ಈ ಕೆಲವು ಪ್ರೇಮಿಗಳು ತೋರುವ ಹುಚ್ಚಾಟಗಳು ಅಷ್ಟಿಷ್ಟಲ್ಲ. ತಾವು ಎಲ್ಲಿ ಇದ್ದೇವೆ ಎಂಬುದನ್ನೂ ಕೂಡಾ ಮರೆತು ಸಾರ್ವಜನಿಕ ಸ್ಥಳಗಳಲ್ಲಿ ಕಿಸ್ಸಿಂಗ್, ರೊಮ್ಯಾನ್ಸ್ ಮಾಡುತ್ತಾ ಇತರರಿಗೆ ಮುಜುಗರ ಉಂಟುಮಾಡುತ್ತಿರುತ್ತಾರೆ. ಹೌದು ಮೆಟ್ರೋ, ರೈಲು, ಬಸ್ ಇತ್ಯಾದಿ ಸಾರ್ವಜನಿಕರು ಪ್ರಯಾಣಿಸುವಂತಹ ಸ್ಥಳಗಳಲ್ಲಿ ಪ್ರೇಮಿಗಳು ರಾಜಾರೋಷವಾಗಿ ರೊಮ್ಯಾನ್ಸ್ ಮಾಡಿದಂತಹ ಅಸಹ್ಯಕರ ಘಟನೆಗಳ ಸುದ್ದಿಗಳು ಈ ಹಿಂದೆಯೂ ವೈರಲ್ ಆಗಿದ್ದವು. ಇದೀಗ ಅಂತಹದೇ ಘಟನೆಯೊಂದು ನಡೆದಿದ್ದು, ಪಾರ್ಕ್ ಗೆ ಬಂದ ಪ್ರೇಮಿಗಳಿಬ್ಬರು ಪೊದೆಯಲ್ಲಿ ಕುಳಿತು ರೊಮ್ಯಾನ್ಸ್ ಮಾಡುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಪಾರ್ಕ್, ಬಸ್ಸ್ಟಾಂಡ್ ಇತ್ಯಾದಿ ಸಾರ್ವಜನಿಕ ಸ್ಥಳಗಳಲ್ಲಿ ರೊಮ್ಯಾನ್ಸ್ ಮಾಡಿ ಪ್ರೇಮಿಗಳು ಸಿಕ್ಕಿಬಿದ್ದು ಸಾರ್ವಜನಿಕರ ಕೈಯಿಂದ ಬೈಗುಳ ತಿಂದ ಘಟನೆಗಳು ಈ ಹಿಂದೆಯೂ ನಡೆದಿವೆ. ಇದೀಗ ಇಲ್ಲೊಂದು ಪ್ರೇಮಿಗಳು ಕೂಡಾ ಪಾರ್ಕ್ ನಲ್ಲಿ ಪೊದೆಯಲ್ಲಿ ರೋಮ್ಯಾನ್ಸ್ ಮಾಡಲು ಹೋಗಿ ಸಿಕ್ಕಿಬಿದ್ದಿದ್ದಾರೆ.
ಠಾಕೂರ್ ಮಾನ್ ಸಿಂಗ್ (thakur_maan_singh_20k) ಎಂಬವರು ಈ ಕುರಿತ ಪೋಸ್ಟ್ ಒಂದನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಸಹೋದರ, ನೀವು ಯಾವ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೀರಿ ???” ಎಂಬ ತಮಾಷೆಯ ಶೀರ್ಷಿಕೆ ಬರೆದುಕೊಂಡಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
ವೈರಲ್ ವಿಡಿಯೋದಲ್ಲಿ ಪಾರ್ಕ್ ಒಂದರಲ್ಲಿ ಪ್ರೇಮಿಗಳಿಬ್ಬರು ಪೊದೆಯಲ್ಲಿ ಅಡಗಿ ಕುಳಿತು ರೊಮ್ಯಾನ್ಸ್ ಮಾಡುವಾಗ ದೃಶ್ಯವನ್ನು ಕಾಣಬಹುದು. ಇವರು ಸರಸ ಸಲ್ಲಾಪದಲ್ಲಿ ತೊಡಗಿರುವುದನ್ನು ಯಾರೋ ವಿಡಿಯೋ ಮಾಡಿದ್ದಾರೆ. ಇದರಿಂದ ಕೋಪಗೊಂಡ ಪ್ರೇಮಿಗಳು ಯಾಕೆ ವಿಡಿಯೋ ಮಾಡಿದ್ದು ಎಂದು ಆ ವ್ಯಕ್ತಿಯನ್ನು ದಬಾಯಿಸಿದ್ದಾರೆ.
ಇದನ್ನೂ ಓದಿ: ಪತಿಗೆ ಅನಾರೋಗ್ಯ ಜೀವನಕ್ಕೆ ಏನಾದರೂ ಮಾಡಬೇಕಲ್ಲ, ಕ್ಯಾಬ್ ಓಡಿಸಲು ಶುರು ಮಾಡಿದ ಮಹಿಳೆ
ಆಗಸ್ಟ್ 8 ರಂದು ಹಂಚಿಕೊಳ್ಳಲಾದ ಈ ವಿಡಿಯೋ 6.9 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರು ‘ನೀವು ವಿಡಿಯೋ ಮಾಡಿದ್ದು ತಪ್ಪು, ಯಾರೇ ಆಗಿರಲಿ ಇನ್ನೊಬ್ಬರ ಗೌಪ್ಯತೆಯಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ’ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ‘ಈ ರೀತಿ ಬೇರೆಯವರ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಾಕುವುದು ತುಂಬಾ ತಪ್ಪು’ ಎಂದು ಹೇಳಿದ್ದಾರೆ. ಇನ್ನೂ ಅನೇಕರು ಸಾರ್ವಜನಿಕರು ಓಡಾಡುವ ಸ್ಥಳದಲ್ಲಿ ಇದೆಂತಾ ಅಸಹ್ಯ ಎಂದು ಹೇಳಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ