Viral Video: ಬಾತುಕೋಳಿಗಳ ಜೊತೆ ಹಸುಗಳ ಫೈಟಿಂಗ್; ವೈರಲ್ ವಿಡಿಯೋ ಶೇರ್ ಮಾಡಿದ ಆನಂದ್ ಮಹೀಂದ್ರಾ

ವೈರಲ್ ಆಗಿರುವ ಈ ವಿಡಿಯೋದಲ್ಲಿ ಕೆಲವು ಹಸುಗಳು ಸಣ್ಣ ಬಾತುಕೋಳಿಗಳೊಂದಿಗೆ ಹೋರಾಡುತ್ತಿರುವುದನ್ನು ಕಾಣಬಹುದು. ತನ್ನ ಕೊಂಬಿನಿಂದ ತಿವಿಯಲು ಬಂದ ಹಸುಗಳನ್ನು ನೋಡಿ ಬಾತುಕೋಳಿಗಳು ಹೆದರಿಕೊಂಡು ಓಡಿ ಹೋಗುತ್ತವೆ.

Viral Video: ಬಾತುಕೋಳಿಗಳ ಜೊತೆ ಹಸುಗಳ ಫೈಟಿಂಗ್; ವೈರಲ್ ವಿಡಿಯೋ ಶೇರ್ ಮಾಡಿದ ಆನಂದ್ ಮಹೀಂದ್ರಾ
ಆನಂದ್ ಮಹೀಂದ್ರಾ
Edited By:

Updated on: Feb 23, 2022 | 1:24 PM

ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ (Anand Mahindra) ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಸಕ್ರಿಯರಾಗಿದ್ದಾರೆ. ಅವರು ಆಗಾಗ ಹಾಸ್ಯದಿಂದ ಕೂಡಿದ, ಸ್ಪೂರ್ತಿದಾಯಕ ಮತ್ತು ತಮಾಷೆಯ ವಿಷಯಗಳನ್ನು ಟ್ವಿಟ್ಟರ್​​ನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಅದೇ ರೀತಿ, ಹಸುಗಳ ಗುಂಪೊಂದು ಬಾತುಕೋಳಿಗಳ ಎದುರು ನಿಂತು ಬಾತುಕೋಳಿಗಳೊಂದಿಗೆ ಫೈಟಿಂಗ್ ಮಾಡುತ್ತಿರುವ ಹಳೆಯ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋವನ್ನು ರಾಂಚ್‌ನಲ್ಲಿ ಚಿತ್ರೀಕರಿಸಲಾಗಿದೆ. ಈ ಬಾತುಕೋಳಿ ಮತ್ತು ಹಸುಗಳ ಸೆಣಸಾಟದ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ (Viral Video) ಆಗಿದೆ.

ವೈರಲ್ ಆಗಿರುವ ಈ ವಿಡಿಯೋದಲ್ಲಿ ಕೆಲವು ಹಸುಗಳು ಸಣ್ಣ ಬಾತುಕೋಳಿಗಳೊಂದಿಗೆ ಹೋರಾಡುತ್ತಿರುವುದನ್ನು ಕಾಣಬಹುದು. ತನ್ನ ಕೊಂಬಿನಿಂದ ತಿವಿಯಲು ಬಂದ ಹಸುಗಳನ್ನು ನೋಡಿ ಬಾತುಕೋಳಿಗಳು ಹೆದರಿಕೊಂಡು ಓಡಿ ಹೋಗುತ್ತವೆ. ಆದರೂ ಕೆಲವು ಬಾತುಕೋಳಿಗಳು ಧೈರ್ಯದಿಂದ ನಿಂತು ಹಸುಗಳೆದುರು ಹೋರಡಿರುವುದನ್ನು ನೋಡಬಹುದು.

ಪಕ್ಷಿಗಳೇ, ಹೇಗಿದೆ ಜೋಶ್? ‘ಜೋಶ್ ಸ್ವಲ್ಪ ಹೆಚ್ಚಾಗಿಯೇ ಇದೆ ಸರ್’ ಎಂದು ಆನಂದ್ ಮಹೀಂದ್ರಾ ಕ್ಯಾಪ್ಷನ್ ನೀಡಿ ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ.

ಆನಂದ್ ಮಹೀಂದ್ರಾ ಆನ್‌ಲೈನ್‌ನಲ್ಲಿ ಹಂಚಿಕೊಂಡ ಈ ವಿಡಿಯೊ ಸುಮಾರು 7 ಲಕ್ಷ ವೀಕ್ಷಣೆಗಳನ್ನು ಗಳಿಸಿದೆ. ನೆಟಿಜನ್‌ಗಳು ಬಾತುಕೋಳಿಗಳ ವಿಶ್ವಾಸವನ್ನು ಶ್ಲಾಘಿಸಿದ್ದಾರೆ ಮತ್ತು ಅವುಗಳನ್ನು ಬಹಳ ಧೈರ್ಯಶಾಲಿ ಎಂದು ಬಣ್ಣಿಸಿದ್ದಾರೆ.

ಇದನ್ನೂ ಓದಿ: Viral Video: ರಸ್ತೆ ಬದಿ ನಿಂತಿದ್ದ ಬೀದಿ ನಾಯಿಗೆ ಒದೆಯಲು ಹೋದವನಿಗೆ ಏನಾಯ್ತು ಗೊತ್ತಾ?; ವಿಡಿಯೋ ವೈರಲ್

Viral News: ಮದುವೆಯಾದ ಕೂಡಲೆ ಗಂಡನ ಬಿಟ್ಟು ಪ್ರಿಯಕರನ ಜೊತೆ ವಧು ಪರಾರಿ; ಲವ್ ಸ್ಟೋರಿಗೆ ಹೊಸ ಟ್ವಿಸ್ಟ್​!