Viral Video: ತಮ್ಮ ಪ್ರತಿಬಿಂಬ ಕಂಡ ಕೋಳಿ ಹಾಗೂ ಶ್ವಾನದ ಪ್ರತಿಕ್ರಿಯೆ ಹೇಗಿತ್ತು ನೋಡಿ?
ಪ್ರಾಣಿಗಳು ಕನ್ನಡಿಯಲ್ಲಿ ತಮ್ಮ ಪ್ರತಿಬಿಂಬವನ್ನು ಕಂಡಾಗ ಅವುಗಳು ಹೇಗೆ ಪ್ರತಿಕ್ರಿಯಿಸುತ್ತವೆ ಎಂಬುದರ ಕುರಿತ ಹಾಸ್ಯಮಯ ವಿಡಿಯೋಗಳು ಆಗೊಮ್ಮೆ ಈಗೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತವೆ. ಈಗ ಅದೇ ರೀತಿಯ ವಿಡಿಯೋವೊಂದು ಹರಿದಾಡುತ್ತಿದ್ದು, ಶ್ವಾನ ಮತ್ತು ಕೋಳಿಯೊಂದು ಮೊದಲ ಬಾರಿಗೆ ಅವುಗಳ ಪ್ರತಿಬಿಂಬವನ್ನು ಕನ್ನಡಿಯಲ್ಲಿ ಕಂಡು ಬೆಚ್ಚಿ ಬಿದ್ದಿವೆ. ಅವುಗಳ ಈ ಪ್ರತಿಕ್ರಿಯೆಯನ್ನು ಕಂಡು ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.
ನಮಗೆಲ್ಲ ಪ್ರತಿನಿತ್ಯ ಕನ್ನಡಿಯಲ್ಲಿ ನಮ್ಮ ಮುಖವನ್ನು ನೋಡುವುದೆಂದರೆ ತುಂಬಾನೇ ಇಷ್ಟ ಅಲ್ವಾ. ಆದ್ರೆ ಪ್ರಾಣಿಗಳು ಅವುಗಳ ಮುಖವನ್ನು ಕನ್ನಡಿಯಲ್ಲಿ ಕಂಡರೆ ಹೇಗಿರಬಹುದು ಊಹಿಸಿ. ಖಂಡಿತವಾಗಿಯೂ ಅವುಗಳು ಇದು ಯಾವುದೋ ಬೇರೆ ಪ್ರಾಣಿ ಇರಬಹುದೆಂದು ಕನ್ನಡಿಯ ಮೇಲೆ ಹೌಹಾರಿ ಬಿಡುತ್ತವೆ. ಹೀಗೆ ಪ್ರಾಣಿಗಳು ಕನ್ನಡಿಯಲ್ಲಿ ತಮ್ಮ ಪ್ರತಿಬಿಂಬವನ್ನು ಕಂಡಾಗ ಅವುಗಳು ಹೇಗೆ ಪ್ರತಿಕ್ರಿಯಿಸುತ್ತವೆ ಎಂಬುದರ ಕುರಿತ ಹಾಸ್ಯಮಯ ವಿಡಿಯೋಗಳು ಆಗೊಮ್ಮೆ ಈಗೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತವೆ. ಈಗ ಅದೇ ರೀತಿಯ ವಿಡಿಯೋವೊಂದು ಹರಿದಾಡುತ್ತಿದ್ದು, ಶ್ವಾನ ಮತ್ತು ಕೋಳಿಯೊಂದು ಮೊದಲ ಬಾರಿಗೆ ಅವುಗಳ ಪ್ರತಿಬಿಂಬವನ್ನು ಕನ್ನಡಿಯಲ್ಲಿ ಕಂಡು ಬೆಚ್ಚಿ ಬಿದ್ದಿವೆ. ಈ ವೈರಲ್ ವಿಡಿಯೋ ನೋಡುಗರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸಿದೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ಮುಗ್ಧ ನಾಯಿ ಹಾಗೂ ಕೋಳಿ ಮೊದಲ ಬಾರಿಗೆ ಅವುಗಳ ಪ್ರತಿಬಿಂಬವನ್ನು ಕನ್ನಡಿಯಲ್ಲಿ ಕಂಡು ಇದ್ಯಾವುದೋ ಬೇರೆ ಪ್ರಾಣಿಯೇ ಇರಬಹುದೆಂದು ಕೋಪದಿಂದ ಕನ್ನಡಿಯ ಮೇಲೆ ಹೌಹಾರುವಂತ ಹಾಸ್ಯಮಯ ದೃಶ್ಯವನ್ನು ಕಾಣಬಹುದು. ಈ ಹಾಸ್ಯಮಯ ವಿಡಿಯೋವನ್ನು @stickerlinemakham ಎಂಬ ಇನ್ಸ್ಟಾಗ್ರಾಮ್ ಪೇಜ್ ಒಂದರಲ್ಲಿ ಹಂಚಿಕೊಳ್ಳಲಾಗಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ;
&nbs
View this post on Instagram
ಈ ವೈರಲ್ ವಿಡಿಯೋದಲ್ಲಿ ಯಾರೋ ಕೋಳಿ ಮತ್ತು ಶ್ವಾನದ ಪ್ರತಿಕ್ರಿಯೆ ಹೇಗಿರುತ್ತೆ ಎಂಬುದನ್ನು ನೋಡಲು ಮನೆಯ ಅಂಗಳದಲ್ಲಿ ಒಂದು ದೊಡ್ಡ ಕನ್ನಡಿಯನ್ನಿಟ್ಟು, ಆ ಕನ್ನಡಿಯ ಮುಂದೆ ಒಂದಷ್ಟು ಆಹಾರವನ್ನು ಚೆಲ್ಲಿರುತ್ತಾರೆ. ಈ ಆಹಾರವನ್ನು ತಿನ್ನಲೆಂದು ಬಂದ ಕೋಳಿ, ಕನ್ನಡಿಯಲ್ಲಿ ಅದರ ಪ್ರತಿಬಿಂಬವನ್ನು ಕಂಡು ಇದ್ಯಾವುದೋ ಬೇರೆ ಕೋಳಿಯೇ ಇರಬೇಕು, ಇದು ಈ ಕಡೆ ಏನಾದ್ರೂ ಬಂದ್ರೆ ನನ್ಗೆ ಹಾಕಿರುವಂತಹ ಕೂಳನ್ನೆಲ್ಲಾ ಇದುವೇ ತಿಂದು ಬಿಡುತ್ತೆ ಅಂತ ಕೋಪದಿಂದ ಕನ್ನಡಿಗೆ ತನ್ನ ಕೊಕ್ಕಿನಿಂದು ಕುಕ್ಕುತ್ತೆ. ಅಷ್ಟರಲ್ಲಿ ಅಲ್ಲಿಗೆ ಬಂದಂತಹ ಶ್ವಾನವೊಂದು ಅದೇ ಕನ್ನಡಿಯಲ್ಲಿ ತನ್ನ ಪ್ರತಿಬಿಂಬವನ್ನು ಕಂಡು ಇದ್ಯಾವುದಿದು ಬೇರೆ ಶ್ವಾನ, ಅಷ್ಟಕ್ಕೂ ನಮ್ಮ ಮನೆಯ ಬಳಿ ಇದಕ್ಕೇನು ಕೆಲಸ ಎನ್ನುತ್ತಾ ಕೋಪದಿಂದ ಬೌ..ಬೌ..ಬೌ..…ಎಂದು ಬೊಗಳುತ್ತಿರುವಂತ ಹಾಸ್ಯಮಯ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಮ್ಯಾಗಿ ಆಮ್ಲೆಟ್ ; ನೀವೇನಾದ್ರೂ ಟ್ರೈ ಮಾಡ್ತೀರಾ?
ನಾಲ್ಕು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 46.1 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 1.5 ಮಿಲಿಯನ್ ಲೈಕ್ಸ್ ಗಳನ್ನು ಪಡೆದುಕೊಂಡಿದೆ. ಹಾಗೂ ತರಹೇವಾರಿ ಕಮೆಂಟ್ಸ್ಗಳೂ ಹರಿದು ಬಂದಿವೆ. ಒಬ್ಬ ಬಳಕೆದಾರರು ʼಈ ಶ್ವಾನ ಕರೆಂಟ್ ಶಾಕ್ ಹೊಡ್ದಂಗೆ ಆಡ್ತಿದೆʼ ಅಂತ ತಮಾಷೆಯ ಕಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಅಯ್ಯೋ ದೇವ್ರೇ ಈ ದೃಶ್ಯ ತುಂಬಾನೇ ತಮಾಷೆಯಾಗಿದೆʼ ಅಂತ ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಪಾಪ ಈ ಶ್ವಾನ ಇದೇ ಮೊದಲ ಬಾರಿಗೆ ಅದರ ಮುಖವನ್ನು ಕನ್ನಡಿಯಲ್ಲಿ ನೋಡುತ್ತಿರಬಹುದುʼ ಎಂದು ಹೇಳಿದ್ದಾರೆ. ಹಾಗೂ ಹಲವರು ಈ ದೃಶ್ಯವನ್ನು ನೋಡಿ ನಕ್ಕು ನಕ್ಕು ಸುಸ್ತಾಯ್ತು ಅಂತ ಹೇಳಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ