Viral Video: ಹಾಡಹಗಲೇ ಯುವಕನ ಹತ್ಯೆಗೆ ಯತ್ನ; ಮಗನ ಪ್ರಾಣ ಉಳಿಸಿದ ತಾಯಿ
ವಿಡಿಯೋದಲ್ಲಿ ಒಬ್ಬ ವ್ಯಕ್ತಿ ತನ್ನ ಸ್ಕೂಟರ್‌ನಲ್ಲಿ ರಸ್ತೆಬದಿಯಲ್ಲಿ ಕುಳಿತು ತನ್ನ ತಾಯಿಯೊಂದಿಗೆ ಮಾತನಾಡುತ್ತಿರುವುದನ್ನು ಕಾಣಬಹುದು. ಸ್ವಲ್ಪ ಸಮಯದ ನಂತರ, ಮೂವರು ಸ್ಕೂಟರ್‌ನಲ್ಲಿ ಬಂದು ಅವನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದು, ತಕ್ಷಣ ತಾಯಿ ತನ್ನ ಮಗನ ರಕ್ಷಣೆಗೆ ಧಾವಿಸಿದ್ದಾಳೆ.
ಮಹಾರಾಷ್ಟ್ರ: ಹಾಡಹಗಲೇ ಮಾರಕಾಸ್ತ್ರಗಳೊಂದಿಗೆ ಬಂದ ನಾಲ್ವರು ರಸ್ತೆ ಬದಿ ನಿಂತಿದ್ದ ಯುವಕನ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ಅಲ್ಲೇ ಪಕ್ಕದಲ್ಲಿ ನಿಂತಿದ್ದ ಯುವಕನ ತಾಯಿ ತನ್ನ ಪ್ರಾಣವನ್ನು ಲೆಕ್ಕಿಸದೇ ಮಗನ ರಕ್ಷಣೆಗೆ ಮುಂದಾಗಿದ್ದಾಳೆ. ಘಟನೆಗೆ ಸಂಬಂಧಿಸಿದ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ತಾಯಿಯ ಧೈರ್ಯ ಹಾಗೂ ಸಾಹಸಕ್ಕೆ ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಈ ಘಟನೆ ಕೊಲ್ಲಾಪುರದ ಜಯಸಿಂಗ್‌ಪುರ ಪ್ರದೇಶದಲ್ಲಿ ಆಗಸ್ಟ್ 18ರಂದು ಮಧ್ಯಾಹ್ನ 1:30ರ ಸುಮಾರಿಗೆ ಈ ಘಟನೆ ನಡೆದಿದೆ.
ಘಟನೆಗೆ ಸಂಬಂಧಿಸಿದ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳಲಾಗಿದೆ. ಆಗಸ್ಟ್ 19ರಂದು @gharkekalesh ಎಂಬ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಈ ವಿಡಿಯೋ ಒಂದೇ ದಿನದಲ್ಲಿ 1ಮಿಲಿಯನ್ ಅಂದರೆ 10ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ.
ವಿಡಿಯೋ ಇಲ್ಲಿದೆ ನೋಡಿ:
A Man attacked the son, the mother ran after him with a stone in her hand, Mother chased away the goon for her son while risking her Own Life🫡, Kolhapur Maharashtra pic.twitter.com/9DPnKNA3gC
— Ghar Ke Kalesh (@gharkekalesh) August 19, 2024
ಇದನ್ನೂ ಓದಿ: ಪ್ರಯಾಣಿಕರ ಮುಂದೆಯೇ ಮೆಟ್ರೋದಲ್ಲಿ ಕಿಸ್ ಮಾಡ್ಕೊಂಡು ಪ್ರಯಾಣಿಸಿದ ಜೋಡಿ
ವೈರಲ್ ಆಗಿರುವ ವಿಡಿಯೋದಲ್ಲಿ ಒಬ್ಬ ವ್ಯಕ್ತಿ ತನ್ನ ಸ್ಕೂಟರ್‌ನಲ್ಲಿ ರಸ್ತೆಬದಿಯಲ್ಲಿ ಕುಳಿತು ತನ್ನ ತಾಯಿಯೊಂದಿಗೆ ಮಾತನಾಡುತ್ತಿರುವುದನ್ನು ಕಾಣಬಹುದು. ಸ್ವಲ್ಪ ಸಮಯದ ನಂತರ, ಮೂವರು ವ್ಯಕ್ತಿಗಳು ಸ್ಕೂಟರ್‌ನಲ್ಲಿ ಬಂದು ಅವನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದು, ವ್ಯಕ್ತಿ ಸ್ವಲ್ಪದರಲ್ಲೇ ಪಾರಾಗಿದ್ದಾನೆ. ಅಲ್ಲೇ ಇದ್ದ ಯುವಕನ ತಾಯಿ ತಕ್ಷಣ ದಾಳಿಕೋರರ ಮೇಲೆ ಎಸೆಯಲು ಕಲ್ಲು ಎತ್ತಿಕೊಂಡಿರುವುದು ಹಾಗೂ ಶೀಘ್ರದಲ್ಲೇ, ಆಕೆಯ ಮಗ ಕೂಡ ಸೇರಿಕೊಂಡು, ದಾಳಿಕೋರರನ್ನು ಓಡಿಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:34 pm, Tue, 20 August 24