ಪರೀಕ್ಷೆ ಬರೆಯಲು ಬಂದ ಅಭ್ಯರ್ಥಿಯ ಹಾಲ್ ಟಿಕೆಟ್ ಎಗರಿಸಿದ ಹದ್ದು, ಕಂಗಲಾದ ಅಭ್ಯರ್ಥಿ

ಹಾಲ್ ಟಿಕೆಟ್ ಇಲ್ಲದೇ ಹೋದರೆ ಪರೀಕ್ಷೆ ಬರೆಯಲು ಸಾಧ್ಯವಿಲ್ಲ. ಪರೀಕ್ಷೆಯ ದಿನ ಹಾಲ್ ಟಿಕೆಟ್ ಕಳೆದುಕೊಂಡರೆ ಅಥವಾ ಮರೆತು ಮನೆಯಲ್ಲೇ ಬಿಟ್ಟು ಬಂದರೆ ಆ ಕ್ಷಣ ಹೇಗಿರಬಹುದು ಎಂದು ಊಹಿಸಿದ್ದೀರಾ. ಆದರೆ ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಅಭ್ಯರ್ಥಿಯ ಹಾಲ್ ಟಿಕೆಟ್ ವೊಂದನ್ನೂ ಹದ್ದು ಎತ್ತಿಕೊಂಡು ಹೋಗಿದೆ. ಈ ವಿಡಿಯೋಗೆ ನೆಟ್ಟಿಗರು ಕಾಮೆಂಟ್ ಗಳ ಸುರಿಮಳೆಗೈದಿದ್ದಾರೆ.

ಪರೀಕ್ಷೆ ಬರೆಯಲು ಬಂದ ಅಭ್ಯರ್ಥಿಯ ಹಾಲ್ ಟಿಕೆಟ್ ಎಗರಿಸಿದ ಹದ್ದು, ಕಂಗಲಾದ ಅಭ್ಯರ್ಥಿ
ವೈರಲ್​​ ವಿಡಿಯೋ
Edited By:

Updated on: Apr 12, 2025 | 12:08 PM

ಕೇರಳ, ಏಪ್ರಿಲ್ 12 : ಸಾಮಾನ್ಯವಾಗಿ ಕೋತಿ (monkey) ಗಳು ಚೇಷ್ಟೆ ಮಾಡುವುದನ್ನು ನೋಡಿರಬಹುದು. ಕೈಯಲ್ಲಿರುವ ವಸ್ತುಗಳು, ಮೊಬೈಲ್ (mobile) , ತಿಂಡಿ ತಿನಿಸನ್ನು ಕಿತ್ತುಕೊಂಡು ಹೋಗುತ್ತದೆ. ಆಮೇಲೆ ಹೇಗೋ ಹರಸಾಹಸ ಮಾಡಿ ಕೋತಿಯ ಕೈಯಲ್ಲಿರುವ ವಸ್ತುಗಳನ್ನು ಮರಳಿ ಪಡೆಯುವ ವಿಡಿಯೋಗಳು ಸೋಶಿಯಲ್ ಮೀಡಿಯಾ (social media) ದಲ್ಲಿ ಆಗಾಗ ವೈರಲ್ ಆಗುತ್ತಿರುತ್ತದೆ. ಆದರೆ ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಹದ್ದೊಂದು (eagle) ಪರೀಕ್ಷೆ ಬರೆಯಲು ಬಂದ ಅಭ್ಯರ್ಥಿಯ ಹಾಲ್​ ಟಿಕೆಟ್ (hall ticket) ಕದ್ದೊಯ್ದಿದೆ. ಈ ಘಟನೆಯೂ ಕೇರಳ (kerala) ದ ಕಾಸರಗೋಡಿ (kasaragod) ನ ಶಾಲೆ (school) ಯಲ್ಲಿ ನಡೆದಿದೆ.

ಹೌದು, ಶಾಲೆಯೊಂದರಲ್ಲಿ ಸಾರ್ವಜನಿಕ ಸೇವಾ ಆಯೋಗದ ಪರೀಕ್ಷೆ ನಡೆಯುತ್ತಿತ್ತು. ಹೀಗಾಗಿ ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಶಾಲೆಗೆ ಬಂದಿದ್ದರು. ಆದರೆ ಈ ವೇಳೆಯಲ್ಲಿ ಹದ್ದೊಂದು ಪರೀಕ್ಷೆ ಬರೆಯಲು ಬಂದ ಅಭ್ಯರ್ಥಿಯ ಹಾಲ್​ ಟಿಕೆಟ್ ಕದ್ದೊಯ್ದು ಕಿಟಕಿಯ ಮೇಲೆ ಹೋಗಿ ಕುಳಿತಿದೆ. indiayesterday ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಅಭ್ಯರ್ಥಿಯ ಹಾಲ್ ಟಿಕೆಟ್ ಕದ್ದೊಯ್ದು ಕಿಟಕಿಯ ಮೇಲೆ ಕುಳಿತಿರುವುದನ್ನು ಕಾಣಬಹುದು. ಹದ್ದಿನಿಂದ ಹಾಲ್ ಟಿಕೆಟ್ ಪಡೆಯಲು ನಾನಾ ರೀತಿಯ ಪ್ರಯತ್ನಗಳು ನಡೆದಿದ್ದು ಕೊನೆಗೆ ಹಾಲ್ ಟಿಕೆಟನ್ನು ಬಿಟ್ಟಿದೆ. ಹಾಲ್ ಸಿಗುತ್ತಿದ್ದಂತೆ ಅಭ್ಯರ್ಥಿಯೂ ಒಂದು ಕ್ಷಣ ನಿಟ್ಟುಸಿರು ಬಿಟ್ಟಿದ್ದು ಪರೀಕ್ಷೆ ಬರೆದಿದ್ದಾರೆ.

ಇದನ್ನೂ ಓದಿ : ಜಮೀನಲ್ಲಿದ್ದ ರಕ್ತ ಚಂದನದ ಮರದಿಂದ ಈ ರೈತನಿಗೆ ಖುಲಾಯಿಸಿತು ಅದೃಷ್ಟ, ಕೇಶವ್ ಶಿಂದೆ ಕೈ ಸೇರಿತು ಕೋಟಿ ರೂಪಾಯಿ

ವೈರಲ್​​​ ವಿಡಿಯೋ ಇಲ್ಲಿದೆ ನೋಡಿ:

 


ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ವೀಕ್ಷಣೆ ಪಡೆದುಕೊಂಡಿದ್ದು ನೆಟ್ಟಿಗರು ನಾನಾ ರೀತಿಯ ಕಾಮೆಂಟ್ ಗಳನ್ನು ಮಾಡಿದ್ದಾರೆ. ಒಬ್ಬ ಬಳಕೆದಾರ, ‘ಹದ್ದಿಗೂ ಕೂಡ ಪರೀಕ್ಷೆ ಬರೆಯುವ ಮನಸ್ಸಾಗಿತ್ತು ಕಾಣಿಸುತ್ತೆ ಅದಕ್ಕೆ ಹೀಗೆ ಮಾಡಿದೆ’ ಎಂದಿದ್ದಾರೆ. ಮತ್ತೊಬ್ಬ ಬಳಕೆದಾರರು, ‘ಹಾಲ್ ಟಿಕೆಟ್ ಹಿಡಿದು ಹಾರಿ ಹೋಗಿದ್ದರೆ ಏನಾಗುತ್ತಿತ್ತು ಎಂದು ಒಮ್ಮೆ ಯೋಚಿಸಿ’ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ. ಇನ್ನೊಬ್ಬರು, ‘ಒಂದು ಕ್ಷಣ ಅಭ್ಯರ್ಥಿಗೆ ಓದಿದ ವಿಷಯವೆಲ್ಲಾ ಮರೆತು ಹೋಗಿರಬಹುದು’ ಎಂದು ಹೇಳಿದ್ದಾರೆ.

ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 12:08 pm, Sat, 12 April 25