Video: ಮರಿ ಹಕ್ಕಿಗಳಿಗೆ ಕೈ ತುತ್ತು ನೀಡಿ ಹಸಿವು ನೀಗಿಸಿದ ಮಹಿಳೆ

ಸೋಶಿಯಲ್ ಮೀಡಿಯಾದಲ್ಲಿ ಹೃದಯ ಸ್ಪರ್ಶಿ ದೃಶ್ಯಗಳು ನೆಟ್ಟಿಗರ ಗಮನ ಸೆಳೆಯುವುದು ಮಾಮೂಲಿ. ಇದೀಗ ಅಂತಹದ್ದೇ ಹೈದರ ಸ್ಪರ್ಶಿ ದೃಶ್ಯ ವೈರಲ್‌ ಆಗಿದೆ. ಹೌದು, ಮಹಿಳೆಯೊಬ್ಬಳು ಮರಿ ಹಕ್ಕಿಗಳಿಗೆ ಕೈ ತುತ್ತು ನೀಡಿ ಅವುಗಳ ಹಸಿವು ನೀಗಿಸುವ ಪ್ರಯತ್ನ ಮಾಡಿದ್ದಾಳೆ. ಈ ಮಹಿಳೆಯ ಒಳ್ಳೆಯ ಕೆಲಸಕ್ಕೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಮರಿ ಹಕ್ಕಿಗಳಿಗೆ ಕೈ ತುತ್ತು ನೀಡಿ ಹಸಿವು ನೀಗಿಸಿದ ಮಹಿಳೆ
ವೈರಲ್ ವಿಡಿಯೋ
Image Credit source: Instagram

Updated on: Jul 24, 2026 | 1:16 PM

ತಾಯಿಯ (mother) ಹೃದಯವೇ ಹಾಗೆ, ತನ್ನ ಮಕ್ಕಳು ಹಸಿವು ಎಂದಾಗ ತನ್ನ ಕರುಳು ಚುರ್ ಎನ್ನುತ್ತೆ. ಹೌದು,  ತನ್ನ ಕಂದಮ್ಮಗಳ ಹಸಿವು ಮಾತ್ರ ಮನೆಯಲ್ಲಿರುವ ಮೂಕ ಪ್ರಾಣಿಗಳ ಹಸಿವನ್ನು ಅರ್ಥ ಮಾಡಿಕೊಳ್ಳುವ ತಾಕತ್ತು ಹೆಂಗರುಳಿಗಿದೆ. ಇದೀಗ ಮಹಿಳೆಯೊಬ್ಬಳು ಮಾಡಿದ ಕೆಲಸ ನೆಟ್ಟಿಗರ ಮೆಚ್ಚುಗೆ ವ್ಯಕ್ತವಾಗಿದೆ. ಹಸಿವಿನಿಂದ ಒದ್ದಾಡುತ್ತಿದ್ದ ಮರಿಹಕ್ಕಿಗಳಿಗೆ ಕೈ ತುತ್ತು ನೀಡಿದ ಮಹಿಳೆಯ ವಿಡಿಯೋ ಸದ್ಯ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ಇಂಡಿಯನ್ ವಿಬ್ರಾನ್ಸ್ (indian vibrance) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ಮಹಿಳೆಯೊಬ್ಬಳು ಮರದ ಮೇಲೆ ಕುಳಿತಿರುವ ಹಕ್ಕಿ ಮರಿಗಳಿಗೆ ಹಸಿವು ನೀಗಿಸಿದ್ದಾಳೆ. ಮರಿ ಹಕ್ಕಿಗಳು ಬಾಯಿ ತೆರೆಯುತ್ತಿದ್ದಂತೆ ಮಹಿಳೆ ಕೈ ತುತ್ತು ನೀಡಿದ್ದಾಳೆ.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಮೊಮ್ಮಗನನ್ನು ಮಡಿಲಿನಲ್ಲಿ ಹೊತ್ತುಕೊಂಡು ಮದುವೆ ಶೂಟ್‌ ಮಾಡಿದ ಫೋಟೋಗ್ರಾಫರ್

ಈ ವಿಡಿಯೋ ಮೂರು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ತಾಯಿ ಅಂದ್ರೆ ಪ್ರಪಂಚ ಎಂದಿದ್ದಾರೆ. ಇನ್ನೊಬ್ಬರು, ಶುದ್ಧ ತಾಯ್ತತನ ಸುಂದರವಾದ ರೀಲ್ ಎಂದು ಹೇಳಿದ್ದಾರೆ. ಮತ್ತೊಬ್ಬರು, ಅತ್ಯದ್ಭುತ ತಾಯಿ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us