Viral: ಪತ್ನಿಯ ಮೇಲಿನ ಕೋಪಕ್ಕೆ ತನಗೆ ತಾನೇ ಹೊಡೆದುಕೊಂಡ ಪತಿರಾಯ; ಪಾಕಿಸ್ತಾನದಲ್ಲಿ ಗಂಡ-ಹೆಂಡ್ತಿ ಹೇಗೆ ಜಗಳ ಆಡ್ತಾರೆ ನೋಡಿ

ಗಂಡ ಹೆಂಡ್ತಿ ಮಧ್ಯೆ ಜಗಳಗಳು ನಡೆದಾಗ, ಆ ಜಗಳ ಅತಿರೇಕಕ್ಕೆ ಹೋಗಿ ಗಂಡ ಹೆಂಡ್ತಿ ಮೇಲೆ ಕೈ ಮಾಡೋದು ಅಥವಾ ಪತ್ನಿ ಪತಿರಾಯನ ಮೇಲೆ ಕೈ ಮಾಡುವಂತಹ ಸುದ್ದಿಗಳ ಬಗ್ಗೆ ಆಗಾಗ್ಗೆ ಕೇಳುತ್ತಿರುತ್ತೇವೆ. ಆದ್ರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದ್ದು, ಪತ್ನಿಯ ಮೇಲಿನ ಕೋಪಕ್ಕೆ ಪತಿರಾಯ ತನಗೆ ತಾನೆ ಚಪ್ಪಲಿಯಲ್ಲಿ ಹೊಡೆದುಕೊಂಡಿದ್ದಾನೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದ್ದು, ಈ ದೃಶ್ಯ ಕಂಡು ನೆಟ್ಟಿಗರು ಶಾಕ್‌ ಆಗಿದ್ದಾರೆ.

Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Oct 21, 2024 | 11:33 AM

ಗಂಡ-ಹೆಂಡ್ತಿ ಅಂದ್ಮೇಲೆ ಸಣ್ಣಪುಟ್ಟ ಜಗಳಗಳು ಮನಸ್ತಾಪಗಳು ಏರ್ಪಡುವುದು ಸಾಮಾನ್ಯ. ಆದ್ರೆ ಕೆಲವೊಮ್ಮೆ ಈ ಜಗಳಗಳು ಅತಿರೇಕಕ್ಕೆ ಹೋಗಿ, ಪತಿ-ಪತ್ನಿ ಪರಸ್ಪರ ಕೈ ಮಿಲಾಯಿಸುತ್ತಾರೆ. ಹೀಗೆ ಪತಿ ಪತ್ನಿಯರ ನಡುವಿನ ಜಗಳಗಳಿಗೆ ಸಂಬಂಧಿಸಿದ ಕೆಲವೊಂದು ವಿಡಿಯೋಗಳು ಆಗಾಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಕಾಣಸಿಗುತ್ತವೆ. ಇದೀಗ ಅಂತಹದ್ದೇ ವಿಡಿಯೋವೊಂದು ವೈರಲ್‌ ಆಗಿದ್ದು, ಹೆಂಡ್ತಿ ಮೇಲಿನ ಕೋಪಕ್ಕೆ ಪತಿರಾಯ ಆಕೆಯ ಮೇಲೆ ಕೈ ಮಾಡದೆ ಬದಲಿಗೆ ತನ್ನ ತಲೆಗೆ ತಾನೇ ಚಪ್ಪಲಿಯಲ್ಲಿ ಹೊಡೆದುಕೊಂಡಿದ್ದಾನೆ. ಪತಿರಾಯನ ಈ ಸೈಕೋ ಅವತಾರವನ್ನು ವಿಡಿಯೋ ಮಾಡಿ ಆತನ ಪತ್ನಿ ಸೋಷಿಯಲ್‌ ಮೀಡಿಯಾದಲ್ಲಿ ಹರಿಬಿಟ್ಟಿದ್ದಾಳೆ. ಈ ದೃಶ್ಯ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಪತ್ನಿಯ ಮೇಲಿನ ಕೋಪಕ್ಕೆ ಚಪ್ಪಲಿಯಿಂದ ತನ್ನ ತಲೆಗೆ ತಾನೇ ಹೊಡೆದುಕೊಳ್ಳುತ್ತಿರುವಂತಹ ದೃಶ್ಯವನ್ನು ಕಾಣಬಹುದು. ಈ ಘಟನೆ ಪಾಕಿಸ್ತಾನದ್ದು ಎನ್ನಲಾಗಿದೆ. ಬೆಡ್‌ರೂಮ್‌ಗೆ ಬಂದ ತಕ್ಷಣ ನೆಮ್ಮದಿಯಾಗಿ ಮಲಗಲು ಕೂಡಾ ಬಿಡ್ತಿಲ್ಲ ಎಂದು ಬೇಸತ್ತ ಪತಿರಾಯ ಕೋಪದಲ್ಲಿ ತನ್ನ ತಲೆಗೆ ತಾನೇ ಹೊಡೆದುಕೊಂಡಿದ್ದಾನೆ. ಈತನ ಈ ಹುಚ್ಚಾಟವನ್ನು ಸಹಿಸಲಾರದೆ ನೋಡಿ ಇಂಥಾ ಸೈಕೋ ಜೊತೆ ಜೀವನ ನಡೆಸಬೇಕಾಗಿದೆ ಎನ್ನುತ್ತಾ ಆತನ ಪತ್ನಿ ವಿಡಿಯೋ ಮಾಡಿ ಸೋಷಿಯಲ್‌ ಮೀಡಿಯಾದಲ್ಲಿ ಹರಿಬಿಟ್ಟಿದ್ದಾಳೆ.

gharkekalesh ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಪತಿರಾಯ ಹೆಂಡ್ತಿ ಕೋಪಕ್ಕೆ ತನ್ನ ತಲೆಗೆ ತಾನೇ ಹೊಡೆದುಕೊಳ್ಳುತ್ತಿರುವಂತಹ ದೃಶ್ಯವನ್ನು ಕಾಣಬಹುದು. ಈತನ ಹುಚ್ಚಾಟವನ್ನು ತಾಳಲಾರದೆ ನೋಡಿ ಇಂತಹ ಸೈಕೋ ಜೊತೆ ಬಾಳಬೇಕಾದ ಪರಿಸ್ಥಿತಿ ಬಂದಿದೆ ಎಂದು ಪತ್ನಿ ತನ್ನ ಕಷ್ಟವನ್ನು ಹೇಳಿಕೊಂಡಿದ್ದಾಳೆ.

Viral Video: ಅಂಬೆಗಾಲು ಇಡುತ್ತಿರುವ ಕಂದಮ್ಮನಿಗೆ ಆಸರೆಯಾದ ಶ್ವಾನ, ವಿಡಿಯೋ ವೈರಲ್

ಅಕ್ಟೋಬರ್‌ 19 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಅಲ್ಲಾ ಇದು ಯಾವ ರೀತಿಯ ಜಗಳ ಮಾರ್ರೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಪಾಕಿಸ್ತಾನ ಯಾವಾಗಲೂ ತನ್ನ ವಿಲಕ್ಷಣತೆಯಿಂದ ನಮ್ಮನ್ನು ಬೆರೆಗುಗೊಳಿಸುತ್ತಿರುತ್ತದೆʼ ಎಂಬ ತಮಾಷೆಯ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಹೆಂಡ್ತಿ ಮೇಲಿನ ಕೋಪವನ್ನು ಈ ರೀತಿಯೂ ತೀರಿಸಿಕೊಳ್ಳಬಹುದೇʼ ಎಂದು ಕಾಮೆಂಟ್‌ ಮಾಡಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್