ಅಮೆಜಾನ್​​​ನಲ್ಲಿ 70,000 ಲಾಲಿಪಾಪ್ ಆರ್ಡರ್ ಮಾಡಿದ ಬಾಲಕ, ಮಗನ ಈ ಕೆಲಸಕ್ಕೆ ಶಾಕ್ ಆದ ತಾಯಿ

ಈಗಿನ ಕಾಲದ ಮಕ್ಕಳು ಬಹಳ ಚುರುಕು, ಹೀಗಾಗಿ ಕೈಯಲ್ಲಿ ಮೊಬೈಲ್ ಕೊಟ್ಟರೆ ಸಾಕು, ಅದನ್ನು ಅಷ್ಟೇ ಸುಲಭವಾಗಿ ಆಪರೇಟ್ ಮಾಡುತ್ತಾರೆ. ಕೈಯಲ್ಲಿ ಮೊಬೈಲ್ ಸಿಕ್ಕರೆ ಮಾಡುವ ಎಡವಟ್ಟುಗಳು ಒಂದೆರಡಲ್ಲ. ಹೌದು, ಇಲ್ಲೊಬ್ಬ ಬಾಲಕನು ತನ್ನ ತಾಯಿಯ ಮೊಬೈಲ್ ನಿಂದ ಲಾಲಿಪಾಪ್ ಆರ್ಡರ್ ಮಾಡಿದ್ದಾನೆ. ಹೌದು ಬರೋಬ್ಬರಿ 70,000 ಲಾಲಿಪಾಪ್ ಆರ್ಡರ್ ಮಾಡಿದ್ದು ಇದರ ಬೆಲೆ ಕೇಳಿದ್ರೆ ತಲೆ ಗ್ರಿರ್ ಎನ್ನುತ್ತದೆ. ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ಅಮೆಜಾನ್​​​ನಲ್ಲಿ 70,000 ಲಾಲಿಪಾಪ್ ಆರ್ಡರ್ ಮಾಡಿದ ಬಾಲಕ, ಮಗನ ಈ ಕೆಲಸಕ್ಕೆ ಶಾಕ್ ಆದ ತಾಯಿ
ವೈರಲ್​​ ಫೋಟೋ
Updated By: ಅಕ್ಷಯ್​ ಪಲ್ಲಮಜಲು​​

Updated on: May 12, 2025 | 10:55 AM

ಅಮೇರಿಕಾ, ಮೇ 12: ಮಕ್ಕಳಿಗೆ ಚಾಕೊಲೇಟ್ (chocolate) ಎಂದರೆ ಇಷ್ಟ. ಹೀಗಾಗಿ ಸಹಜವಾಗಿ ತನಗೆ ಚಾಕೊಲೇಟ್ ಬೇಕೆಂದು ಹಠ ಮಾಡುವುದನ್ನು ನೋಡಿರಬಹುದು. ಆದರೆ ಈ ಬಾಲಕ ಮಾತ್ರ ತನಗೆ ಬೇಕಾದಷ್ಟು ಚಾಕಲೇಟನ್ನು ಆನ್ಲೈನ್ ನಲ್ಲಿ ಆರ್ಡರ್ ಮಾಡಿದ್ದಾನೆ. ಹೌದು, ಅಮೆರಿಕ (america) ದಲ್ಲಿ 8 ವರ್ಷದ ಬಾಲಕನೊಬ್ಬನು ಅಮೆಜಾನ್ ನಲ್ಲಿ 70,000 ಲಾಲಿಪಾಪ್‌ (lollipop) ಗಳನ್ನು ಆರ್ಡರ್ ಮಾಡಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಇದರ ಬೆಲೆ ಬರೋಬ್ಬರಿ 3.3 ಲಕ್ಷ ರೂಪಾಯಿಯಾಗಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಗುವಿನ ತಾಯಿ ಹಂಚಿಕೊಂಡಿದ್ದಾಳೆ.

ಮಗುವು ಆನ್ಲೈನ್ ನಲ್ಲಿ ಲಾಲಿಪಾಪ್ ಆರ್ಡರ್ ಮಾಡಿರುವುದೇ ತಾಯಿಗೆ ತಿಳಿದಿರಲಿಲ್ಲ. ತನ್ನ ಕ್ರೆಡಿಟ್ ಕಾರ್ಡ್‌ನಿಂದ ಭಾರಿ ಮೊತ್ತವನ್ನು ಕಡಿತಗೊಳಿಸಲಾಗಿದೆ ಎಂಬ ಮೆಸೇಜ್ ಬಂದಾಗ ಶಾಕ್ ಆಗಿದೆ. ಅದಲ್ಲದೇ, ಮನೆಯ ಬಾಗಿಲಿಗೆ ಲಾಲಿಪಾಪ್‍ಗಳ ಬಾಕ್ಸ್‌ಗಳನ್ನು ಬಂದಿದ್ದು, ಇದನ್ನು ಪರಿಶೀಲಿಸಿದಾಗ ತನ್ನ ಮಗ ಆನ್ಲೈನ್ ನಲ್ಲಿ ಲಾಲಿಪಾಪ್ ಆರ್ಡರ್ ಮಾಡಿರುವುದು ತಿಳಿದು ಬಂದಿದೆ. ಅದಲ್ಲದೇ ಈಗಾಗಲೇ ಆರ್ಡರ್ ಮಾಡಿದ್ದ 22 ಬಾಕ್ಸ್‌ಗಳು ಮನೆಗೆ ಬಂದು ತಲುಪಿದ್ದು, ಇನ್ನು 8 ಬಾಕ್ಸ್ ಲಾಲಿಪಾಪ್ ಬರಬೇಕಿತ್ತು.

ಇದನ್ನೂ ಓದಿ
ಮದ್ವೆಯಲ್ಲಿ ಫೋಟೋಗ್ರಾಫರ್ ಬಗ್ಗೆಯೂ ಇರಲಿ ಗಮನ, ಇಲ್ಲದಿದ್ರೆ ಹೀಗೆ ಆಗ್ಬಹುದು
ಕೈ ತುಂಬಾ ಸಂಬಳವಿದ್ರು ಈ ಉದ್ಯೋಗಿಗೆ ಜಾಬ್ ನಲ್ಲಿ ತೃಪ್ತಿಯೇ ಇಲ್ವಂತೆ
ಈ ಪ್ರಶ್ನೆಯಲ್ಲೇ ಅಡಗಿದೆ ವೃದ್ಧನ ಹೆಸರು, ಈ ಹೆಸರು ಏನೆಂದು ಹೇಳಬಲ್ಲಿರಾ?
ಇವ್ನು ಅಪ್ಡೇಟೆಡ್ ಭಿಕ್ಷುಕ, ಡೌಟ್ ಇದ್ರೆ ಈ ವಿಡಿಯೋ ನೋಡಿ

ಅದಲ್ಲದೇ ತನ್ನ ಖಾತೆಯಿಂದ 3.3 ಲಕ್ಷ ರೂ ಹಣವು ಕಟ್ ಗಿದ್ದು, ಕೊನೆಗೆ ಇನ್ನು ಡೆಲಿವರಿ ಆಗಬೇಕಿದ್ದ 8 ಬಾಕ್ಸ್‌ಗಳನ್ನು ಅದೇಗೆ ಅಮೆಜಾನ್ ಅವರ ಮನವೊಲಿಸಿ ಹಿಂದಿರುಗಿಸಲು ಮುಂದದಾಗ ಅವರು ನಿರಾಕರಿಸಿದ್ದಾರೆ. ಆದರೆ ಆಕೆ ಮಾತ್ರ ಬ್ಯಾಂಕ್ ಹಾಗೂ ಮಾಧ್ಯಮದರನ್ನು ಸಂಪರ್ಕಿಸಿದ್ದು, ಅಮೆಜಾನ್ ಅವರು ಆಕೆಗೆ ಕರೆ ಮಾಡಿ ಹಣವನ್ನು ಮರುಪಾವತಿಸುವುದಾಗಿ ಒಪ್ಪಿಕೊಂಡಿದೆ. ಅದಲ್ಲದೇ ಈ ಘಟನೆಯ ಬಳಿಕ ಮಹಿಳೆಯೂ ತನ್ನ ಮೊಬೈಲ್ ಸೆಟ್ಟಿಂಗ್ ಬದಲಾಯಿಸಿರುವ ಬಗ್ಗೆ ಹೇಳಿಕೊಂಡಿದ್ದಾಳೆ.

ಇದನ್ನೂ ಓದಿ : ಮದುವೆಯಲ್ಲಿ ತನ್ನ ಬಗ್ಗೆ ವಿಚಾರಿಸಿಲ್ಲ ಎಂದು ಕೋಪಗೊಂಡ ಫೋಟೋಗ್ರಾಫರ್ ಮಾಡಿದ್ದೇನು ಗೊತ್ತಾ?

ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಳ್ಳುತ್ತಿದ್ದಂತೆ ಈ ಬಾಲಕ ಮಾಡಿದ ಎಡವಟ್ಟಿಗೆ ಈ ಮಹಿಳೆಗೆ ಬುದ್ಧಿ ಹೇಳಿದ್ದಾರೆ. ಬಳಕೆದಾರರೊಬ್ಬರು, ‘ಮಕ್ಕಳ ಕೈಗೆ ಮೊಬೈಲ್ ಕೊಡುವ ಮುನ್ನ ಜೋಕೆ, ಲಕ್ಷಾನುಗಟ್ಟಲೇ ದುಡ್ಡು ಕಳೆದುಕೊಳ್ಳ ಬೇಕಾದಿತು’ ಎಂದಿದ್ದಾರೆ. ಇನ್ನೊಬ್ಬರು, ‘ಮೊಬೈಲ್ ಗೆ ಪಾಸ್ ವರ್ಡ್ ಹಾಗೂ ಸೇರಿದಂತೆ ಇನ್ನಿತ್ತರ ಲಾಕ್ ಹಾಕುವುದು ಒಳ್ಳೆಯದು’ ಎಂದಿದ್ದಾರೆ. ಮತ್ತೊಬ್ಬರು, ‘ಇಂತಹ ಘಟನೆಗಳು ಈಗಾಗಲೇ ಎಷ್ಟೋ ಬಾರಿ ಆಗಿದೆ. ಹೀಗಾಗಿ ಮಕ್ಕಳ ಕೈಗೆ ಮೊಬೈಲ್ ಕೊಡುವ ಮುನ್ನ ಜೋಪಾನ’ ಎಂದು ಕಾಮೆಂಟ್ ನಲ್ಲಿ ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ