ಅನೇಕರಿಗೆ ಆನ್‌ಲೈನ್ ಶಾಪಿಂಗ್ ಅಂದ್ರೆ ತುಂಬಾನೇ ಇಷ್ಟ. ಇಲ್ಲಿ ಹಲವಾರು ಡಿಸ್ಕೌಂಟ್‌ಗಳಿರುತ್ತೆ ಎಂಬ ಕಾರಣಕ್ಕೆ ಬಟ್ಟೆಗಳಿಂದ ಹಿಡಿದು ದುಬಾರಿ ಫೋನ್‌ಗಳವರೆಗೆ ಎಲ್ಲವನ್ನೂ ಆನ್‌ಲೈನ್‌ನಲ್ಲಿಯೇ ಖರೀದಿ ಮಾಡ್ತಾರೆ. ಇನ್ನೊಂದೆಡೆ ಆನ್‌ಲೈನ್ ಶಾಪಿಂಗ್‌ನಿಂದ ವಂಚನೆಗೊಳಗಾಗುವ ಗ್ರಾಹಕರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಯಾವುದೋ ದುಬಾರಿ ವಸ್ತುವನ್ನು ಆರ್ಡರ್ ಮಾಡಿದ್ರೆ, ಆನ್‌ಲೈನ್ ಡೆಲಿವರಿ ಕಂಪೆನಿ ಇನ್ಯಾವುದೋ ಕಳಪೆ ವಸ್ತುವನ್ನು ಡೆಲಿವರಿ ಮಾಡಿ ಗ್ರಾಹಕರಿಗೆ ಟೋಪಿ ಹಾಕುವಂತಹ ಪ್ರಕರಣಗಳು ಹೆಚ್ಚಾಗುತ್ತಿದೆ. ಇದೀಗ ಮತ್ತೊಂದು ಇಂತಹದ್ದೇ ಪ್ರಕರಣ ಬೆಳಕಿಗೆ ಬಂದಿದ್ದು, ಅಮೆಜಾನ್ ಮಹಿಳೆಯೊಬ್ಬರಿಗೆ ಜ್ಯುವೆಲರಿ ಬಾಕ್ಸ್ ಬದಲು ಈರುಳ್ಳಿಯನ್ನು ಡೆಲಿವರಿ ಮಾಡಿದೆ. ಅಮೆಜಾನ್ ಎಡವಟ್ಟಿನ ಕಥೆಯನ್ನು ಮಹಿಳೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ನಿಧಿ ಜೈನ್ ಎಂಬವರು ಅಮೆಜಾನ್‌ನಲ್ಲಿ 3 ಜ್ಯುವೆಲರಿ ಬಾಕ್ಸ್‌ಗಳನ್ನು ಆರ್ಡರ್ ಮಾಡಿದ್ದರು. ಅದರಲ್ಲಿ ಎರಡು ಆರ್ಡರ್ ಸರಿಯಾಗಿ ಬಂದಿದ್ದು, ಇನ್ನೊಂದು ಪಾರ್ಸೆಲ್‌ನಲ್ಲಿ ಅವರಿಗೆ ಜ್ಯುವೆಲರಿ ಬಾಕ್ಸ್ ಬದಲಿಗೆ ಈರುಳ್ಳಿಯನ್ನು ಕಳುಹಿಸಿಕೊಡಲಾಗಿದೆ. ಇದನ್ನು ನೋಡಿ ಶಾಕ್ ಆದ ನಿಧಿ ಕೂಡಲೇ ಅಮೆಜಾನ್ ಕಸ್ಟಮರ್ ಕೇರ್‌ಗೆ ದೂರನ್ನು ನೀಡಿದ್ದು, ಆದ್ರೆ ಕಂಪೆನಿ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಅವರು ಹೇಳಿದ್ದಾರೆ.
मैंने @amazon से 3 Jewelry Box ऑर्डर किए थे। 2 बॉक्स तो सही आए हैं, लेकिन एक बॉक्स के बदले गत्ते का डिब्बा आया है, जिसके अंदर से प्याज निकली है। मैंने इसकी कंप्लेन @AmazonHelp पर कर दी है, पर अभी तक कोई रिप्लाई नहीं आया है। @amazonIN @AmazonNews_IN pic.twitter.com/R0kDgN3ScS
— Nidhi Jain (@jainidhi125) November 27, 2024
ನಿಧಿ ಜೈನ್ (jainnidhi125) ಈ ವಿಡಿಯೋವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಎರಡು ಪಾರ್ಸೆಲ್ ಸರಿಯಾಗಿ ಬಂದಿದೆ ಇನ್ನೊಂದು ಬಾಕ್ಸ್‌ನಲ್ಲಿ ತಪ್ಪಾಗಿ ಈರುಳ್ಳಿಯನ್ನು ಕಳುಹಿಸಿಕೊಟ್ಟಿದ್ದಾರೆ ಎಂದು ಹೇಳಿರುವಂತಹ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: 2.56 ಕೋಟಿ ನಗದು, 75 ಲಕ್ಷ ಮೌಲ್ಯದ ಕಾರು: ಅದ್ದೂರಿ ಮದುವೆಯಲ್ಲಿ ವಧುವಿನ ಕುಟುಂಬದಿಂದ ವರನಿಗೆ ಬಂಪರ್ ಉಡುಗೊರೆ
ನವೆಂಬರ್ 27 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಈಗ ಈರುಳ್ಳಿಗೆ ಚಿನ್ನದ ಬೆಲೆ ಆಗಿದೆಯಲ್ಲವೇ ಅದಕ್ಕಾಗಿ ನಿಮ್ಗೆ ಅದನ್ನು ಕಳುಹಿಸಿದ್ದಾರೆʼ ಎಂದು ತಮಾಷೆಯ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಆದಷ್ಟು ಬೇಗ ಅಮೆಜಾನ್ ಇವರ ಹಣವನ್ನು ರಿಫಂಡ್ ಮಾಡ್ಬೇಕುʼ ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ