ಅಂತರ್ಜಾಲದಲ್ಲಿ ಪ್ರಾಣಿ ಪ್ರಪಂಚದ ಹಲವು ವಿಡಿಯೊಗಳು ವೈರಲ್ ಆಗುತ್ತವೆ. ಅದರಲ್ಲೂ ಪ್ರಾಣಿಗಳ ತುಂಟಾಟಗಳು, ತಮಾಷೆ, ಜನರನ್ನು ಬೇಸ್ತು ಬೀಳಿಸುವ ಚಾಣಾಕ್ಷ ಪ್ರಾಣಿಗಳು ಮೊದಲಾದವು ಎಲ್ಲರ ಗಮನ ಸೆಳೆಯುತ್ತವೆ. ಇತ್ತೀಚೆಗೆ ದೆಹಲಿಯಲ್ಲಿ ಕಾಣಿಸಿಕೊಂಡ ಒಂದು ಮಂಗ, ಹೀಗೆ ರಾಷ್ಟ್ರಾದ್ಯಂತ ಹೆಸರು ಮಾಡಿದೆ. ದೆಹಲಿಯಲ್ಲಿ ಮಂಗ ಕಾಣಿಸಿಕೊಂಡರೆ ಅದೇನು ವಿಶೇಷ ಎಂದು ಯೋಚಿಸುತ್ತಿದ್ದೀರಾ? ಅದಕ್ಕೂ ಕಾರಣವಿದೆ. ಮಂಗ ಕಾಣಿಸಿಕೊಂಡಿದ್ದು, ದೆಹಲಿಯ ಮನೆಗಳಲ್ಲೋ, ಬೀದಿಗಳಲ್ಲೋ ಅಲ್ಲ. ಅತ್ಯಂತ ಜನನಿಬಿಡ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ!
ವಿಮಾನ ನಿಲ್ದಾಣದ ಕೌಂಟರ್ ಒಂದರಲ್ಲಿ ಕುಳಿತಿದ್ದ ಮಂಗ ಕೆಲ ಹೊತ್ತು, ಎಲ್ಲರನ್ನೂ ದೃಷ್ಟಿಸಿ ನೋಡುತ್ತಿತ್ತು. ಅಲ್ಲಿದ್ದ ಹಲವರಿಗೆ ಇದರಿಂದ ಅಚ್ಚರಿಯಾಗಿದ್ದು, ತಮ್ಮ ಮೊಬೈಲ್ಗಳಲ್ಲಿ ಫೋಟೋ, ವಿಡಿಯೋ ತೆಗೆಯಲು ಆರಂಭಿಸಿದ್ದಾರೆ. ನಂತರ ಮಂಗ ಅಲ್ಲಿಂದ ಎದ್ದು, ಬುಕ್ ಶೆಲ್ಫ್ ಬಳಿಗೆ ಸಾಗಿ ಅಲ್ಲಿಂದ ಆಚೆ ಹೋಗಿದೆ. ಸದ್ಯ ಮಂಗದ ಈ ವಿಡಿಯೊ ವೈರಲ್ ಆಗಿದೆ.
ವಿಡಿಯೊ ಇಲ್ಲಿದೆ:
Indira Gandhi International (IGI) Airport. #Delhi pic.twitter.com/0EGAOuzVDU
— Mahender Singh Manral (@mahendermanral) October 1, 2021
ದೆಹಲಿಯಲ್ಲಿ ಇತ್ತೀಚಿಗೆ ಸುರಿದ ಭಾರಿ ಮಳೆಯಿಂದಾಗಿ ವಿಮಾನ ನಿಲ್ದಾಣದ ಟಿ3 ಟರ್ಮಿನಲ್ನಲ್ಲಿ ಭಾರಿ ನೀರು ನಿಂತಿತ್ತು. ಆ ವಿಡಿಯೊ ಕೂಡ ಅಂತರ್ಜಾಲದಲ್ಲಿ ಸಖತ್ ಸುದ್ದಿಯಾಗಿತ್ತು. ಇದೀಗ ಆ ಘಟನೆಯ ನಂತರ ಮಂಗ ವಿಮಾನ ನಿಲ್ದಾಣದೊಳಗೆ ನಿರ್ಭಿಡೆಯಿಂದ ಓಡಾಡುತ್ತಿರುವ ವಿಡಿಯೊ ವೈರಲ್ ಆಗಿದೆ.
ಈ ಹಿಂದೆ ವೈರಲ್ ಆಗಿದ್ದ ವಿಡಿಯೊ:
Yet again..
Welcome to @DelhiAirport : pic.twitter.com/Hy4eFJZEs6
— Tarun Shukla (@shukla_tarun) September 11, 2021
ದೆಹಲಿ ವಿಮಾನ ನಿಲ್ದಾಣದಲ್ಲಿ ಮಂಗ ಕಾಣಿಸಿಕೊಂಡಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಕೂಡ ಮಂಗವೊಂದು ಆಹಾರಕ್ಕಾಗಿ ಅಲ್ಲಿ ಓಡಾಡಿದ್ದು ಹಾಗೂ ಅಲ್ಲಿದ್ದ ಬಾಳೆ ಹಣ್ಣು, ಬಜ್ಜಿ ಮೊದಲಾದವುಗಳನ್ನು ಎತ್ತಿಕೊಂಡ ಹೋಗಿದ್ದ ವಿಡಿಯೊ ವೈರಲ್ ಆಗಿತ್ತು.
ಇದನ್ನೂ ಓದಿ:
Bigg Boss 15: ಕಾಡಿನಲ್ಲಿ ನಡೆಯಲಿದೆ ಬಿಗ್ ಬಾಸ್; ಮನೆ ನೋಡಿ ಹೌಹಾರಿದ ವೀಕ್ಷಕರು
WhatsApp: ನೀವು ವಾಟ್ಸ್ಆ್ಯಪ್ನಲ್ಲಿ ಅಶ್ಲೀಲ ವಿಡಿಯೋ ಕಳುಹಿಸುತ್ತೀರಾ?: ಹಾಗಿದ್ರೆ ತಪ್ಪದೇ ಈ ಸ್ಟೋರಿ ಓದಿ
ಅಪರೂಪದ ಕಾರಿನ ಜೊತೆ ನಟ ಜಗ್ಗೇಶ್; ಅಪ್ಪನ ನೆನಪು ತರಿಸಿತು ಈ ವಾಹನ
Viral Video: ಜೆಸಿಬಿ ಏರಿ ಸವಾರಿ ಹೊರಟ ಜೋಡಿ; ನೆಟ್ಟಿಗರ ಮನಗೆದ್ದ ಈ ವಿಡಿಯೊ ನೋಡಿ
Published On - 3:37 pm, Sat, 2 October 21