Video : ತಾತನ ಜತೆಗೆ ಮೊಮ್ಮಗಳ ಸಖತ್​​​​​ ಡ್ಯಾನ್ಸ್​​: ವೈರಲ್​​​​​​ ವಿಡಿಯೋ ಇಲ್ಲಿದೆ ನೋಡಿ

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಕೆಲ ವಿಡಿಯೋಗಳು ಬಾಲ್ಯವನ್ನು ನೆನಪಿಸುತ್ತದೆ. ಅದರಲ್ಲಿಯೂ ಹಿರಿಜೀವಗಳ ಜೊತೆಗೆ ಆಟ, ತುಂಟಾಟ ಹಾಗೂ ಡಾನ್ಸ್ ವಿಡಿಯೋಗಳನ್ನು ನೋಡಿದರೆ ತಾವು ಅಜ್ಜ ಅಜ್ಜಿಯಂದಿರ ಜೊತೆಗೆ ಕಳೆದ ಆ ದಿನಗಳು ಕಣ್ಣೇದುರು ಬರುತ್ತದೆ. ಇದೀಗ ಅಂತಹದ್ದೇ ಒಂದು ವಿಡಿಯೋ ವೈರಲ್ ಆಗಿದ್ದು, ಇಲ್ಲೊಂದು ಪುಟಾಣಿಯೊಂದು ತನ್ನ ಪ್ರೀತಿಯ ಅಜ್ಜನೊಂದಿಗೆ ಡಾನ್ಸ್ ಮಾಡಿದ್ದು, ಈ ಹೃದಯ ಸ್ಪರ್ಶಿ ವಿಡಿಯೋಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Video : ತಾತನ ಜತೆಗೆ ಮೊಮ್ಮಗಳ ಸಖತ್​​​​​ ಡ್ಯಾನ್ಸ್​​: ವೈರಲ್​​​​​​ ವಿಡಿಯೋ ಇಲ್ಲಿದೆ ನೋಡಿ
ವೈರಲ್ ವಿಡಿಯೋ
Image Credit source: Instagram

Updated on: Jun 03, 2025 | 10:38 AM

ಮನೆಯಲ್ಲಿ ಹಿರಿಜೀವ (grand parents) ಗಳು ಇದ್ದು ಬಿಟ್ಟರೆ ಅದಕ್ಕಿಂತ ಸಂತೋಷ ಬೇರೇನಿದೆ ಹೇಳಿ, ವಯಸ್ಸಾದ ಕಾಲಘಟ್ಟದಲ್ಲಿ ತಮ್ಮ ಮೊಮ್ಮಕ್ಕಳ ಜೊತೆಗೆ ಸಮಯ ಕಳೆಯುವ ಮೂಲಕ ತಮ್ಮ ಬೇಸರವನ್ನು ಕಳೆದುಕೊಳ್ಳುತ್ತಾರೆ. ಈ ಅಜ್ಜ ಅಜ್ಜಿಯಂದಿರಿಗೂ ಮೊಮ್ಮಕ್ಕಳು ಎಂದರೆ ಜೀವ. ಇನ್ನು ಈ ಪುಟಾಣಿಗಳು ಕೂಡ ಹಿರಿಜೀವಗಳನ್ನು ಹೆಚ್ಚು ಹಚ್ಚಿಕೊಂಡಿರುತ್ತವೆ. ಇದೀಗ ಪುಟಾಣಿಯೊಂದು ತನ್ನ ತಾತನೊಂದಿಗೆ ಡಾನ್ಸ್ ಮಾಡಿದೆ. ಅಷ್ಟೇ ಅಲ್ಲದೇ ಅಜ್ಜ ಸುಸ್ತಾಗಿ ಕುಳಿತಾಗ ತನ್ನ ಪುಟ್ಟ ಪುಟ್ಟ ಕೈಗಳಿಂದ ಹಿರಿಜೀವದ ಕೈ ಕಾಲು ಒತ್ತಿ ಕಾಳಜಿ ವಹಿಸಿದೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾ (social media) ದಲ್ಲಿ ಸಖತ್ ವೈರಲ್ ಆಗಿದ್ದು ನೆಟ್ಟಿಗರ ಹೃದಯಕ್ಕೆ ತೀರಾ ಹತ್ತಿರವಾಗಿದೆ.

ಈ ವಿಡಿಯೋದಲ್ಲಿ ಏನಿದೆ?

theruhafamily ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಈ ವಿಡಿಯೋದಲ್ಲಿ ಅಜ್ಜ ಹಾಗೂ ಮೊಮ್ಮಗಳು ಡಾನ್ಸ್ ಮಾಡುತ್ತಿರುವುದನ್ನು ಕಾಣಬಹುದು. ಮೊಮ್ಮಕ್ಕಳ ಡಾನ್ಸ್ ಕಂಡು ಹಿರಿಜೀವವು ಖುಷಿ ಪಟ್ಟಿದೆ. ಡಾನ್ಸ್ ಮಾಡಿ ಸುಸ್ತಾಗಿ ಅಜ್ಜ ಬೆಡ್ ಮೇಲೆ ಕುಳಿತುಕೊಂಡಿದ್ದಾರೆ. ಈ ವೇಳೆಯಲ್ಲಿ ಮೊಮ್ಮಗಳು ಕಾಳಜಿಯಿಂದ  ತನ್ನ ಪ್ರೀತಿಯ ತಾತನ ಕೈ ಕಾಲನ್ನು ಒತ್ತಿ, ಮುತ್ತು ನೀಡಿದ್ದಾಳೆ. ಮೊಮ್ಮಗಳ ಪ್ರೀತಿಗೆ ಅಜ್ಜನು ಸಿಹಿಮುತ್ತನ್ನು ನೀಡಿದ್ದಾರೆ.

ಇದನ್ನೂ ಓದಿ
ಮದ್ವೆಯಾಗದಿದ್ರೆ ನಷ್ಟಕ್ಕಿಂತ ಲಾಭವೇ ಹೆಚ್ಚಂತೆ
ಇಂಡೋನೇಷ್ಯಾ ಬಾಲಿಯಲ್ಲಿ ನೀರೊಳಗೆ ವಿಷ್ಣುವಿನ ದೇವಾಲಯ ಪತ್ತೆ?
ಮುಖದ ತುಂಬಾ ಬ್ಯಾಂಡೇಜ್, ಸ್ನೇಹಿತನ ಮದ್ವೆ ನೋಡಲು ಬಂದ ಜೀವದ ಗೆಳೆಯ
ಕೂಲರ್‌ಗಾಗಿ ವಧು ವರನ ಕಡೆಯವರ ನಡುವೆ ಕಿರಿಕ್, ರಣರಂಗವಾಯ್ತು ಕಲ್ಯಾಣ ಮಂಟಪ

ಇದನ್ನೂ ಓದಿ : ಮದ್ವೆಯಾಗದಿದ್ರೆ ನಷ್ಟಕ್ಕಿಂತ ಲಾಭವೇ ಹೆಚ್ಚಂತೆ, ವೈರಲ್ ಆಯ್ತು ಮಹಿಳೆಯ ಪೋಸ್ಟ್

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಬಳಕೆದಾರರ ಕಾಮೆಂಟ್ ಗಳು ಹೀಗಿವೆ

ಈ ವಿಡಿಯೋವೊಂದು ಹನ್ನೆರಡು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ಬಳಕೆದಾರರೊಬ್ಬರು, ನಾನು ಕೂಡ ತನ್ನ ಅಜ್ಜನ ಜೊತೆಗೆ ಹೀಗೆ ಇರುತ್ತಿದೆ. ಆದರೆ ನಾನು ಇವತ್ತಿಗೂ ತಾತನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದಿದ್ದಾರೆ. ಮತ್ತೊಬ್ಬರು, ಇಬ್ಬರಲ್ಲಿಯೂ ಮುಗ್ಧತೆಯಿದೆ. ಈ ಪ್ರೀತಿಯೂ ನಿಜಕ್ಕೂ ಶಾಶ್ವತ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ. ಇನ್ನೊಬ್ಬರು, ಈ ವಿಡಿಯೋ ನನ್ನ ಕಣ್ಣನ್ನು ಒದ್ದೆಯಾಗಿಸಿತು ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ. ಇನ್ನು ಕೆಲವರು ಈ ವಿಡಿಯೋಗೆ ಹಾರ್ಟ್ ಸಿಂಬಲ್ ಕಳುಹಿಸುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:33 am, Tue, 3 June 25