Viral Video: ಚಲಿಸುತ್ತಿರುವ ರೈಲಿನಲ್ಲಿ ಕಸರತ್ತು ಮಾಡಲು ಹೋಗಿ ಪಜೀತಿಗೆ ಸಿಲುಕಿದ ಭೂಪ

ರೈಲಿನಲ್ಲಿ ಪ್ರಯಾಣಿಸುವಾಗ ಹೆಚ್ಚಿನ ಸಂದರ್ಭಗಳಲ್ಲಿ ಈ ಪೋಲಿ ಹುಡುಗರು ಏನಾದರೂ ಒಂದು ಹುಚ್ಚಾಟಕ್ಕೆ ಕೈ ಹಾಕುತ್ತಾರೆ. ಅದೇ ರೀತಿ ಇಲ್ಲೊಬ್ಬ ಆಸಾಮಿ ಚಲಿಸುತ್ತಿರುವ ರೈಲಿನ ಭೋಗಿಯ ಮೇಲೆ ಹತ್ತಿ ಕಸರತ್ತು ಮಾಡಲು ಹೋಗಿ ಪಜೀತಿಗೆ ಸಿಲುಕಿಕೊಂಡಿದ್ದಾನೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈತನ ಹಚ್ಚಾಟಕ್ಕೆ ನೆಟ್ಟಿಗರು ಫುಲ್ ಗರಂ ಆಗಿದ್ದಾರೆ.

Viral Video: ಚಲಿಸುತ್ತಿರುವ ರೈಲಿನಲ್ಲಿ ಕಸರತ್ತು  ಮಾಡಲು ಹೋಗಿ ಪಜೀತಿಗೆ ಸಿಲುಕಿದ ಭೂಪ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷತಾ ವರ್ಕಾಡಿ

Updated on:Jan 28, 2024 | 2:14 PM

ಚಲಿಸುತ್ತಿರುವ ರೈಲಿನ ಫೂಟ್ ಬೋರ್ಡ್ ಮೇಲೆ ನಿಂತು ನೇತಾಡುವಂತಹದ್ದಾಗಿರಲಿ ಅಥವಾ, ರೈಲಿನ ಕಿಟಿಕಿಯಿಂದ ತಲೆ ಹೊರ ಹಾಕಿ, ಕೈ ಹೊರ ಹಾಕಿ ಕೂರುವುದು ತುಂಬಾನೇ ಅಪಾಯಕಾರಿ. ಅದೆಷ್ಟೋ ಜನರು ಫೂಟ್ ಬೋರ್ಡ್ ಮೇಲೆ ನಿಂತು ಪ್ರಯಾಣಿಸುವ ವೇಳೆ ಆಯತಪ್ಪಿ ಬಿದ್ದು, ತಮ್ಮ ಅಮೂಲ್ಯ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಚಲಿಸುತ್ತಿರುವ ರೈಲಿನಲ್ಲಿ ಹೀಗೆಲ್ಲಾ ಮಾಡುವುದು ಅಪಾಯಕಾರಿ ಅಂತ ತಿಳಿದಿದ್ರೂ ಕೂಡಾ ಈ ಕೆಲವೊಂದು ಪೋಲಿ ಹುಡುಗ್ರು, ಸೀಟಿನಲ್ಲಿ ಕುಳಿತುಕೊಳ್ಳದೆ, ಏನಾದರೊಂದು ಸರ್ಕಸ್ ಮಾಡುತ್ತಾ ಹುಚ್ಚಾಟ ಮೆರೆಯುತ್ತಿರುತ್ತಾರೆ. ಅದೇ ರೀತಿ ಇಲ್ಲೊಬ್ಬ ಯುವಕ ಚಲಿಸುತ್ತಿರುವ ರೈಲಿನಲ್ಲಿ ಸ್ಟಂಟ್ ಮಾಡಲು ಹೋಗಿ ಅಪಾಯಕ್ಕೆ ಸಿಲುಕಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈತನ ಹುಚ್ಚಾಟದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ಭಾರಿ ಆಕ್ರೋಶ ವ್ಯಕ್ತವಾಗಿದೆ.

ಚಲಿಸುತ್ತಿರುವ ರೈಲಿನಲ್ಲಿ ಸಾಹಸ ಪ್ರದರ್ಶ ಮಾಡುವುದು, ಹುಚ್ಚಾಟ ಮೆರೆಯುವುದು ಎಷ್ಟು ಅಪಾಯಕಾರಿ ಎಂಬುದಕ್ಕೆ ಜೀವಂತ ಉದಾಹರಣೆಯನ್ನು ಈ ವಿಡಿಯೋದಲ್ಲಿ ಕಾಣಬಹುದು. ಆ ಯುವಕ ಕಿಟಕಿಯಿಂದ ತಲೆ ಹೊರ ಹಾಕಿ ಕಸರತ್ತು ಮಾಡುತ್ತಿದ್ದ, ನಂತರ ರೈಲಿನ ಕಿಟಕಿಯಿಂದ ಏಕಾಏಕಿ ಭೋಗಿಯ ಮೇಲಕ್ಕೆ ಏರಿ ಅಲ್ಲಿ ಕಸರತ್ತು ಮಾಡುವ ಸಂದರ್ಭದಲ್ಲಿ ಹಠತ್ತಾಗಿ ವಿದ್ಯುತ್ ತಂತಿ ಸ್ಪರ್ಶವಾಗಿ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಅದೃಷ್ಟವಶಾತ್ ಆತ ಪ್ರಾಣಾಪಾಯದಿಂದ ಪಾರಾಗಿದ್ದು, ಅಪಘಾತದಲ್ಲಿ ಆತನ ಕೈ ಮತ್ತು ಬೆನ್ನಿನ ಭಾಗದಲ್ಲಿ ಸುಟ್ಟ ಗಾಯಗಳಾಗಿವೆ.

ಇದನ್ನೂ ಓದಿ: ಬಾಯಿ ಚಪ್ಪರಿಸುತ್ತಾ ನೂಡಲ್ಸ್ ಸವಿಯುತ್ತೀರಾ, ಈ ವಿಡಿಯೋ ನೋಡಿದ್ರೆ ನೂಡಲ್ಸ್ ಹೆಸರು ಸಹ ಹೇಳುವುದಿಲ್ಲ!

ಈ ವಿಡಿಯೋವನ್ನು @gillujojo ಎಂಬ X ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ವೈರಲ್ ವಿಡಿಯೋದಲ್ಲಿ ಯುವಕನೊಬ್ಬ ಚಲಿಸುತ್ತಿರುವ ರೈಲಿನ ಕಿಟಕಿಯಿಂದ ತಲೆ ಹೊರ ಹಾಕಿ ಏನೇನೋ ಸರ್ಕಸ್ ಮಾಡುತ್ತಿದ್ದ, ನಂತರ ಏಕಾಏಕಿ ರೈಲಿನ ಭೋಗಿಯ ಮೇಲೆ ಹತ್ತಿದ್ದ ಯುವಕ ಅಲ್ಲೂ ಕೆಲವೊಂದು ಸ್ಟಂಟ್ ಮಾಡುತ್ತಾ ಹುಚ್ಚಾಟ ಮೆರೆಯುತ್ತಿರುತ್ತಾನೆ. ಆ ವೇಳೆಯಲ್ಲಿ ಹಠತ್ತಾಗಿ ಆತನಿಗೆ ವಿದ್ಯುತ್ ತಂತಿ ಸ್ಪರ್ಶವಾಗಿ ಪ್ರಜ್ಞೆ ತಪ್ಪಿ ಬೀಳುವಂತಹ ದೃಶ್ಯವನ್ನು ಕಾಣಬಹುದು.

ಜನವರಿ 25 ರಂದು ಹಂಚಿಕೊಳ್ಳಲಾದ ಈ ವಿಡಿಯೋ 35 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ಗಳೂ ಹರಿದುಬಂದಿವೆ. ಒಬ್ಬ ಬಳಕೆದಾರರು ʼಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಆಗಬೇಕೆಂದು ತಮ್ಮ ಜೀವದ ಜೊತೆಗೂ ಹುಚ್ಚಾಟವಾಡುವ ಮೂರ್ಖರಿದ್ದಾರೆಯೇʼ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಈ ರೀತಿ ಹುಚ್ಚಾಟ ಮೆರೆಯುವವರಿಗೆ ಹೀಗೇನೆ ಆಗಬೇಕುʼ ಅಂತ ಕಿಡಿಕಾರಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇಂತಹ ಪೋಲಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕುʼ ಅಂತ ಹೇಳಿದ್ದಾರೆ. ಇನ್ನೂ ಅನೇಕರು ಅಬ್ಬಬ್ಬಾ ಈ ದೃಶ್ಯ ತುಂಬಾ ಭಯಾನಕವಾಗಿದೆ, ಇದನ್ನು ನೋಡಿ ಗಾಬರಿಯಾಯಿತು ಅಂತ ಹೇಳಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:14 pm, Sun, 28 January 24