ಇದೇ ನೋಡಿ ತಾಯಿ ಪ್ರೀತಿ : ಮಳೆಯಲ್ಲಿ ಒದ್ದೆಯಾಗುತ್ತಿರುವ ಮರಿಗಳ ರಕ್ಷಣೆಗೆ ನಿಂತ ತಾಯಿ ಕೋಳಿ
ತಾಯಿ ಪ್ರೀತಿಯೇ ಹಾಗೇ, ಈ ಪರಿಶುದ್ಧವಾದ ಪ್ರೀತಿಗೆ ಬೆಲೆಕಟ್ಟಲು ಸಾಧ್ಯವೇ ಇಲ್ಲ. ಮಕ್ಕಳ ಸಂತೋಷದಲ್ಲೇ ತನ್ನ ಖುಷಿಯನ್ನು ಕಾಣುತ್ತಾಳೆ. ಪ್ರಾಣಿ ಪಕ್ಷಿಗಾಳಿ ಕೂಡ ಹೊರತಾಗಿಲ್ಲ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ತಾಯಿ ಕೋಳಿಯೊಂದು ತನ್ನ ಮರಿಗಳನ್ನು ಮಳೆಯಲ್ಲಿ ಒದ್ದೆಯಾಗುತ್ತಿದ್ದಂತೆ ರೆಕ್ಕೆ ಪುಕ್ಕಗಳನ್ನೂ ಅಗಲಿಸಿ ರಕ್ಷಿಸುತ್ತಿದೆ. ವೈರಲ್ ಆಗಿರುವ ಈ ವಿಡಿಯೋಗೆ ಸೋಶಿಯಲ್ ಮೀಡಿಯಾ ಬಳಕೆದಾರರು ಕಾಮೆಂಟ್ ಗಳ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.

ಕಣ್ಣಿಗೆ ಕಾಣುವ ದೇವರು ಎಂದರೆ ಅದುವೇ ತಾಯಿ (mother). ಹೌದು, ತನ್ನ ಕರುಳ ಕುಡಿಯ ರಕ್ಷಣೆಗಾಗಿ ತಾಯಿಯಾದವಳು ಎಷ್ಟೇ ಕಷ್ಟವನ್ನು ಎದುರಿಸಬಲ್ಲಳು. ತನ್ನ ಪ್ರಾಣ ಹೋಗುವ ಸಂದರ್ಭ ಎದುರಾದರೂ ಸರಿಯೇ ಯಾವುದನ್ನೂ ಲೆಕ್ಕಿಸದೆ ತನ್ನ ಕಂದಮ್ಮನನ್ನು ರಕ್ಷಿಸುತ್ತಾಳೆ. ಹೀಗಾಗಿ ನಿಷ್ಕಲ್ಮಶವಾದ ತಾಯಿ ಪ್ರೀತಿ ತ್ಯಾಗಕ್ಕೆ ಬೆಲೆ ಕಟ್ಟಲಾಗದು. ಈ ವಿಚಾರದಲ್ಲಿ ಮನುಷ್ಯರಿಗಿಂತ ಮೂಕ ಪ್ರಾಣಿ-ಪಕ್ಷಿ (animals – birds) ಗಳ ಕೂಡ ಹೊರತಾಗಿಲ್ಲ. ಈ ಮೂಕ ಜೀವಿಗಳು ಕೂಡ ಜೀವದ ಹಂಗು ತೊರೆದು ಅಪಾಯಕ್ಕೆ ಸಿಲುಕಿದ ತನ್ನ ಮರಿ (chicks) ಗಳನ್ನು ತಾಯಿ ಕೋಳಿ (hen)ರಕ್ಷಿಸಿರುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ (viral) ಆಗುತ್ತಿರುತ್ತದೆ. ಮಳೆಯಲ್ಲಿ ಒದ್ದೆಯಾಗುತ್ತಿರುವ ತನ್ನ ಮರಿಗಳನ್ನು ರಕ್ಷಿಸುತ್ತಿರುವ ಹೃದಯಸ್ಪರ್ಶಿ ವಿಡಿಯೋವೊಂದು ವೈರಲ್ ಆಗುತ್ತಿದೆ.
Massimo ಹೆಸರಿನ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾದ ವಿಡಿಯೋದಲ್ಲಿ ಜೋರಾಗಿ ಮಳೆ ಸುರಿಯುತ್ತಿದ್ದು ಕೋಳಿಯೊಂದು ತನ್ನ ಮರಿಗಳೊಂದಿಗೆ ಮಳೆಯಲ್ಲಿ ನೆನೆಯುತ್ತಿರುವುದನ್ನು ನೋಡಬಹುದು. ಆದರೆ ತನ್ನ ಮರಿಗಳು ಒದ್ದೆಯಾಗಬಾರದೆಂದು ತನ್ನ ರೆಕ್ಕೆಗಳನ್ನು ಹರಡಿಕೊಂಡು ಮರಿಗಳನ್ನು ರಕ್ಷಿಸಿದೆ. ಈ ವಿಡಿಯೋದಲ್ಲಿ ತಾಯಿ ಕೋಳಿ ಸಂಪೂರ್ಣವಾಗಿ ಒದ್ದೆಯಾಗುತ್ತಿರುವುದನ್ನು ನೋಡಬಹುದು.
ಇದನ್ನೂ ಓದಿ : ವೀರಮಾತೆ! ಬೆಂಕಿಯಿಂದ ಮಕ್ಕಳನ್ನು ಕಾಪಾಡಲು ಅಮ್ಮ ಮಾಡಿದ ಸಾಹಸ ನೀವೇ ನೋಡಿ
ವೈರಲ್ ವಿಡಿಯೋ ಇಲ್ಲಿದೆ ನೋಡಿ:
A mother hen protecting her chicks from the rainpic.twitter.com/kw6quXKPYJ
— Massimo (@Rainmaker1973) April 10, 2025
ಈ ವಿಡಿಯೋ ಈಗಾಗಲೇ ತೊಂಭತ್ತಾನಾಲ್ಕು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಸೋಶಿಯಲ್ ಮೀಡಿಯಾದಲ್ಲಿ ಬಳಕೆದಾರರು ಕಾಮೆಂಟ್ ಗಳ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಳಕೆದಾರರು, ‘ಇದೇ ನಿಜವಾದ ತಾಯಿ ಪ್ರೀತಿ, ತಾಯಿ ತನ್ನ ಮಕ್ಕಳ ರಕ್ಷಣೆಗೆ ಸದಾ ನಿಲ್ಲುತ್ತಾಳೆ’ ಎಂದಿದ್ದಾರೆ. ಇನ್ನೊಬ್ಬ ಬಳಕೆದಾರರು, ‘ಮನುಷ್ಯರಲ್ಲಿ ಮಾತ್ರವಲ್ಲ, ಈ ಪ್ರಾಣಿ ಪಕ್ಷಿಗಳಲ್ಲೂ ತಾಯಿ ಇರುತ್ತಾಳೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊರ್ವ ಬಳಕೆದಾರರು, ‘ಮಳೆಯಿರಲಿ, ಬಿಸಿಲಿರಲಿ ರಕ್ಷಣೆಗೆ ನಿಲ್ಲುವುದು ತಾಯಿ ಮಾತ್ರ’ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ. ಕೆಲವರು ಈ ವಿಡಿಯೋಗೆ ಹಾರ್ಟ್ ಸಿಂಬಲ್ ಕಳುಹಿಸುವ ಮೂಲಕ ತಾಯಿ ಪ್ರೀತಿಗೆ ಕೊನೆಯಿಲ್ಲ ಎಂದಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:42 am, Sat, 12 April 25