ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಕೆಲವೊಂದು ವಿಡಿಯೋಗಳು ಚರ್ಚೆಯನ್ನು ಹುಟ್ಟು ಹಾಕುತ್ತವೆ. ಇದೀಗ ಇಲ್ಲೊಂದು ಅಂತಹದ್ದೇ ಚರ್ಚಾಸ್ಪದ ವಿಡಿಯೋವೊಂದು ವೈರಲ್ ಆಗಿದ್ದು, ವ್ಯಕ್ತಿಯೊಬ್ಬ ನಾವು 8 ಜನ ಅಣ್ಣ ತಮ್ಮಂದಿರಿದ್ದು, ನಮ್ಗೆ ಒಬ್ಬರಿಗೆ 7 ರಿಂದ 8 ಮಕ್ಕಳಿದ್ದಾರೆ, ಆ ಮಕ್ಳನ್ನು ಸಾಕೋಕೆ ತುಂಬಾನೇ ಕಷ್ಟಪಡ್ತಿದ್ದೇವೆ. ಹೀಗಿರುವಾಗ ಸರ್ಕಾರ ಯಾಕೆ ನಮ್ಗೆ ಕೆಲಸ ಕೊಡ್ತಿಲ್ಲ ಎಂದು ರಿಪೋರ್ಟರ್ ಬಳಿ ತನ್ನ ಅಳಲನ್ನು ತೋಡಿಕೊಂಡಿದ್ದಾನೆ. ತರ್ಕವೇ ಇಲ್ಲದ ಈತನ ಮಾತನನ್ನು ಕೇಳಿ ನೆಟ್ಟಿಗರು ಫುಲ್ ಶಾಕ್ ಆಗಿದ್ದಾರೆ.
ಪತ್ರಕರ್ತೆ ಅದಿತಿ ತ್ಯಾಗಿ ಅವರು ಮುಸ್ಲಿಂ ವ್ಯಕ್ತಿಯೊಬ್ಬನ ಬಳಿ ಮಾತನಾಡುವಾಗ ಆತ ನಾವು 8 ಜನ ಅಣ್ಣ ತಮ್ಮಂದಿರು. ನಮಗೆ ಒಬ್ಬಬ್ಬರಿಗೆ 7 ರಿಂದ 8 ಮಕ್ಕಳಿದ್ದಾರೆ. ನನ್ಗೆ 2 ಹೆಣ್ಣು ಮತ್ತು 5 ಗಂಡು ಮಕ್ಕಳಿದ್ದಾರೆ. ಈ ಮಕ್ಕಳನ್ನು ತುಂಬಾ ಕಷ್ಟಪಟ್ಟು ಸಾಕುತ್ತಿದ್ದೇವೆ ಹೀಗಿರುವಾಗ ಸರ್ಕಾರ ಯಾಕೆ ನಮ್ಗೆ ಯಾಕೆ ಕೆಲಸ ಕೊಡ್ತಿಲ್ಲ ಎಂದು ಪ್ರಶ್ನೆ ಕೇಳಿದ್ದಾನೆ. ಈ ಕುರಿತ ವಿಡಿಯೋವನ್ನು ರಿಶಿ ಬಾಗ್ರೀ (rishibagree) ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, “ನಾವು 8 ಸಹೋದರರು ಮತ್ತು ಪ್ರತಿಯೊಬ್ಬ ಸಹೋದರನಿಗೂ 7-8 ಮಕ್ಕಳಿದ್ದಾರೆ. ಸರ್ಕಾರ ಯಾಕೆ ನಮಗೆ ಕೆಲಸ ಕೊಡುತ್ತಿಲ್ಲ???” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಪತ್ರಕರ್ತೆ ಅದಿತಿ ತ್ಯಾಗಿ ಅವರು ಕುಟುಂಬವೊಂದರ ಅಣ್ಣ ತಮ್ಮಂದಿರ ಬಳಿ ಮಾತನಾಡುತ್ತಿರುವ ದೃಶ್ಯವನ್ನು ಕಾಣಬಹುದು. ಅದರಲ್ಲಿದ್ದ ವ್ಯಕ್ತಿಯೊಬ್ಬ ನಾವು 8 ಜನ ಅಣ್ಣತಮ್ಮಂದಿರು. ನಮಗೆ ಒಬ್ಬರಿಗೆ 7-8 ಜನ ಮಕ್ಕಳಿದ್ದಾರೆ. ನನಗೆ ದಿನಕ್ಕೆ 300 ರೂ. ಸಂಬಳ, ಈ ಸಂಬಳದಲ್ಲಿ ಏಳು ಮಕ್ಕಳನ್ನು ಸಾಕಲು ಆಗುತ್ತಾ? ಹೀಗಿರುವಾಗ ಸರ್ಕಾರ ಯಾಕೆ ನಮ್ಗೆ ಕೆಲಸ ಕೊಡ್ತಿಲ್ಲ ಎಂದು ಕೇಳಿದ್ದಾನೆ.
ಇದನ್ನೂ ಓದಿ: ನನ್ನ ಬಿಟ್ಟೋಗ್ಬೇಡಾ, ನಾನು ಬರ್ತೀನಿ ಅಮ್ಮಾ… ಮಾಲೀಕರೊಂದಿಗೆ ಬಸ್ ಏರಿದ ಶ್ವಾನ
ನವೆಂಬರ್ 9 ರಂದು ಹಂಚಿಕೊಳ್ಳಲಾದ ಈ ವಿಡಿಯೋ 5.4 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಮೊದಲು ಅಷ್ಟು ಮಕ್ಕಳನ್ನು ಹೆರುವುದನ್ನು ನಿಲ್ಲಿಸಿʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಮಕ್ಕಳನ್ನು ಹೆತ್ತ ಮಾತ್ರಕ್ಕೆ ಕೆಲಸ ಸಿಗುವುದಿಲ್ಲ, ಕೆಲಸ ಮಾಡಲು ಸಮರ್ಥರಾಗಿರುವುದು ಕೂಡಾ ತುಂಬಾನೇ ಮುಖ್ಯʼ ಎಂದಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ