Viral: ಈ ಮ್ಯಾಗಿಗೆ ರೂ 193 ಕೊಡಬೇಕಾ? ವೈರಲ್ ಆದ ಟ್ವೀಟ್​

|

Updated on: Jul 17, 2023 | 6:22 PM

Airport : ವಿಮಾನ ನಿಲ್ದಾಣದಲ್ಲಿ ಒಂದು ಪ್ಲೇಟ್ ಮ್ಯಾಗಿಯ ಬೆಲೆ ರೂ193. ಈ ಬಿಲ್​ ನೋಡಿದ ಜನ ಏನು ಹೇಳುತ್ತಿದ್ದಾರೆ? ಯಾಕೆ ತಿಂಡಿತಿನಿಸುಗಳು ಪಿವಿಆರ್​, ವಿಮಾನ ನಿಲ್ದಾಣಗಳಲ್ಲಿ ಇಷ್ಟೊಂದು ತುಟ್ಟಿ?

Viral: ಈ ಮ್ಯಾಗಿಗೆ ರೂ 193 ಕೊಡಬೇಕಾ? ವೈರಲ್ ಆದ ಟ್ವೀಟ್​
ಸೌಜನ್ಯ : ಅಂತರ್ಜಾಲ
Follow us on

Maggi : ಪಿವಿಆರ್ (PVR) ಮತ್ತು ವಿಮಾನ ನಿಲ್ದಾಣಗಳ ಮಳಿಗೆಗಳಲ್ಲಿರುವ ತಿಂಡಿತಿನಿಸು ಮತ್ತು ಪೇಯಗಳ ಗುಣಮಟ್ಟ, ಬೆಲೆಯ ಕುರಿತು ಆಗಾಗ ನೆಟ್ಟಿಗರು ತಮ್ಮ ಬೇಸರ, ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿರುತ್ತಾರೆ. ಈಗ ವೈರಲ್ ಆಗಿರುವ ಈ ಟ್ವೀಟ್ ವಿಮಾನ ನಿಲ್ದಾಣಗಳಲ್ಲಿಯ ತಿಂಡಿತಿನಿಸುಗಳ ಬೆಲೆ ಏರಿದೆ ಎಂಬುದನ್ನು ಸೂಚಿಸುತ್ತಿದೆ. ಒಂದು ಪ್ಲೇಟ್ ಮ್ಯಾಗಿಗೆ ರೂ. 193 ಎಂದು ಇದರ ಬಿಲ್​ ಹೇಳುತ್ತಿದೆ. ಅಂತಾರಾಷ್ಟ್ರೀಯ ಮಟ್ಟದ ಭಾಷಣಕಾರ್ತಿ ಮತ್ತು ಯೂಟ್ಯೂಬರ್ ಆಗಿರುವ ಸೇಜಲ್​ ಸೂದ್​ ಈ ಟ್ವೀಟ್ ಮಾಡಿದ್ದಾರೆ.

ನಾನು ಈಗಷ್ಟೇ ರೂ. 193ಕ್ಕೆ ಒಂದು ಪ್ಲೇಟ್ ಮ್ಯಾಗಿಯನ್ನು ವಿಮಾನ ನಿಲ್ದಾಣದಲ್ಲಿ ಖರೀದಿಸಿದೆ. ಇದರ ಬೆಲೆ ನೋಡಿ ಏನು ಹೇಳಬೇಕು ಗೊತ್ತಾಗುತ್ತಿಲ್ಲ. ಮ್ಯಾಗಿಯಂಥ ಖಾದ್ಯಕ್ಕೆ ಇಷ್ಟೊಂದು ಬೆಲೆ ಏರಿಸಿ ಮಾರಾಟ ಮಾಡುವುದಾದರೂ ಏಕೆ? ಎಂದು ಅವರು ಬಿಲ್​ ಲಗತ್ತಿಸಿ ಕೇಳಿದ್ದಾರೆ. ನಿನ್ನೆಯಷ್ಟೇ ಮಾಡಲಾದ ಈ ಟ್ವೀಟ್ ಅನ್ನು ಈತನಕ 2ಮಿಲಿಯನ್​ಗಿಂತಲೂ ಹೆಚ್ಚು ಜನ ನೋಡಿದ್ದಾರೆ. 5,000ಕ್ಕಿಂತಲೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. ಸುಮಾರು 500 ಜನರು ರೀಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ : Viral: ಧಾರವಾಡ ಪೇಡಾ; ಮುತ್ತಿನಂತೆ, ಒಂದು ಇನ್ನೊಂದು ಮತ್ತೊಂದಕ್ಕಾಗಿ ಹಾತೊರೆಯುತ್ತೀರಿ

ಇಂಡಿಗೋದಲ್ಲಿ ಇದು ರೂ. 250ಕ್ಕೆ ಸಿಗುತ್ತಿದೆ. ನನಗನಿಸಿದಂತೆ ಈ ಮ್ಯಾಗಿಯನ್ನು ವಿಮಾನಕ್ಕೆ ಬಳಸುವ ಇಂಧನದಿಂದ ತಯಾರಿಸಲಾಗುತ್ತದೆ. ಮ್ಯಾಗಿಗೆ ರೂ. 50 ಖರ್ಚಾಗುತ್ತದೆ. ಆದರೆ ಇದನ್ನು ವಿಮಾನ ನಿಲ್ದಾಣದಲ್ಲಿ ಮಾರಾಟ ಮಾಡಲು ಸಾಕಷ್ಟು ಖರ್ಚಾಗುತ್ತದೆ. ಏಕೆಂದರೆ ಮ್ಯಾಗಿ ಮಾರಾಟ ಮಳಿಗೆ ಮತ್ತು ಬಾಣಸಿಗರ ನಿರ್ವಹಣೆಗಾಗಿ ಆದಾಯದ ಹಣವನ್ನು ವಿನಿಯೋಗಿಸಲಾಗುತ್ತದೆ… ಅಂತೆಲ್ಲ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ : Viral Video: ಥಟ್​ ಅಂತ ಹೇಳಿ! ಇವರನ್ನು ಹೀಗೆ ಬೇಸರಗೊಳಿಸಿದ್ದು ಯಾರು?    

ಇದೇ ರೀತಿ ಪಿವಿಆರ್​ ಮತ್ತು ದೊಡ್ಡ ದೊಡ್ಡ ಹೋಟೆಲ್​, ರೆಸ್ಟೋರೆಂಟ್​ಗಳಲ್ಲಿಯೂ ಆದಾಯದ ಹಣದಿಂದಲೇ ಸಿಬ್ಬಂದಿ ಮತ್ತಿತರೇ ವೆಚ್ಚವನ್ನು ನೀಗಿಸಲಾಗುತ್ತದೆ ಎಂದು ಇನ್ನೊಬ್ಬರು ಹೇಳಿದ್ದಾರೆ. ವಿಮಾನ ನಿಲ್ದಾಣಕ್ಕೆ ಹೋಗುವಾಗ ನೀವು ಮನೆಯಿಂದಲೇ ತಿಂಡಿ ಕಟ್ಟಿಕೊಂಡು ಹೋಗಿ ಎಂದಿದ್ದಾರೆ ಒಬ್ಬರು.

ನೀವೇನಂತೀರಿ?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ