
ಬೆಂಗಳೂರಿನಲ್ಲಿ (Bengaluru) ನಡೆಯುವ ಕೆಲವೊಂದು ಘಟನೆಗಳು ಅಚ್ಚರಿ ಎನಿಸುತ್ತದೆ, ಕೆಲವರಿಗೆ ಇದು ಸಾಮಾನ್ಯ ಎನಿಸಬಹುದು. ಆದರೆ ಹೊಸದಾಗಿ ಬೆಂಗಳೂರಿಗೆ ಬಂದವರಿಗೆ ವಿಚಿತ್ರವಾಗಿರುತ್ತದೆ. ಇಲ್ಲೊಂದು ಅಂತಹದೇ ಒಂದು ಘಟನೆಯ ಬಗ್ಗೆ ಯುವತಿಯೊಬ್ಬಳು ಹಂಚಿಕೊಂಡಿದ್ದಾಳೆ. ಬೆಂಗಳೂರಿನ ಜನ ತುಂಬಾ ಹಾಟ್ ಹಾಗೂ ಎಲ್ಲವನ್ನು ದುಡ್ಡಿನಿಂದ ಅಳೆಯುತ್ತಾರೆ. ಹಣವಿದ್ದರೆ ಎಲ್ಲವನ್ನು ಖರೀದಿ ಮಾಡಬಹುದು ಎಂಬ ಯೋಚನೆ. ಅದರಲ್ಲೂ ಈ ಹುಡುಗಿಯರ ವಿಷಯದಲ್ಲಿ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತದೆ. ಹುಡುಗಿಯರು ಸ್ವಲ್ಪ ಫ್ಯಾಷನ್ ಆಗಿ ಕಂಡರೆ ಸಾಕು ಬೆಂಗಳೂರಿನ ಅದೆಷ್ಟೊ ಹುಡುಗರು ಹಣದಿಂದ ಅಳೆಯುತ್ತಾರೆ. ಇದೀಗ ವೈರಲ್ ಆಗಿರುವ ಪೋಸ್ಟ್ ಈ ವಾದವನ್ನು ನಿಜ ಎನ್ನುವಂತಿದೆ. ಹೌದು ಬೆಂಗಳೂರಿನಲ್ಲಿ ಯುವತಿಯೊಬ್ಬಳು ಸ್ಕರ್ಟ್ ಮತ್ತು ತೋಳಿನ ಟಾಪ್ ಧರಿಸಿ ನಗರದಲ್ಲಿ ಓಡಾಡುತ್ತಿದ್ದಾಗ ವ್ಯಕ್ತಿಯೊಬ್ಬ ಪರಿಚಯ ಮಾಡಿಕೊಂಡಿದ್ದಾಳೆ. ಪರಿಚಯ ಮಾಡಿಕೊಂಡು ಮತ್ತೆ ಆಕೆ ಜತೆಗೆ ನಡೆದುಕೊಂಡ ರೀತಿಯ ಬಗ್ಗೆ ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದಾಳೆ.
ಯುವತಿ ಈ ಪೋಸ್ಟ್ನಲ್ಲಿ ಹೀಗೆ ಬರೆದುಕೊಂಡಿದ್ದಾಳೆ. ನಾನು ಬೆಂಗಳೂರಿನಲ್ಲಿ ಅಷ್ಟೊಂದು ಓಡಾಡುವುದಿಲ್ಲ, ಆದರೆ ಒಂದು ದಿನ ನಾನು ಸ್ಕರ್ಟ್ ಧರಿಸಿ ನಗರದಲ್ಲಿ ಓಡಾಡಿದ್ದೇನೆ. ನನಗೆ ಬೆಂಗಳೂರಿನಲ್ಲಿ ಹೇಳಿಕೊಳ್ಳುವ ಸ್ನೇಹಿತರು ಇರಲಿಲ್ಲ. ಬೆಂಗಳೂರಿನ ಕೆಲವೊಂದು ಪ್ರದೇಶಗಳನ್ನು ನೋಡಬೇಕು ಎಂಬ ಆಸೆ ಇತ್ತು. ಅದಕ್ಕಾಗಿ ಸ್ಕರ್ಟ್ ಧರಿಸಿಕೊಂಡು ಬೆಂಗಳೂರಿನ ಚರ್ಚ್ ಸ್ಟ್ರೀಟ್ನಲ್ಲಿ ಸುತ್ತಾಡಲು ಹೋಗಿದ್ದೇ. ಈ ವೇಳೆ ನನಗೆ ಒಬ್ಬ 30 ವರ್ಷ ವಯಸ್ಸಿನ ವ್ಯಕ್ತಿ ಪರಿಚಯವಾಗುತ್ತದೆ. ನಾನು ಮಾತನಾಡಿಸಿದೆ. ತುಂಬಾ ಡೀಸೆಂಟ್ ಆಗಿ ಕಾಣುತ್ತಿದ್ದರು. ಕೋರಮಂಗಲದ ಟೆಕ್ ಗೈ-ಸಾಫ್ಟ್‌ಬಾಯ್ ವೈಬ್ನಲ್ಲಿ ಕೆಲಸ ಮಾಡುವುದು ಎಂದು ಹೇಳಿಕೊಂಡಿದ್ದಾಳೆ. ಮೊದಲಿಗೆ ಸಭ್ಯ, ಗೌರವಾನ್ವಿತ ಮತ್ತು ಸ್ನೇಹಪರವಾಗಿ ಮಾತನಾಡುತಿದ್ದ, ಇಬ್ಬರೂ ಒಟ್ಟಿಗೆ ಸ್ವಲ್ಪ ಮಾತನಾಡುತ್ತ ಹೋಗಬೇಕಾದರೆ ಬೆಂಗಳೂರಿನ ಜೀವನದ ಬಗ್ಗೆ ಮಾತನಾಡಲು ಪ್ರಾರಂಭಿಸಿದ. ಸ್ವಲ್ಪ ಸಮಯದ ನಂತರ ಕಾಫಿ ಕುಡಿಯುವ ಎಂದು ಹೇಳಿದ, ನನಗೆ ಇಷ್ಟವಿಲ್ಲದಿದ್ದರು, ಕಾಫಿ ಕುಡಿಯಲು ಒಪ್ಪಿಕೊಂಡೆ, ಒಂದು ಕಾಫಿ ಕೆಫೆಗೆ ಬಂದೆವು ಎಂದು ಯುವತಿ ಹೇಳಿಕೊಂಡಿದ್ದಾಳೆ.
First time in Bangalore alone and this happens ☠️😭
byu/Bubbly_Pickle2567 inCoconaad ಇದನ್ನೂ ಓದಿ
ನಂತರ 15 ನಿಮಿಷದ ನಂತರ ಆತನ ಮಾತು ಮೊದಲಿನ ರೀತಿ ಇರಲಿಲ್ಲ. ಆತನ ಸ್ವರದಲ್ಲಿ ತುಂಬಾ ಗೊಂದಲ, ಹಾಗೂ ನನಗೆ ಯಾಕೋ ಕಿರಿಕಿರಿ ಆಗಲು ಆರಂಭಿಸಿತು. ಆ ವ್ಯಕ್ತಿ ಕಾಫಿ ಹೀರುತ್ತಾ, ಸ್ವಲ್ಪ ಒಳಗೆ ಬಾಗಿ ನೀವು ನನಗೊಂದು ಉಪಕಾರ ಮಾಡಬಹುದೇ? ಕೇಳಿದ, ಅವನು ತನ್ನ ಸ್ಟಾರ್‌ಬಾಕ್ಸ್ ಕಪ್ ತೆರೆದು ನನ್ನ ಬಳಿ ಅದರಲ್ಲಿ ಉಗುಳಲು ಹೇಳಿದ್ದಾನೆ. ಒಂದು ನಾನೇ ಈ ವ್ಯಕ್ತಿ ಏನ್ ತಪ್ಪಾಗಿ ಹೇಳಿದ್ದಾನೆ ಎಂದು ಒಂದು ನಿಮಿಷ ಎಂದು ಹೇಳಿ, ನಿನ್ನ ಕಾಫಿಯಲ್ಲಿ ನಾನು ಉಗಿಯಬೇಕೆಂದು ನೀನು ಹೇಳಿದ್ದೀಯಾ? ಎಂದು ನಾನು ಆತನನ್ನು ಪ್ರಶ್ನಿಸಿದೆ. ಅದಕ್ಕೆ ಆತನ ತಲೆಯಾಡಿಸಿದ. ತಕ್ಷಣ ನಾನು ಅಲ್ಲಿಂದ ಹೋಗಲು ಮುಂದಾದೆ, ಆದರೆ ಆತ ನನ್ನನ್ನೂ ತಡೆದು. ನೀನು ಹೀಗೆ ಮಾಡಿದ್ರೆ ನಾನು ನಿನಗೆ 1 ಸಾವಿರ ರೂ. ನಿಡುತ್ತೇನೆ ಎಂದು ಬೇಡಿಕೆ ಇಟ್ಟಿದ್ದಾನೆ. ನಾನು ಅಲ್ಲಿಂದ ತಕ್ಷಣ ಹೊರಟು ಹತ್ತಿರದಲ್ಲಿದ್ದ ಮೆಟ್ರೋ ಬಳಿ ಬಂದೆ ಎಂದು ಯುವತಿ ಹೇಳಿದ್ದಾಳೆ.
ಇದನ್ನೂ ಓದಿ: ಬೆಂಗಳೂರಿನ ಟ್ರಾಫಿಕ್ ಸಮಸ್ಯೆಯಿಂದ ಬೇಸತ್ತಿದ್ದೀರಾ? ಈ ಟಿಪ್ಸ್ ಫಾಲೋ ಮಾಡಿ ಎಂದ ವ್ಯಕ್ತಿ
ಇನ್ನು ಈ ಪೋಸ್ಟ್ಗೆ ಅನೇಕ ಬಳಕೆದಾರರೂ ಕಾಮೆಂಟ್ ಮಾಡಿದ್ದಾರೆ. ಒಬ್ಬ ಬಳಕೆದಾರರು, “ಸುಲಭವಾದ 1,000 ರೂ ಸಿಗುತ್ತಿತ್ತು. ಲಿಂಗಗಳನ್ನು ಬದಲಾಯಿಸಿದ್ದರೆ, ನಾನು ಅದನ್ನು ಉಚಿತವಾಗಿ ಮಾಡುತ್ತೇನೆ ಎಂದಿದ್ದಾರೆ. ಮತ್ತೊಬ್ಬ ಬಳಕೆದಾರ ನಿಮ್ಮ ಸ್ವಾಭಿಮಾನಕ್ಕೆ 1,000 ರೂ ಸಿಕ್ಕಿತು. ಆದರೆ ಅದನ್ನು ನೀವು ಸ್ವೀಕರಿಸದಿರುವುದು ಒಳ್ಳೆಯದು ಎಂದು ಹೇಳಿದ್ದಾರೆ. ಹೀಗೆ ಅನೇಕರು ಗಂಭೀರವಾಗಿ, ಇನ್ನು ಕೆಲವರು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:36 pm, Sun, 13 July 25