Viral Video: ಬಸ್ಸಿನಲ್ಲಿ ಬಿಸಿಬಿಸಿ ಕಜ್ಜಾಯ ತಿಂದ ಪೋಲಿ; ಮಂಡ್ಯದ ಮಹಿಳೆಗೆ ಭಲೇ ಎಂದ ನೆಟ್ಟಿಗರು

Mandya : ಮಂಡ್ಯದ ಕೆ. ಆರ್. ಪೇಟೆ ಬಸ್​ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಅನುಚಿತವಾಗಿ ವರ್ತಿಸಿದವನಿಗೆ ತಕ್ಕ ಶಾಸ್ತಿ ಮಾಡಲು ಈಕೆ ಕೇಳಿಕೊಂಡರೂ ಸಹಪ್ರಯಾಣಿಕರು ಮೂಕಪ್ರೇಕ್ಷಕರಂತಿದ್ದುದು ಹೇಯಕರ ಸಂಗತಿ. ನೋಡಿ ವಿಡಿಯೋ.

Viral Video: ಬಸ್ಸಿನಲ್ಲಿ ಬಿಸಿಬಿಸಿ ಕಜ್ಜಾಯ ತಿಂದ ಪೋಲಿ; ಮಂಡ್ಯದ ಮಹಿಳೆಗೆ ಭಲೇ ಎಂದ ನೆಟ್ಟಿಗರು
ಅನುಚಿತವಾಗಿ ವರ್ತಿಸಿದ್ದಕ್ಕೆ ಬಸ್ಸಿನಲ್ಲಿಯೇ ಥಳಿಸುತ್ತಿರುವ ಮಂಡ್ಯದ ಮಹಿಳೆ
Edited By:

Updated on: Jun 05, 2023 | 11:56 AM

Mandya : ಬಾಯಿಮಾತಿನಲ್ಲಿ ಹೇಳಿದರೂ ತಿಳಿದುಕೊಳ್ಳದೇ ಇದ್ಧಾಗ ಏನು ಮಾಡಲು ಸಾಧ್ಯ? ಹೆಣ್ಣುಮಕ್ಕಳನ್ನು ಹೀಗೆ ಗೋಳು ಹುಯ್ದುಕೊಳ್ಳುವುದು, ಛೇಡಿಸುವುದು (Eve Teasing), ಲೈಂಗಿಕವಾಗಿ ಶೋಷಿಸುವುದು ಮತ್ತು ಅಸಭ್ಯವಾಗಿ ವರ್ತಿಸುವುದು ನಮ್ಮ ಜನ್ಮ ಸಿದ್ಧ ಹಕ್ಕು ಎಂಬಂತಿರುವ ಕೆಲ ‘ಗಂಡಸರಿಗೆ’ ಹೀಗೆ ಸಾರ್ವಜನಿಕ ಸ್ಥಳಗಳಲ್ಲಿ ಧರ್ಮದೇಟು ನೀಡುವಂಥ ಅನಿವಾರ್ಯ ಕರ್ಮಕ್ಕೆ ಮಹಿಳೆಯರು ತೊಡಗಬೇಕಾಗುತ್ತದೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ಮಂಡ್ಯದ ಕೆ.ಆರ್. ಪೇಟೆಯ ಬಸ್​ ಸ್ಟ್ಯಾಂಡಿನ ಬಸ್ಸಿನೊಳಗೆ ನಡೆದಿದ್ದು.

ನಿನಗೆ ಅಕ್ಕ ತಂಗಿ ಅವ್ವ ಯಾರೂ ಇಲ್ವೇನೋ ಅವರಿಗೆ ಹೀಗೇ ಮಾಡ್ತಿದ್ದ್ಯಾ? ಹೇಳಿದೆ ತಾನೆ ಹೀಗೆ ಮಾಡಬೇಡ ಅಂತ, ಹಿಡ್ಕೊಳ್ಳಿ ಅವನನ್ನ ನಿಮ್ಮನೆ ಹೆಣ್ಣಮಕ್ಕಳಿಗೆ ಹೀಗಾಗಿದ್ದರೆ ಸುಮ್ಮನೇ ಬಿಡ್ರಿದ್ರಾ? ಹೀಗೆಂದು ಕಾಲರ್​ ಪಟ್ಟಿ ಹಿಡಿದು ಒಂದೇ ಸಮ ಕಪಾಳಿಗೆ ಹೊಡೆದಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

ಇದನ್ನೂ ಓದಿ : Viral: ನಾನಿದನ್ನು ಪ್ರೀತಿಸುತ್ತಿದ್ದೇನೆ ಎಂದ ಭಾರತದ ಹೊಸ ಕಾಲ್ಪನಿಕ ಕ್ಯೂಟ್ ಅಳಿಯ ಮಸ್ಕ್

ಛೇಡಿಸುತ್ತ ಈಕೆಯನ್ನು ಸ್ಪರ್ಶಿಸಲು ನೋಡಿದಾಗ ಈಕೆ ಎಚ್ಚರಿಕೆ ನೀಡಿದ್ದಾರೆ. ಆದಾಗ್ಯೂ ಆತ ಮುಂದುವರಿದಾಗ ಬಸ್ಸಿನೊಳಗೇ ಏಟು ಕೊಟ್ಟಿದ್ದಾರೆ. ಆದರೆ ಸಹಪ್ರಯಾಣಿಕರು ಮೂಕಪ್ರೇಕ್ಷಕರಂತೆ ಇದ್ದಿದ್ದು ಮತ್ತು ಆಕೆ ಸಹಾಯ ಕೇಳಿದರೂ ಯಾರೂ ಸ್ಪಂದಿಸದೇ ಇದ್ದದ್ದು ಖೇದನೀಯ. ಕೆಳಗಿಳಿದಾಗ ಒಂದಿಬ್ಬರು ಈತನನ್ನು ಹಿಡಿದುಕೊಳ್ಳುವ ನಾಟಕ ಮಾಡಿದರೇನೋ ಎನ್ನಿಸುತ್ತದೆ. ನಂತರ ಈತ ತಪ್ಪಿಸಿಕೊಂಡು ಹೋಗುತ್ತಾನೆ.

ಇದನ್ನೂ ಓದಿ : Viral Video: ಇಡೀ ಕಲ್ಲಂಗಡಿಯನ್ನು ಕರಿದ ಭೂಪ; ತಲೆ ಕೆರೆದುಕೊಳ್ಳುತ್ತಿರುವ ನೆಟ್​ಮಂದಿ

ಧೈರ್ಯವಂತೆ, ತಕ್ಕ ಶಾಸ್ತಿ ಮಾಡಿದ್ದಾರೆ. ಮೌನದಲ್ಲಿಯೇ ಇಂಥದೆಲ್ಲವನ್ನೂ ಸಹಿಸಿಕೊಂಡು ಜನ್ಮಪೂರ್ತಿ ನರಳುತ್ತಿರುವ ಅದೆಷ್ಟು ಹೆಣ್ಣುಮಕ್ಕಳು ನಮ್ಮ ನಡುವಿಲ್ಲ? ನೆಟ್ಟಿಗರೆಲ್ಲ ಈಕೆಗೆ ಶಭಾಷ್​ ಎನ್ನುತ್ತಿದ್ದಾರೆ. ಬಸ್ ಕಂಡಕ್ಟರ್​ ಮತ್ತು ಸಾರ್ವಜನಿಕರು ಸಹಾಯ ಮಾಡದೇ ಇದ್ದುದನ್ನು ಶಪಿಸುತ್ತಿದ್ದಾರೆ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ 

 

Published On - 11:11 am, Mon, 5 June 23