Video: ರಸ್ತೆ ಬದಿ ಕ್ಯಾಂಡಲ್ ಮಾರಿ ಜೀವನ ಸಾಗಿಸುವ ವೃದ್ಧೆಗೆ ನೆರವಾದ ವ್ಯಕ್ತಿ

ಬದುಕು ಎಲ್ಲರದ್ದೂ ಒಂದೇ ಆಗಿರುವುದಿಲ್ಲ. ಕೆಲವರದ್ದು ತಮ್ಮ ಇಳಿ ವಯಸ್ಸಿನಲ್ಲೂ ದುಡಿದು ತಿನ್ನುವ ಪರಿಸ್ಥಿತಿ. ಈ ಅಜ್ಜಿಯದ್ದು ಇದೇ ರೀತಿಯ ಬದುಕು. ರಸ್ತೆ ಬದಿಯಲ್ಲಿ ನಿಂತು ಕ್ಯಾಂಡಲ್ ಮಾರುತ್ತಿದ್ದ ಅಜ್ಜಿಗೆ ವ್ಯಕ್ತಿಯೊಬ್ಬರು ಸಹಾಯ ಮಾಡಿ ಹೃದಯ ಶ್ರೀಮಂತಿಕೆ ಮೆರೆದಿದ್ದಾರೆ. ಈ ಹೃದಯಸ್ಪರ್ಶಿ ವಿಡಿಯೋ ಸದ್ಯ ವೈರಲ್ ಆಗಿದ್ದು, ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ರಸ್ತೆ ಬದಿ ಕ್ಯಾಂಡಲ್ ಮಾರಿ ಜೀವನ ಸಾಗಿಸುವ ವೃದ್ಧೆಗೆ ನೆರವಾದ ವ್ಯಕ್ತಿ
ವೈರಲ್‌ ವಿಡಿಯೋ
Image Credit source: Instagram

Updated on: Nov 29, 2026 | 4:54 PM

ಇಳಿ ವಯಸ್ಸಿನಲ್ಲಿ ಮೂರು ಹೊತ್ತಿನ ತುತ್ತಿಗಾಗಿ ಕಷ್ಟ ಪಡುವ ಹಿರಿಜೀವಗಳನ್ನು ಕಂಡಾಗ ಕಣ್ಣಂಚಲಿ ನೀರು ಜಿನುಗುತ್ತದೆ. ಬಂದ ಅಲ್ಪ ಸ್ವಲ್ಪ ಹಣದಲ್ಲಿ ಜೀವನ ಸಾಗಿಸುತ್ತಾರೆ. ಆದರೆ ಇಲ್ಲೊಬ್ಬರು ವ್ಯಕ್ತಿ, ವೃದ್ಧೆಯ (old woman) ಸ್ವಂತ ದುಡಿಮೆಗೆ ಸಹಾಯ ಮಾಡಿದ್ದಾರೆ. ಊಟ ಕೊಡಿಸಿ, ಕೈಗೆ ಒಂದಿಷ್ಟು ಹಣ ಇಟ್ಟು ತನ್ನ ಕೈಲಾದಷ್ಟು ಸಹಾಯ ಮಾಡಿದ್ದಾರೆ. ಈ ವ್ಯಕ್ತಿಯ ಒಳ್ಳೆತನಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.

ವೃದ್ಧೆ ಮಹಿಳೆಗೆ ಸಹಾಯ ಮಾಡಿದ ವ್ಯಕ್ತಿ

ಹುಸೇನ್ ಮನ್ಸೂರಿ (Hussain Mansuri) ಎಂಬ ವ್ಯಕ್ತಿ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಈ ಕ್ಲಿಪಿಂಗ್ ನಲ್ಲಿ ವೃದ್ಧೆಯೊಬ್ಬಳು ರಸ್ತೆ ಬದಿಯಲ್ಲಿ ನಿಂತು ಅತ್ತಿಂದ ಇತ್ತ ಹೋಗುತ್ತಿದ್ದ ಜನರ ಬಳಿ ಕ್ಯಾಂಡಲ್ ಬೇಕಾ ಎಂದು ಕೇಳುತ್ತಾಳೆ. ಯಾರು ಕೂಡ ಆಕೆಯ ಬಳಿ ಖರೀದಿಸದೇ ಇದ್ದರೂ ಆಕೆಯ ಉತ್ಸಾಹವೇನು ಕಡಿಮೆಯಾಗಿಲ್ಲ. ಈ ವೃದ್ಧೆಯನ್ನು ನೋಡುತ್ತಾ ನಿಂತಿದ್ದ ಈ ವ್ಯಕ್ತಿ ಆಕೆಯನ್ನು ಹಿಂದೆಯಿಂದ ಪ್ರೀತಿಯಿಂದ ಅಪ್ಪಿಕೊಂಡಿದ್ದಾರೆ. ಆ ಬಳಿಕ ಆಕೆಗೆ ಊಟ ಕೊಡಿಸಿದ್ದು, ಪರಸ್ಪರ ಇಬ್ಬರೂ ಕೈ ತುತ್ತು ತಿನ್ನಿಸಿಕೊಂಡಿದ್ದಾರೆ. ಕೊನೆಗೆ ಈ ವ್ಯಕ್ತಿ ವೃದ್ಧೆಯ ಕೈಗೆ ಒಂದಿಷ್ಟು ಬಿಡಿಗಾಸು ಇಟ್ಟು ಸಹಾಯ ಮಾಡಿದ್ದಾನೆ. ವ್ಯಕ್ತಿಯ ಒಳ್ಳೆತನಕ್ಕೆ ಭಾವುಕಳಾದ ಅಜ್ಜಿ ಆತನ ಕೈಗೆ ಮುತ್ತನ್ನಿಟ್ಟು, ಬಾಚಿ ತಪ್ಪಿಕೊಂಡಿದ್ದಾಳೆ.

Loading...

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ವಿದೇಶದಿಂದ ಬಂದು ಅಜ್ಜಿಗೆ ಸರ್ಪ್ರೈಸ್ ಕೊಟ್ಟ ಮೊಮ್ಮಗಳು, ಕಣ್ಣೀರು ಹಾಕಿದ ವೃದ್ಧೆ

ಈ ವಿಡಿಯೋ 1.5 ಮಿಲಿಯನ್ ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಕಣ್ಣು ತುಂಬಿ ಬಂತು ಎಂದಿದ್ದಾರೆ. ಇನ್ನೊಬ್ಬರು, ಇತರರ ಕಷ್ಟಕ್ಕೆ ಮಿಡಿಯುವ ನಿಮ್ಗೆ ಯಾವತ್ತಿದ್ರೂ ಒಳ್ಳೆಯದೇ ಆಗಲಿ ಎಂದು ಹೇಳಿದ್ದಾರೆ. ಮತ್ತೊಬ್ಬರು, ಹುಸೇನ್ ಸರ್ ನಿಮ್ಮ ಬಗ್ಗೆ ತುಂಬಾ ಗೌರವ ಇದೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us