AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಮೀನಲ್ಲಿದ್ದ ರಕ್ತ ಚಂದನದ ಮರದಿಂದ ಈ ರೈತನಿಗೆ ಖುಲಾಯಿಸಿತು ಅದೃಷ್ಟ, ಕೇಶವ್ ಶಿಂದೆ ಕೈ ಸೇರಿತು ಕೋಟಿ ರೂಪಾಯಿ

ಅದೃಷ್ಟ ಯಾವಾಗ ಹೇಗೆ ಖುಲಾಯಿಸುತ್ತದೆ ಎಂದು ಹೇಳುವುದು ಕಷ್ಟ. ಆದರೆ ಕೇಶವ್ ಶಿಂದೆ ಎನ್ನುವ ರೈತನು ರಾತ್ರಿ ಕಳೆದು ಬೆಳಗಾಗುವುದರೊಳಗಾಗಿ ಕೋಟ್ಯಧಿಪತಿಯಾಗಿದ್ದಾನೆ. ಹೌದು ತನ್ನ ಜಮೀನಿನಲ್ಲಿರುವ ಒಂದೇ ಒಂದು ರಕ್ತಚಂದನದ ಮರದಿಂದಲೇ ಈತನ ಅದೃಷ್ಟ ಕೈ ಹಿಡಿದಿದೆ ಎಂದರೆ ನಿಮಗೆ ನಂಬುವುದಕ್ಕೂ ಕಷ್ಟವಾಗಬಹುದು. ರೈಲ್ವೆ ಯೋಜನೆಗಾಗಿ ಕೇಶವ್ ಶಿಂದೆ ಜಮೀನನ್ನು ಸ್ವಾಧೀನ ಪಡಿಸಿಕೊಂಡು ಪರಿಹಾರ ಹಣ ನೀಡಿತ್ತು. ಆದರೆ ರೈಲ್ವೆ ಇಲಾಖೆಯೂ ತನ್ನ ಜಮೀನಲ್ಲಿದ ನೂರು ವರ್ಷ ಹಳೆಯ ರಕ್ತಚಂದನದ ಮರಕ್ಕೆ ಪರಿಹಾರ ಹಣ ನೀಡಬೇಕೆಂದು ನ್ಯಾಯಾಲಯ ಮೊರೆ ಹೋಗಿದ್ದ ರೈತನ ಅದೃಷ್ಟವು ಖುಲಾಯಿಸಿದೆ. ಆ ಕುರಿತಾದ ಕುತೂಹಲಕಾರಿ ಮಾಹಿತಿ ಇಲ್ಲಿದೆ.

ಜಮೀನಲ್ಲಿದ್ದ ರಕ್ತ ಚಂದನದ ಮರದಿಂದ ಈ ರೈತನಿಗೆ ಖುಲಾಯಿಸಿತು ಅದೃಷ್ಟ, ಕೇಶವ್ ಶಿಂದೆ ಕೈ ಸೇರಿತು ಕೋಟಿ ರೂಪಾಯಿ
ವೈರಲ್​​ ಪೋಸ್ಟ್​
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​|

Updated on: Apr 11, 2025 | 6:04 PM

Share

ಮಹಾರಾಷ್ಟ್ರ, ಏಪ್ರಿಲ್ 11: ಇವತ್ತು ಬಡತನ (poverty) ದಲ್ಲಿದ್ದ ವ್ಯಕ್ತಿಯೂ ಭವಿಷ್ಯದಲ್ಲಿ ಬಡವನಾಗಿಯೇ ಇರುತ್ತಾನೆ ಎಂದು ಹೇಳುವುದು ಕಷ್ಟ. ಅದೃಷ್ಟವಿದ್ದರೆ ವ್ಯಕ್ತಿಯ ಬದುಕಿನ ದಾಟಿಯೇ ಬದಲಾಗಬಹುದು. ಇದಕ್ಕೆ ಉದಾಹರಣೆ ಎಂಬಂತೆ ಮಹಾರಾಷ್ಟ್ರ (maharastra) ದ ಯಾವತ್ಮಲ್ ಜಿಲ್ಲೆ (yavatmal district) ಯ ರೈತ ಕೇಶವ್ ಶಿಂಧೆ (keshav shinde) ಇದ್ದಾರೆ. ಹೌದು, ತನ್ನ ಜಮೀನಿನಲ್ಲಿದ್ದ ನೂರು ವರ್ಷ ಹಳೆಯ ರಕ್ತಚಂದನದ ಮರ (red sandalwood tree) ವೇ ರೈತನಿಗೆ ವರದಾನವಾಗಿದೆ. ತನ್ನ ಜಮೀನಿನಲ್ಲಿದ್ದ ರಕ್ತಚಂದನದ ಮರಕ್ಕೆ ರೈಲ್ವೆ ಇಲಾಖೆ (railway department) ಯೂ ಪರಿಹಾರ ನೀಡದೇ ಇದ್ದ ಕಾರಣ ಹೈಕೋರ್ಟ್ (highcourt) ಮೆಟ್ಟಿಲೇರಿದ್ದ ಕೇಶವ್ ಅವರಿಗೆ ಒಂದು ಕೋಟಿ ರೂಪಾಯಿ ಠೇವಣಿ ಇಡಲಾಗಿದೆ.

ಹೌದು, ಯವತ್ಮಾಲ್ ಜಿಲ್ಲೆಯ ಖರ್ಶಿ ಗ್ರಾಮದಲ್ಲಿ (ಪುಸಾದ್ ತಾಲೂಕು) ರೈತನಿಗೆ ಸೇರಿದ ಭೂಮಿಯನ್ನು ವಾರ್ಧಾ-ಯವತ್ಮಾಲ್-ನಾಂದೇಡ್ ರೈಲ್ವೆ ಯೋಜನೆಗಾಗಿ ಸ್ವಾಧೀನಪಡಿಸಿಕೊಂಡಿತ್ತು. ಈ ವೇಳೆಯಲ್ಲಿ ಸ್ವಾಧೀನ ಪಡಿಸಿಕೊಂಡ ರೈತನ ಭೂಮಿಗೆ ಇಂತಿಷ್ಟು ಪರಿಹಾರ ಹಣವು ಸಿಕ್ಕಿತು. ಆದರೆ 2013 – 2014 ಸಮಯದಲ್ಲಿ ರೈಲು ಮಾರ್ಗವನ್ನು ನೋಡಲು ಕರ್ನಾಟಕ ಸೇರಿದಂತೆ ಇನ್ನಿತ್ತರ ಭಾಗದಿಂದ ಜನರು ಬಂದಿದ್ದರು. ಈ ವೇಳೆಯಲ್ಲಿ ಜಮೀನಲ್ಲಿರುವುದು ರಕ್ತಚಂದನದ ಮರ. ಇದು ಕೋಟಿಗಟ್ಟಲೆ ಬೆಲೆ ಬಾಳುತ್ತದೆ ಎನ್ನುವ ಬಗ್ಗೆ ಕೇಶವ್ ಅವರಿಗೆ ತಿಳಿಸಿದ್ದರು. ಈ ವೇಳೆಯಲ್ಲಿ ರೈಲ್ವೆ ಇಲಾಖೆಯೂ ರಕ್ತ ಚಂದನ ಮರಕ್ಕೆ ಪರಿಹಾರವಾಗಿ ಯಾವುದೇ ಮೊತ್ತವನ್ನು ನೀಡಿರಲಿಲ್ಲ. ಹೀಗಾಗಿ ಕೇಶವ್ ಸೇರಿದಂತೆ ಕುಟುಂಬಸ್ಥರು ಖಾಸಗಿ ಸಂಸ್ಥೆಯಿಂದ ಈ ಮರವನ್ನು ಮೌಲ್ಯ ಮಾಪನ ಮಾಡಿಸಿದಾಗ, ಇದಕ್ಕೆ ನಾಲ್ಕು ಕೋಟಿ ತೊಂಭತ್ತೇಳು ಲಕ್ಷ ರೂಪಾಯಿ ಬೆಲೆ ಬಾಳುತ್ತದೆ ಎಂದು ತಿಳಿಯಿತು.

ವೈರಲ್​​ ಪೋಸ್ಟ್​​ ಇಲ್ಲಿದೆ ನೋಡಿ:

ಹಿಂದೆ ಮುಂದೆ ನೋಡದೆ ರೈತ ಕೇಶವ್ ಶಿಂದೆಯವರು ತನ್ನ ಭೂಮಿಯಲ್ಲಿದ್ದ ರಕ್ತ ಚಂದನ ಮರಕ್ಕೆ ರೈಲ್ವೆ ಇಲಾಖೆಯಿಂದ ಯಾವುದೇ ಪರಿಹಾರ ಹಣ ಸಿಗದ ಕಾರಣ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ಫೆಬ್ರವರಿ 8, 2018 ರಂದು, ಪುಸಾದ್‌ನ ಭೂಸ್ವಾಧೀನ ಅಧಿಕಾರಿಯ ಬಳಿ ರಕ್ತ ಚಂದನ ಮರ, ಇತರ ಮರಗಳು ಮತ್ತು ಪೈಪ್‌ಲೈನ್‌ಗಳಿಗೆ ಸಂಬಂಧಿಸಿದಂತೆ ಪರಿಹಾರ ಕೋರಿ ಅರ್ಜಿದಾರ ಕೇಶವ್ ಶಿಂದೆ ಬೇಡಿಕೆ ಇಟ್ಟಿದ್ದರು. ಆದರೆ ಅವರ ಈ ಬೇಡಿಕೆಯನ್ನು ತಿರಸ್ಕರಿಸಲಾಗಿತ್ತು. ಕೊನೆಗೆ ಈ ರೈತ ಯವತ್ಮಾಲ್ ಜಿಲ್ಲಾಧಿಕಾರಿಗೂ ಅರ್ಜಿಯನ್ನು ಸಲ್ಲಿಸಿದ್ದು ಯಾವುದೇ ಪ್ರಯೋಜನವಾಗಲಿಲ್ಲ. ಸುಮ್ಮನೆ ಕುಳಿತರೆ ಆಗದು ಎಂದುಕೊಂಡು ಹೈಕೋರ್ಟ್‌ ಮೊರೆ ಹೋದರು.

ಇದನ್ನೂ ಓದಿ : ಓಯೋ ರೂಮ್​​​ನಲ್ಲಿ ಮೈ ಮರೆತ ಜೋಡಿಗಳು, ಬಾಗಿಲು ಮುಚ್ಚಿ ಎಂದು ಹೇಳಿ ಮಾನ ಉಳಿಸಿದ ವ್ಯಕ್ತಿ

ನ್ಯಾಯಮೂರ್ತಿ ಅವಿನಾಶ್ ಖರೋಟೆ ಹಾಗೂ ನ್ಯಾಯಮೂರ್ತಿ ಅಭಯ್ ಮಂತ್ರಿ ಅವರ ಸಮ್ಮುಖದಲ್ಲಿ ನಡೆದ ಅರ್ಜಿ ವಿಚಾರಣೆಯ ವೇಳೆಯಲ್ಲಿ ರೈತನಿಗೆ ತಕ್ಷಣವೇ ಪರಿಹಾರವನ್ನು ನೀಡಲು ಹೈ ಕೋರ್ಟ್ ಆದೇಶಿಸಿದೆ. ಅದರಂತೆ, ಕೇಂದ್ರ ರೈಲ್ವೆ ಇಲಾಖೆಯೂ ಬಾಂಬೆ ಹೈಕೋರ್ಟ್ ನ ನಾಗ್ಪುರ ಪೀಠದಲ್ಲಿ ಒಂದು ಕೋಟಿ ರೂಪಾಯಿ ಠೇವಣಿ ಇಡಲಾಗಿದೆ. ಅದರಲ್ಲಿ ಐವತ್ತು ಲಕ್ಷ ರೂಪಾಯಿ ಹಣವನ್ನು ರೈತನಿಗೆ ನೀಡಿದ್ದು, ಈ ಮರದ ಮೌಲ್ಯಮಾಪನದ ಬಳಿಕ ಉಳಿದ ಪರಿಹಾರದ ಹಣವು ರೈತ ಕೇಶವ್ ಶಿಂದೆ ಕೈಸೇರಲಿದೆ.

ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ