AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಮಾಲೀಕ ಬರುತ್ತಿದ್ದಂತೆ ಕದ್ದು ಮುಚ್ಚಿ ಊಟ ಮಾಡಿದ ಕೂಲಿ ಕಾರ್ಮಿಕ, ಕಾರಣ ಇದೇ ನೋಡಿ

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಕೆಲ ವಿಡಿಯೋಗಳು ಕಣ್ಣಂಚಲಿ ಕಣ್ಣೀರು ತರಿಸುತ್ತದೆ. ಇಲ್ಲೊಬ್ಬ ಕೂಲಿ ಮಾಡುವ ಯುವಕನು ಬಡತನ ಮುಚ್ಚಿಡಲು ಮಾಲೀಕನ ಬರುತ್ತಿದ್ದಂತೆ ಕದ್ದು ಮುಚ್ಚಿ ಊಟ ಮಾಡಿದ್ದಾನೆ. ಈ ಹೃದಯ ಸ್ಪರ್ಶಿ ನೋಡಿ ನೆಟ್ಟಿಗರು ಭಾವುಕರನ್ನಾಗಿಸಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಮಾಲೀಕ ಬರುತ್ತಿದ್ದಂತೆ ಕದ್ದು ಮುಚ್ಚಿ ಊಟ ಮಾಡಿದ ಕೂಲಿ ಕಾರ್ಮಿಕ, ಕಾರಣ ಇದೇ ನೋಡಿ
ವೈರಲ್‌ ವಿಡಿಯೋImage Credit source: Twitter
ಸಾಯಿನಂದಾ
|

Updated on: Sep 02, 2026 | 3:39 PM

Share

ಗಂಡು ಮಕ್ಕಳ ಜೀವನ ಹೇಳಿದ್ದಷ್ಟು ಸುಲಭ. ಎಷ್ಟೇ ಕಷ್ಟ ಆದ್ರೂ ಹೇಳಿಕೊಳ್ಳೋ ಆಗಿಲ್ಲ. ಜವಾಬ್ದಾರಿಗಳ ನಡುವೆ ಯಾರಿಗೂ ತೋರಿಸಿಕೊಳ್ಳದೇ ಸಹಿಸಿಕೊಂಡು ಹೋಗಬೇಕಷ್ಟೇ. ಇದಕ್ಕೆ ಉದಾಹರಣೆಯಂತಿದೆ ಈ ದೃಶ್ಯ. ಕೂಲಿ ಮಾಡುವ ಯುವಕನೊಬ್ಬ (young man) ಕದ್ದು ಮುಚ್ಚಿ ಊಟ ಮಾಡುತ್ತಿರುವ ದೃಶ್ಯವು ಕರುಳು ಹಿಂಡುವಂತಿದೆ. ಇದರ ಹಿಂದಿನ ಕಾರಣ ತಿಳಿದ್ರೆ ನಿಮ್ಮ ಕರುಳು ಚುರ್ ಅನ್ನುತ್ತೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರ ಕಣ್ಣು ತುಂಬಿ ಬಂದಿದೆ.

ಕದ್ದು ಮುಚ್ಚಿ ಊಟ ಮಾಡಿದ ಕೂಲಿ ಕಾರ್ಮಿಕ

ರುದ್ರ ಯಾಧವ್ (Rudra Yadav) ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ತನ್ನ ಬಡತನ ಮುಚ್ಚಿಡಲು ಯುವಕನೊಬ್ಬ ಮಾಡಿದ ಕೆಲಸವನ್ನು ಕಾಣಬಹುದು. ಕೂಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬ ಹೊಟ್ಟೆ ಹಸಿವಿನಿಂದ ಊಟ ಮಾಡಲು ಮುಂದಾಗಿದ್ದಾನೆ. ಇದೇ ವೇಳೆ ಆತನ ಹತ್ತಿರ ಮಾಲೀಕನು ಬಂದಿದ್ದು, ಕೈಯಲ್ಲಿದ್ದ ಆಹಾರವನ್ನು ಮುಚ್ಚಿಟ್ಟಿದ್ದಾನೆ. ಓನರ್ ಏನು ತಿನ್ನುತ್ತಿದ್ದೀಯಾ, ತೋರಿಸು?, ಎಂದು ಕೇಳಿದ್ದಾರೆ. ತನ್ನ ಕೈಯಲ್ಲಿದ್ದ ಒಣ ರೊಟ್ಟಿ ಹಾಗೂ ಹಸಿ ಈರುಳ್ಳಿಯನ್ನು ತೋರಿಸಿ ಮುಖ ಸಣ್ಣಗೆ ಮಾಡಿದ್ದಾನೆ.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಮನೆಗೆ ಬಂತು ಸ್ಮಾರ್ಟ್ ಟಿವಿ; ಡೆಲಿವರಿ ಬಾಯ್ ಕೆಲಸ ಮಾಡಿ ಅಮ್ಮನಿಗೆ ಸರ್ಪ್ರೈಸ್ ಗಿಫ್ಟ್ ಕೊಟ್ಟ ಮಗ

ಯುವಕನ ಅಸಹಾಯಕತೆಗೆ ಕಣ್ಣೀರು ಹಾಕಿದ ನೆಟ್ಟಿಗರು

ಈ ವಿಡಿಯೋ ಎರಡೂವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಇಂತಹ ಜೀವನ ತುಂಬಾನೇ ಕಷ್ಟಕರ ಎಂದಿದ್ದಾರೆ. ಇನ್ನೊಬ್ಬರು, ಈ ದೃಶ್ಯ ನೋಡಿ ಕಣ್ಣು ತುಂಬಿ ಬಂತು ಎಂದು ಹೇಳಿದ್ದಾರೆ. ಮತ್ತೊಬ್ಬರು, ಜೀವನ ಅಂದ್ರೆ ಏನು ಎನ್ನುವುದು ಈ ವಿಡಿಯೋ ತೋರಿಸುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ನೀವಿರುವಲ್ಲೇ ಇ ಖಾತಾ ಪಡೆಯಲು ಏನು ಮಾಡಬೇಕು? ಇಲ್ಲಿದೆ ಮಾಹಿತಿ
ನೀವಿರುವಲ್ಲೇ ಇ ಖಾತಾ ಪಡೆಯಲು ಏನು ಮಾಡಬೇಕು? ಇಲ್ಲಿದೆ ಮಾಹಿತಿ
ದೇವರಿಗೆ ಹಾಡು ಹಾಡಿ ಪ್ರಾರ್ಥಿಸಿದ ಕಿರಣ್ ಶಾಸ್ತ್ರಿ; ಬೀಳಲಿಲ್ಲ ಹೂವು
ದೇವರಿಗೆ ಹಾಡು ಹಾಡಿ ಪ್ರಾರ್ಥಿಸಿದ ಕಿರಣ್ ಶಾಸ್ತ್ರಿ; ಬೀಳಲಿಲ್ಲ ಹೂವು
ಜಾತಿನಿಂದನೆ ಆರೋಪ; ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಮತ್ತೊಂದು ಎಫ್​ಐಆರ್
ಜಾತಿನಿಂದನೆ ಆರೋಪ; ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಮತ್ತೊಂದು ಎಫ್​ಐಆರ್
ಕಾವೇರಿ ನೀರು ಹಂಚಿಕೆ: ಕರ್ನಾಟಕಕ್ಕೆ ಮತ್ತೊಂದು ಹಿನ್ನಡೆ
ಕಾವೇರಿ ನೀರು ಹಂಚಿಕೆ: ಕರ್ನಾಟಕಕ್ಕೆ ಮತ್ತೊಂದು ಹಿನ್ನಡೆ
ಇಂದು ಶ್ರವಣ ದ್ವಾದಶಿ: ಮೇಷಾದಿ 12 ರಾಶಿಗಳ ಜನರ ದಿನ ಭವಿಷ್ಯ ಇಲ್ಲಿದೆ
ಇಂದು ಶ್ರವಣ ದ್ವಾದಶಿ: ಮೇಷಾದಿ 12 ರಾಶಿಗಳ ಜನರ ದಿನ ಭವಿಷ್ಯ ಇಲ್ಲಿದೆ
'ನಮ್ಮ ಉಗ್ರರು ನಿಯಂತ್ರಣದಲ್ಲಿದ್ದಾರೆ'; ಮಾನ ಹರಾಜು ಹಾಕಿಕೊಂಡ ಪಾಕಿಸ್ತಾನ
'ನಮ್ಮ ಉಗ್ರರು ನಿಯಂತ್ರಣದಲ್ಲಿದ್ದಾರೆ'; ಮಾನ ಹರಾಜು ಹಾಕಿಕೊಂಡ ಪಾಕಿಸ್ತಾನ
: ಟಿವಿ9 ವರದಿಯ ಸಕಾರಾತ್ಮಕ ಪರಿಣಾಮಕ್ಕೆ ಗದಗ ಪೋಷಕರ ಧನ್ಯವಾದ
: ಟಿವಿ9 ವರದಿಯ ಸಕಾರಾತ್ಮಕ ಪರಿಣಾಮಕ್ಕೆ ಗದಗ ಪೋಷಕರ ಧನ್ಯವಾದ
‘ಭಾರತ-ಪಾಕ್ ಯುದ್ಧ ತಡೆದು, 3 ಕೋಟಿ ಜನರ ಜೀವ ಉಳಿಸಿದೆ’; ಟ್ರಂಪ್ ಹಳೇ ರಾಗ
‘ಭಾರತ-ಪಾಕ್ ಯುದ್ಧ ತಡೆದು, 3 ಕೋಟಿ ಜನರ ಜೀವ ಉಳಿಸಿದೆ’; ಟ್ರಂಪ್ ಹಳೇ ರಾಗ
ಸಿದ್ದರಾಮಯ್ಯ ಪ್ಯಾಲೇಸ್ ಕಟ್ಟಿಲ್ಲ: ಹೊಸ ಮನೆ ಬಗ್ಗೆ ಜಮೀರ್ ಹೇಳಿದ್ದಿಷ್ಟು
ಸಿದ್ದರಾಮಯ್ಯ ಪ್ಯಾಲೇಸ್ ಕಟ್ಟಿಲ್ಲ: ಹೊಸ ಮನೆ ಬಗ್ಗೆ ಜಮೀರ್ ಹೇಳಿದ್ದಿಷ್ಟು
ಗುಲ್ಮಾರ್ಗ್‌ನಲ್ಲಿ ಹಿಮಪಾತ; ಶ್ವೇತವರ್ಣಕ್ಕೆ ತಿರುಗಿದ ಪರ್ವತಗಳು
ಗುಲ್ಮಾರ್ಗ್‌ನಲ್ಲಿ ಹಿಮಪಾತ; ಶ್ವೇತವರ್ಣಕ್ಕೆ ತಿರುಗಿದ ಪರ್ವತಗಳು