Viral Post: ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರಂತೆ ಐಶ್ವರ್ಯ ರೈ; ಪೋಸ್ಟ್​​ ವೈರಲ್​​​​​

|

Updated on: Sep 26, 2024 | 4:53 PM

ಇತ್ತೀಚಿಗಷ್ಟೇ ಐಷಾರಾಮಿ ಬ್ರಾಂಡ್ ಲೋರಿಯಲ್‌ನ ಪ್ಯಾರಿಸ್ ಫ್ಯಾಶನ್ ವೀಕ್​ನಲ್ಲಿ ಐಶ್ವರ್ಯ ಭಾಗಿಯಾಗಿದ್ದರು. ಈ ವೇಳೆ ನಟಿ ಸಂಪೂರ್ಣವಾಗಿ ಮೈ ಮುಚ್ಚುವ ಕೆಂಪು ಬಣ್ಣದ ಬಟ್ಟೆಯಲ್ಲಿ ಅತಿಯಾಗಿ ತೂಕ ಹೆಚ್ಚಿಸಿಕೊಂಡಂತೆ ಕಾಣಿಸಿಕೊಂಡಿದ್ದಾರೆ. ಸದ್ಯ ಈ ಫೋಟೋ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ನಟಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆಂದು ಸುದ್ದಿ ಹರಿದಾಡಿದೆ.

Viral Post: ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರಂತೆ ಐಶ್ವರ್ಯ ರೈ; ಪೋಸ್ಟ್​​ ವೈರಲ್​​​​​
Aishwarya Rai
Image Credit source: Pinterest
Follow us on

ಬಾಲಿವುಡ್ ಬ್ಯೂಟಿ, ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಬಚ್ಚನ್ ಇತ್ತೀಚೆಗೆ ಹೆಚ್ಚು ಸುದ್ದಿಯಲ್ಲಿದ್ದಾರೆ. ವೃತ್ತಿಪರ ಸಾಧನೆಗಳ ಬದಲಾಗಿ ದಾಂಪತ್ಯದಲ್ಲಿ ಬಿರುಕು, ಡಿವೋರ್ಸ್​​​ ಮುಂತಾದ ಕಾರಣಗಳಿಂದ ಹೆಚ್ಚು ಚರ್ಚೆಯಲ್ಲಿದ್ದಾರೆ. ಇದರೊಂದಿಗೆ ಸದಾ ಬ್ಯೂಟಿಯ ಕಡೆಗೆ ಗಮನ ಕೊಡುವ ಐಶ್ವರ್ಯ ದಿನದಿಂದ ದಿನಕ್ಕೆ ತೂಕ ಏರಿಸಿಕೊಳ್ಳುತ್ತಲೇ ಇರುವುದು ಮತ್ತು ಇತ್ತೀಚಿನ ಫ್ಯಾಷನ್ ಆಯ್ಕೆಗಳಿಂದಾಗಿ ಆನ್‌ಲೈನ್ನಲ್ಲಿ ಟ್ರೋಲ್​ ಆಗುತ್ತಿದ್ದಾರೆ

ಇತ್ತೀಚಿಗಷ್ಟೇ ಐಷಾರಾಮಿ ಬ್ರಾಂಡ್ ಲೋರಿಯಲ್‌ನ ಜಾಗತಿಕ ರಾಯಭಾರಿಯಾಗಿರುವ ಐಶ್ವರ್ಯಾ, 2024 ರ ಲೋರಿಯಲ್ ಪ್ಯಾರಿಸ್ ಫ್ಯಾಶನ್ ವೀಕ್​ನಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ನಟಿ ಧರಿಸಿದ್ದ ಕೆಂಪು ಬಣ್ಣದ ಉಡುಗೆ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಸೋಶಿಯಲ್​ ಮೀಡಿಯಾಗಳಲ್ಲಿ ಬಾಡಿ ಶೆಮಿಂಗ್​​​ ರೀತಿಯಲ್ಲಿ ನಟಿ ಟ್ರೋಲ್​ ಆಗುತ್ತಿದ್ದಂತೆ ರೆಡ್ಡಿಟ್ ಹಂಚಿಕೊಂಡಿರುವ ಪೋಸ್ಟ್ ಎಲ್ಲೆಡೆ ವೈರಲ್ ಆಗಿದೆ.

 

ಪೋಸ್ಟ್ ಪ್ರಕಾರ, “ನಾನು ಐಶ್ವರ್ಯ ಅವರನ್ನು ಸಾಕಷ್ಟು ವರ್ಷಗಳಿಂದ ನೋಡುತ್ತಿದ್ದೇನೆ. ಐಶ್ವರ್ಯಾ ಹಲವು ವರ್ಷಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಇದರಿಂದಾಗಿ ಡಯೆಟ್​ಗೆ ಮಾಡುತ್ತಿಲ್ಲ, ಜೊತೆಗೆ ತೂಕ ಇಳಿಸಿಕೊಳ್ಳುವ ಯಾವುದೇ ಔಷಧಿಗಳನ್ನು ಆಕೆ ತೆಗೆದುಕೊಳ್ಳುತ್ತಿಲ್ಲ. ಆದರೆ ನಾನು ಅವರ ಆರೋಗ್ಯ ಸಮಸ್ಯೆಯ ಬಗ್ಗೆ ಬಹಿರಂಗಪಡಿಸುವುದಿಲ್ಲ” ಎಂದು ಪೋಸ್ಟ್​​ನಲ್ಲಿ ಬರೆಯಲಾಗಿದೆ.

ಇದನ್ನೂ ಓದಿ: ಮಹಿಳೆ ಕಛೇರಿಗಳಲ್ಲಿ ಕೆಲಸ ಪಡೆಯಲು ಪತಿಯ ಅನುಮತಿ ಅಗತ್ಯ; 18 ದೇಶಗಳಲ್ಲಿ ಈ ನಿಯಮ ಜಾರಿಯಲ್ಲಿದೆ

ಪೋಸ್ಟ್​ ಎಲ್ಲೆಡೆ ವೈರಲ್​​ ಆಗುತ್ತಿದ್ದಂತೆ ಡಿಲೀಟ್​ ಮಾಡಲಾಗಿದೆ. ಸದ್ಯಕ್ಕೆ, ಐಶ್ವರ್ಯಾ ರೈ ಬಚ್ಚನ್ ಅಥವಾ ಅವರ ತಂಡವು ಅವರ ಆರೋಗ್ಯ ಸ್ಥಿತಿ ಅಥವಾ ಅವರ ವೈಯಕ್ತಿಕ ಜೀವನದ ಸುತ್ತ ಬೆಳೆಯುತ್ತಿರುವ ಊಹಾಪೋಹಗಳ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:48 pm, Thu, 26 September 24