Viral Video : 2022ರ ಜನವರಿ 6 ರಂದು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ‘ಸ್ಟಾಪ್ ದಿ ಸ್ಟೀಲ್’ ರ್ಯಾಲಿಯ ಮುನ್ನಾದಿನದಂದು ಡೆಲ್ವೇರ್ನ ಉದ್ಯಮಿ ಸ್ಕೇಫರ್ ಟಿಂಡರ್ ಆನ್‌ಲೈನ್ ಡೇಟಿಂಗ್ ಅಪ್ಲಿಕೇಶನ್‌ನಲ್ಲಿ ಪರಿಚಯವಾದ ಮಹಿಳೆಯೊಂದಿಗೆ ರಾತ್ರಿ ಕಳೆಯಲು ಡೆಲವೇರ್‌ನಿಂದ ವರ್ಜೀನಿಯಾಕ್ಕೆ ಪ್ರಯಾಣಿಸಿದ. ಡೇಟ್ ಮುಗಿದ ಮರುದಿನ ಅಮೆರಿಕದ ಸಂಸತ್ತಿನೆದುರು ಗಲಭೆ ಎದ್ದಿದ್ದನ್ನು ಟಿವಿಯಲ್ಲಿ ನೋಡಿದ ಈತ ಉಬರ್ನಲ್ಲಿ ಪ್ರಯಾಣಿಸಿ ಆ ಗುಂಪಿಗೆ ಸೇರಿಕೊಂಡ. ಇದೀಗ ಪೊಲೀಸರು ಈ ವ್ಯಕ್ತಿಗೆ 30 ದಿನಗಳ ಜೈಲುಶಿಕ್ಷೆ ನೀಡಿದ್ದಾರೆ. ಗಲಭೆಯಲ್ಲಿ ಪಾಲ್ಗೊಂಡಿದ್ದಕ್ಕಾಗಿ 2,000 ಡಾಲರ್ ದಂಡ ವಿಧಿಸಿದ್ದಾರೆ. ಅಮೆರಿಕದ ಜಿಲ್ಲಾ ನ್ಯಾಯಾಧೀಶ ಥಾಮಸ್ ಹೊಗನ್ ಈ ಕುರಿತು ಶುಕ್ರವಾರ ಆದೇಶಿಸಿದ್ದಾರೆ.
ಸ್ಕೇಫರ್ ಸೆನೆಟ್ ವಿಂಗ್ನ ಬಾಗಿಲುಗಳ ಬಳಿ ಇರುವ ಮುರಿದ ಕಿಟಕಿಯ ಮೂಲಕ ಸಂಸತ್ತನ್ನು ಪ್ರವೇಶಿಸಿ ಗಲಭೆ ನಡೆಸುತ್ತಿದ್ದ ಗುಂಪಿನೊಂದಿಗೆ ಸ್ಕೇಫರ್ ಸೇರಿಸಿಕೊಂಡಿದ್ದಾನೆ. ಸುಮಾರು 28 ನಿಮಿಷಗಳ ಕಾಲ ಗಲಭೆಗೆ ಈತ ಸಾಕ್ಷಿಯಾಗಿದ್ದಾನೆ. ಈ ಕುರಿತು ಎಲ್ಲ ಸಾಕ್ಷ್ಯಾಧಾರಗಳನ್ನು ಸಾಬೀತುಪಡಿಸಿದ ಪಬ್ಲಿಕ್ ಪ್ರಾಸಿಕ್ಯೂಟರ್ 36 ವರ್ಷದ ಸ್ಕೇಫರ್ನನ್ನು ಅಪರಾಧಿ ಎಂದು ಪರಿಗಣಿಸಬೇಕೆಂದು 2022ರ ಜನವರಿಯಲ್ಲಿ ತಿಳಿಸಿದ್ದರು.
ಇದನ್ನೂ ಓದಿ : ಮೆನ್ಸ್ ಡೇ ಪಂಚಾಂಗದಾಗೂ ಇಲ್ಲ ಮತ್ತ ಗೂಗಲ್ ಡೂಡಲ್ದಾಗೂ ಇಲ್ಲ; ಸೋನು ವೇಣುಗೋಪಾಲ
ಅಧ್ಯಕ್ಷ ಜೋ ಬೈಡನ್ ಅವರ 2020 ರ ಚುನಾವಣಾ ಫಲಿತಾಂಶದ ಸಂದರ್ಭದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಜಂಟಿ ಅಧಿವೇಶನದಲ್ಲಿ ಯಾವುದೇ ರೀತಿಯ ಹಿಂಸಾಚಾರದಲ್ಲಿ ಸ್ಕೇಫರ್ ತೊಡಗಿಕೊಂಡಿಲ್ಲ ಎಂದು ಸ್ಕೇಫರ್ ಪರ ವಕೀಲ ಜೋಶುವಾ ವಾದಿಸಿದ್ದರೂ ನ್ಯಾಯಾಲಯ ಇವರ ವಾದವನ್ನು ತಳ್ಳಿಹಾಕಿತು. ನಂತರ ಆರೋಪಿ ತನ್ನ ತಪ್ಪನ್ನು ಒಪ್ಪಿಕೊಂಡ.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 3:58 pm, Mon, 21 November 22