Jawan : ಶಾರುಖ್ಖಾನ್ (Shahrukh Khan) ಅಭಿನಯದ ಜವಾನ್ ಬಿಡುಗಡೆಯಾಗಿ ಎರಡು ವಾರಗಳು ಕಳೆದಿವೆ. ಎಲ್ಲೆಡೆಯೂ ‘ಚಲೇಯಾ’ ಹಾಡಿನ ಜ್ವರ. ಇದೀಗ ವೈರಲ್ ಆಗಿರುವ ವಿಡಿಯೋ ವಿಶೇಷವಾಗಿದೆ. ಥಿಯೇಟರಿನಲ್ಲಿ ಜವಾನ್ ಪ್ರದರ್ಶನಗೊಳ್ಳುತ್ತಿರುವಾಗ ಚಲೇಯಾ ಹಾಡಿಗೆ ಹೆಜ್ಜೆ ಹಾಕಿದ್ದಾನೆ. ಈತನಕ 5.1 ಮಿಲಿಯನ್ ಜನರು ಈ ವಿಡಿಯೋ ನೋಡಿದ್ದಾರೆ. ಅಂಶ್ ಕುಕ್ರೇಜಾ ಎನ್ನುವ ವ್ಯಕ್ತಿಯೇ ಹೀಗೆ ಚಲೇಯಾಗೆ ಡ್ಯಾನ್ಸ್ ಮಾಡಿದ್ದು. ಅನೇಕರು ಪ್ರತಿಕ್ರಿಯಿಸಿ ಇವನ ಉತ್ಸಾಹವನ್ನು ಶ್ಲಾಘಿಸಿದ್ದಾರೆ. ಶಾರುಖ್ ಖಾನ್ ಸ್ಟೆಪ್ಗಳನ್ನು ಅನುಕರಿಸಿದ ರೀತಿ ಅದ್ಭುತವಾಗಿದೆ ಎಂದಿದ್ದಾರೆ.
ಇದನ್ನೂ ಓದಿ : Viral Video: ಪೆನ್ಪ್ರಿಯ ಬೆಕ್ಕು; ಕೊಟ್ಟಂತೆ ಮಾಡುವುದು ಆದರೆ ಕೊಡುವುದಿಲ್ಲ; ಬಿದ್ದುಬಿದ್ದು ನಗುತ್ತಿರುವ ನೆಟ್ಟಿಗರು
ಅದ್ಭುತವಾಗಿದೆ! ಹೀಗೆ ಡ್ಯಾನ್ಸ್ ಮಾಡಲು ಸಾಕಷ್ಟು ಧೈರ್ಯಬೇಕು ಎಂದಿದ್ದಾರೆ ಒಬ್ಬರು. ಇವರ ಉತ್ಸಾಹದಿಂದ ಉಳಿದ ಪ್ರೇಕ್ಷಕರಿಗೆ ಕಿರಿಕಿರಿ ಉಂಟಾಗುವುದಿಲ್ಲವೆ? ಎಂದಿದ್ದಾರೆ ಇನ್ನೊಬ್ಬರು. ಈ ಹಾಡು ಇವನಿಗೆ ಇಷ್ಟೊಂದು ಹುಚ್ಚು ಹಿಡಿಸಿದೆ ಎಂದರ್ಥ. ಥಿಯೇಟರಿಗೆ ಬರುವುದೇ ಮನೋರಂಜನೆಗೆ, ಇವನ ಡ್ಯಾನ್ಸ್ ಬೋನಸ್ ಅಲ್ಲವೆ ?ಎಂದಿದ್ದಾರೆ ಮತ್ತೊಬ್ಬರು. ನನಗಂತೂ ಇದು ಇಷ್ಟವಾಯಿತು, ತನಗೆ ಅನ್ನಿಸಿದ್ದನ್ನು ಅಭಿವ್ಯಕ್ತಪಡಿಸಿದ್ದಾನೆ ಎಂದಿದ್ದಾರೆ ಒಬ್ಬರು.
ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಬ್ಯಾನರ್ನಡಿಯಲ್ಲಿ ಅಟ್ಲೀ ನಿರ್ದೇಶನದ ಶಾರುಖ್ ಖಾನ್ ಅಭಿನಯದ ಚಲೇಯಾ ಸೆ. 7 ರಂದು ಬಿಡುಗಡೆಯಾಯಿತು. ಚಲೇಯಾ ಹಾಡಿನಲ್ಲಿ ಶಾರುಖ್ ಖಾನ್ ಮತ್ತು ನಯನತಾರಾ ಅಭಿನಯಿಸಿದ್ದಾರೆ. ಈ ಹಾಡು ದಿನೇದಿನೆ ವೈರಲ್ ಆಗುತ್ತಿದೆ.
ಇದನ್ನೂ ಓದಿ : Viral Video: ಸಲಿಂಗವಿವಾಹ: ‘ಲೋಣಾವಳದ ಕಲ್ಯಾಣಮಂಟಪದಲ್ಲಿ ಸಪ್ತಪದಿ ತುಳಿದೆವು’ ಅವಿನಾಶ ವರುಣ
ಫರಾ ಖಾನ್ ಅವರ ನೃತ್ಯ ಸಂಯೋಜನೆಯಲ್ಲಿ ಮೂಡಿಬಂದ ಈ ಹಾಡನ್ನು ಅರಿಜೀತ್ ಸಿಂಗ್ ಮತ್ತು ಶಿಲ್ಪಾ ರಾವ್ ಹಾಡಿದ್ದಾರೆ. ಕುಮಾರ್ ಸಾಹಿತ್ಯ ರಚಿಸಿದ್ದಾರೆ ಅನಿರುದ್ಧ ರವಿಚಂದರ್ ಸಂಗೀತ ಸಂಯೋಜನೆ ಮಾಡಿದ್ಧಾರೆ. ಜೈಲರ್ ಕಾವಾಲಾ ಹಾಡಿನ ನಂತರ ಟ್ರೆಂಡಿಂಗ್ನಲ್ಲಿರುವ ಹಾಡು ಚಲೇಯಾ. ರೀಲಿಗರನ್ನು ಈ ಹಾಡು ಸದ್ಯಕ್ಕೆ ಹಿಡಿದಿಟ್ಟಿದೆ. ಮುಂದಿನ ಹಾಡು ಯಾವುದೋ?
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ