ಕಾಡಿನಲ್ಲಿ, ಪೊದೆಗಳಲ್ಲಿರುವ ಹಾವುಗಳು ಆಹಾರವನ್ನರಸುತ್ತಾ ಜನವಸತಿ ಪ್ರದೇಶಗಳ ಕಡೆಗೆ ಆಗಾಗ್ಗೆ ಬರುತ್ತಿರುತ್ತವೆ. ಈಗಂತೂ ದೈತ್ಯ ಹಾವುಗಳು ಅಲ್ಲಲ್ಲಿ ಕಾಣಿಸಿಕೊಳ್ಳುವ ಸುದ್ದಿಗಳು ಹೆಚ್ಚಾಗಿ ಕೇಳಿ ಬರುತ್ತಿವೆ. ಇದೀಗ ಅಸ್ಸಾಂ ವಿಶ್ವವಿದ್ಯಾನಿಲಯದ ಗರ್ಲ್ಸ್ ಹಾಸ್ಟೆಲ್ ಬಳಿಯು ದೈತ್ಯ ಹೆಬ್ಬಾವೊಂದು ಕಾಣಿಸಿಕೊಂಡಿದೆ. ಹೌದು ಸುಮಾರು 100 ಕೆಜಿ ತೂಕ ಹಾಗೂ 17 ಅಡಿ ಉದ್ದದ ಬರ್ಮೀಸ್ ಹೆಬ್ಬಾವು ಪತ್ತೆಯಾಗಿದ್ದು, ಈ ದೈತ್ಯ ಹಾವನ್ನು ಕಂಡು ವಿದ್ಯಾರ್ಥಿಗಳು ಬೆಚ್ಚಿ ಬಿದ್ದಿದ್ದಾರೆ. ನಂತರ ಈ ಹಾವನ್ನು ರಕ್ಷಣಾ ತಂಡದ ಸಹಾಯದಿಂದ ಯಶಸ್ವಿಯಾಗಿ ರಕ್ಷಿಸಲಾಗಿದ್ದು, ಈ ಕುರಿತ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಸಿಲ್ಚಾರ್‌ನಲ್ಲಿರುವ ಅಸ್ಸಾಂ ವಿಶ್ವವಿದ್ಯಾಲಯದ ಗರ್ಲ್ಸ್ ಹಾಸ್ಟೆಲ್ ಬಳಿ ಡಿಸೆಂಬರ್ 18 ರಂದು ರಾತ್ರಿ 10.30 ರ ಸುಮಾರಿಗೆ 100 ಕೆಜಿ ತೂಕದ ಈ ದೈತ್ಯ ಹೆಬ್ಬಾವು ಕಾಣಿಸಿಕೊಂಡಿದೆ. ವನ್ಯಜೀವಿ ಸಂಶೋಧಕ ಮತ್ತು ಸಂರಕ್ಷಣಾ ತಜ್ಞ ಬಿಶಾಲ್ ಸೋನರ್ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಉರಗ ರಕ್ಷಕ ತ್ರಿಕಲ್ ಚಕ್ರವರ್ತಿ ಅವರ ಸಹಾಯದಿಂದ ಹಾವನ್ನು ರಕ್ಷಿಸಿ ಬರೈಲ್ ವನ್ಯಜೀವಿ ಅಭಯಾರಣ್ಯಕ್ಕೆ ಕಳುಸಿಕೊಟ್ಟಿದ್ದಾರೆ. ಅರಣ್ಯ ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳು ನಮ್ಮ ತಂಡದ ಸಹಕಾರದಿಂದ ಈ ದೈತ್ಯ ಹಾವನ್ನು ಯಶಸ್ವಿಯಾಗಿ ಹಿಡಿಯಲು ಸಾಧ್ಯವಾಯಿತು ಎಂದು ಚಕ್ರವರ್ತಿ ಹೇಳಿದ್ದಾರೆ.
A giant 17-foot-long Burmese python, weighing approx 100 kilograms, was rescued from the Assam University campus in Silchar late on December 18, 2024. pic.twitter.com/GJhzvkxfJT
— World of Facts (@factostats) December 20, 2024
ಮಾಧ್ಯಮಗಳೊಂದಿಗೆ ಮಾತನಾಡಿದ ಬಿಶಾಲ್ ಸೋನಾರ್ ʼಇದು ಬರಾಕ್ ಕಣಿವೆ ಪ್ರದೇಶಗಳಲ್ಲಿ ಕಂಡು ಬರುವ ದೈತ್ಯ ಹೆಬ್ಬಾವುಗಳಾಗಿದ್ದು, ಈ ಬರ್ಮೀಸಗ ಹೆಬ್ಬಾವು ಮನುಷ್ಯನಿಗೆ ಯಾವುದೇ ರೀತಿಯ ತೊಂದರೆಯಾಗಲಿ ಅಥವಾ ದಾಳಿಯನ್ನಾಗಲಿ ಮಾಡುವುದಿಲ್ಲ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ತಾಳಿ ಕಟ್ಟುವ ಪದ್ಧತಿ ಬದಲಿಗೆ ಸಂವಿಧಾನದ ಮೇಲೆ ಪ್ರಮಾಣ ಮಾಡಿ ವಿಶಿಷ್ಟವಾಗಿ ಮದುವೆಯಾದ ನವ ಜೋಡಿ
factostats ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ರಕ್ಷಣಾ ತಂಡದ ಸದಸ್ಯರು ಬರೋಬ್ಬರಿ 17 ಅಡಿ ಉದ್ದದ ಬರ್ಮೀಸ್ ಹಾವನ್ನು ರಕ್ಷಿಸುವಂತಹ ದೃಶ್ಯವನ್ನು ಕಾಣಬಹುದು. ಈ ದೈತ್ಯ ಹೆಬ್ಬಾವನ್ನು ಕಂಡು ಎಲ್ಲರೂ ಬೆಚ್ಚಿ ಬಿದ್ದಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ