Viral Video: ಮ್ಯಾಗಿ ಆಮ್ಲೆಟ್ ; ನೀವೇನಾದ್ರೂ ಟ್ರೈ ಮಾಡ್ತೀರಾ?
ಇತ್ತೀಚಿನ ದಿನಗಳಲ್ಲಿ ವಿಯರ್ಡ್ ಕಾಂಬಿನೇಷನ್ ಫುಡ್ ಟ್ರೆಂಡ್ ಬಹಳನೇ ಹೆಚ್ಚಾಗಿದೆ. ಒರಿಯೊ ಬಜ್ಜಿಯಿಂದ ಹಿಡಿದು ಗುಲಾಬ್ ಜಾಮೂನ್ ದೋಸೆಯವರೆಗೂ ತರಹೇವಾರಿ ವಿಲಕ್ಷಣ ಆಹಾರಗಳ ಕುರಿತ ವಿಡಿಯೋಗಳು ಆಗೊಮ್ಮೆ ಈಗೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ಕಾಣಸಿಗುತ್ತವೆ. ಈಗ ಅದೇ ರೀತಿಯ ವಿಡಿಯೋವೊಂದು ಹರಿದಾಡುತ್ತಿದ್ದು, ಯುವಕನೊಬ್ಬ ವಿಶಿಷ್ಟವಾದ ಮ್ಯಾಗಿ ಆಮ್ಲೆಟ್ ತಯಾರಿಸಿದ್ದಾನೆ. ಈ ವಿಡಿಯೋ ಇದೀಗ ಸಖತ್ ವೈರಲ್ ಆಗಿದ್ದು, ಅಯ್ಯೋ ಯಾಕಪ್ಪಾ ಮ್ಯಾಗಿಯ ಕೊಲೆ ಮಾಡ್ತಿದ್ದೀಯಾ ಅಂತ ನೆಟ್ಟಿಗರು ತಮಾಷೆ ಮಾಡಿದ್ದಾರೆ.
ಮಾರುಕಟ್ಟೆಯಲ್ಲಿ ಅದೆಷ್ಟೇ ಬಗೆಯ ನೂಡಲ್ಸ್ಗಳು ಲಭ್ಯವಿದ್ದರೂ ಹೆಚ್ಚಿನ ಭಾರತೀಯರು ಮ್ಯಾಗಿ ನೂಡಲ್ಸ್ ಮಾತ್ರ ತಿನ್ನಲು ಇಷ್ಟಪಡುತ್ತಾರೆ. ಥಟ್ ಎಂದು 5 ನಿಮಿಷಗಳಲ್ಲಿ ಸಿದ್ಧವಾಗುವ ಬಿಸಿ ಬಿಸಿ ಮ್ಯಾಗಿಯನ್ನು ಬಹುತೇಕ ಎಲ್ಲರೂ ಇಷ್ಟಪಟ್ಟು ಸವಿಯುತ್ತಾರೆ. ಅನೇಕರು ಮ್ಯಾಗಿಗೆ ತರಕಾರಿ, ಬೆಣ್ಣೆ, ಚೀಸ್ ಮಸಾಲೆ ಪದಾರ್ಥಗಳನ್ನು ಸೇರಿಸಿ ತಮ್ಮದೇ ಆವೃತ್ತಿಯ ರುಚಿಕರ ಮ್ಯಾಗಿಯನ್ನು ತಯಾರಿಸುತ್ತಾರೆ. ಅಷ್ಟೇ ಅಲ್ಲದೆ ಇತರೆ ವಿಯರ್ಡ್ ಫುಡ್ ಕಾಂಬಿನೇಷನ್ಗಳಂತೆ ಈ ಮ್ಯಾಗಿ ನೂಡಲ್ಸ್ನಲ್ಲೂ ಒಂದಷ್ಟು ವಿಚಿತ್ರ ಪ್ರಯೋಗಗಳು ನಡೆಯುತ್ತವೆ. ಹೌದು ಫಾಂಟಾ ಮ್ಯಾಗಿ, ವಿಸ್ಕಿ ಮ್ಯಾಗಿ, ಪೇಸ್ಟ್ರೀ ಮ್ಯಾಗಿ, ಮ್ಯಾಗಿ ಮಿಲ್ಕ್ ಶೇಕ್ ಒಂದಾ ಎರಡಾ… ಹೀಗೆ ಹಲವಾರು ವಿಚಿತ್ರ ಪ್ರಯೋಗಗಳ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಕಾಣಸಿಗುತ್ತವೆ. ಈಗ ಅದೇ ರೀತಿಯ ವಿಡಿಯೋವೊಂದು ಹರಿದಾಡುತ್ತಿದ್ದು, ಯುವಕನೊಬ್ಬ ವಿಶಿಷ್ಟವಾದ ಮ್ಯಾಗಿ ಆಮ್ಲೆಟ್ ತಯಾರಿಸಿದ್ದಾನೆ. ಈತನ ಈ ವಿಚಿತ್ರ ಪ್ರಯೋಗವನ್ನು ಕಂಡು, ಅಪ್ಪಾ ಮಾರಾಯ ಮ್ಯಾಗಿಯ ಕೊಲೆ ಮಾಡಬೇಡ ಅಂತ ನೆಟ್ಟಿಗರು ಕಾಲೆಳೆದಿದ್ದಾರೆ.
ಈ ವಿಡಿಯೋವನ್ನು ಮನೀಶ್ ಖಡ್ಕ (@recipeadda4) ಎಂಬವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ʼಮ್ಯಾಗಿ ಆಮ್ಲೆಟ್ʼ ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವಿಡಿಯೋದಲ್ಲಿ ಮನೀಶ್ ಹೇಗೆ ಮ್ಯಾಗಿ ಆಮ್ಲೆಟ್ ತಯಾರಿಸಿದ್ದಾರೆ ಎಂಬುದನ್ನು ನೋಡಬಹುದು.
View this post on Instagram
ವೈರಲ್ ವಿಡಿಯೋದಲ್ಲಿ ಮನೀಶ್ ಅವರು ಮೊದಲಿಗೆ ಒಂದು ಪಾತ್ರೆಗೆ ಬೇಯಿಸಿದಂತಹ ನೂಡಲ್ಸ್ ಹಾಕಿ, ನಂತರ ಅದಕ್ಕೆ ಎರಡು ಮೊಟ್ಟೆಗಳನ್ನು ಹಾಗೂ ಮ್ಯಾಗಿ ಮಸಾಲವನ್ನು ಸೇರಿಸಿ ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿ, ಬಳಿಕ ಒಂದು ಬಾಣಲೆಯ ಮೇಲೆ ಎಣ್ಣೆ ಹಾಕಿ ಅದು ಕಾದ ಬಳಿಕ ಅದರಲ್ಲಿ ಮ್ಯಾಗಿ ಆಮ್ಲೆಟ್ ಬೇಯಿಸುವಂತಹ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಚಲಿಸುತ್ತಿರುವ ರೈಲಿನಲ್ಲಿ ಕಸರತ್ತು ಮಾಡಲು ಹೋಗಿ ಪಜೀತಿಗೆ ಸಿಲುಕಿದ ಭೂಪ
ಜನವರಿ 16 ರಂದು ಹಂಚಿಕೊಳ್ಳಲಾದ ಈ ವಿಡಿಯೋ 70.1 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 1.4 ಮಿಲಿಯನ್ ಲೈಕ್ಸ್ಗಳನ್ನು ಪಡೆದುಕೊಂಡಿದೆ. ಹಾಗೂ ತರಹೇವಾರಿ ಕಮೆಂಟ್ಸ್ಗಳೂ ಹರಿದು ಬಂದಿವೆ. ಒಬ್ಬ ಬಳಕೆದಾರರು ʼಫಾಂಟಾ ಮ್ಯಾಗಿಯಿಂದ ಹಿಡಿದು ಮ್ಯಾಗಿ ಆಮ್ಲೆಟ್ ವರೆಗೂ ಈ ಸೋಶಿಯಲ್ ಮೀಡಿಯಾದಲ್ಲಿ ಎಲ್ಲವೂ ಕಾಣಸಿಗುತ್ತದೆʼ ಅಂತ ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಮ್ಯಾಗಿಗೆ ನ್ಯಾಯ ಒದಗಿಸಲೇಬೇಕುʼ ಅಂತ ತಮಾಷೆಯ ಕಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಎಲ್ಲರೂ ಮ್ಯಾಗಿಗೆ ಸಾಕಷ್ಟು ಕಿರುಕುಳ ಕೊಡ್ತಾರಪ್ಪಾʼ ಅಂತ ತಮಾಷೆ ಮಾಡಿದ್ದಾರೆ. ಇನ್ನೂ ಅನೇಕರು ಅಪ್ಪಾ ಮಾರಾಯ ಮ್ಯಾಗಿಯ ಕೊಲೆ ಮಾಡಬೇಡ ಅಂತ ಕಾಲೆಳೆದಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ