಯೆ ಆರೋಗ್ಯ ಇಲಾಖೆಯಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸ ನಿರ್ವಹಿಸುತ್ತಿದ್ದಾಳೆ. ಪ್ರತಿ ಭಾನುವಾರ ಮಾತ್ರ ತಾನೇ ಡಾಕ್ಟರ್ ಆಗಿ ಹೊಸಹಳ್ಳಿ ಕ್ರಾಸ್ ಬಳಿ ಆಗಮಿಸುತ್ತಾಳೆ. ಹೀಗಾಗಿ ಆ ಆಸ್ಪತ್ರೆಯಿಂದ ಮಾತ್ರೆ ಮತ್ತು ಇಂಜೆಕ್ಷನ್ ತಂದು ಇಲ್ಲಿ ಮಾರಾಟ ಮಾಡುತ್ತಿದ್ದಾಳೆ ಎಂದು ಮೂಲಗಳು ತಿಳಿಸಿವೆ.

ಈ ನಕಲಿ ಡಾಕ್ಟರ್ ಕಳೆದ ಹಲವು ವರ್ಷಗಳಿಂದ ಅಮಾಯಕ ಜನರ ಜೀವದ ಜೊತೆ ಚಲ್ಲಾಟ ಆಡುತ್ತಿದ್ದಾಳೆ. ಇದರ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ಬಂದಿಲ್ಲ ಎಂದರೆ,  ದೊಡ್ಡ ದುರಂತ. ಈಗಲಾದರೂ ಆರೋಗ್ಯ ಇಲಾಖೆ ಅಧಿಕಾರಿಗಳು ಈ ನಕಲಿ ವೈದ್ಯೆ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಉಮೇಶ್ ಮುದ್ನಾಳ್ ತಿಳಿಸಿದ್ದಾರೆ.

ಇದನ್ನೂ ಓದಿ:

ಕೊರೊನಾ ಸೋಂಕಿನ ನಡುವೆ ನಕಲಿ ವೈದ್ಯರ ಹಾವಳಿ; ಸಾರ್ವಜನಿಕರೇ ಎಚ್ಚರ

ನಕಲಿ ದಾಖಲೆ ಸೃಷ್ಟಿಸಿ ಸಾಲ ಪಡೆದು ಬ್ಯಾಂಕ್​ಗೆ ವಂಚನೆ; ದಂಪತಿ ವಿರುದ್ಧ ದೂರು ದಾಖಲು

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್