Viral: ಬೆಂಗಳೂರು ಈ ಮಟ್ಟಿಗೆ ಬೆಳೆದದ್ದು ಉತ್ತರ ಭಾರತೀಯರಿಂದಾಗಿ; ವೈರಲ್‌ ಆಯ್ತು ಯುವತಿಯ ಹೇಳಿಕೆ

ಯುವಕನೊಬ್ಬ ಮೈಕ್‌ ಹಿಡಿದು ಬೆಂಗಳೂರಿನಲ್ಲಿ ನಿಮಗೆ ಶಾಕಿಂಗ್‌ ಅನಿಸಿದ ಕಲ್ಚರ್‌ ಯಾವುದು ಎಂದು ಪ್ರಶ್ನೆ ಕೇಳಿದಾಗ ಉತ್ತರ ಭಾರತ ಮೂಲದ ಯುವತಿಯೊಬ್ಬಳು, ನನಗೆ ಇಲ್ಲಿನ ಸಂಸ್ಕೃತಿಯ ವಿಷಯದಲ್ಲಿ ಏನೂ ಶಾಕ್ ಆಗಿಲ್ಲ, ಆದ್ರೆ ಇಲ್ಲಿನ ಜನ ಸುಮ್ಮಸುಮ್ಮನೇ ಉತ್ತರ ಭಾರತೀಯರನ್ನು ದ್ವೇಷ ಮಾಡುತ್ತಾರೆ, ಆದ್ರೆ ಬೆಂಗಳೂರು‌ ಈ ಮಟ್ಟಿಗೆ ಬೆಳೆದದ್ದು ಮಾತ್ರ ಉತ್ತರ ಭಾರತೀಯರು ಇಲ್ಲಿಗೆ ಬಂದಿರುವುದರಿಂದ, ಹೆಚ್ಚಿನವರು ಈ ಸತ್ಯವನ್ನು ಒಪ್ಪಿಕೊಳ್ಳಲು ತಯಾರಿಲ್ಲ ಎಂಬ ಹೇಳಿಕೆಯನ್ನು ನೀಡಿದ್ದಾಳೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

Viral: ಬೆಂಗಳೂರು ಈ ಮಟ್ಟಿಗೆ ಬೆಳೆದದ್ದು ಉತ್ತರ ಭಾರತೀಯರಿಂದಾಗಿ; ವೈರಲ್‌ ಆಯ್ತು ಯುವತಿಯ ಹೇಳಿಕೆ
ವೈರಲ್​​ ವಿಡಿಯೋ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Dec 23, 2024 | 5:45 PM

ಬೆಂಗಳೂರು ಅಭಿವೃದ್ಧಿ ಹೊಂದಿದ್ದೇ ಉತ್ತರ ಭಾರತೀಯರಿಂದ ಎಂದು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದವರ ಸುದ್ದಿಗಳ ಬಗ್ಗೆ ಈ ಹಿಂದೆಯೂ ನೀವು ನೋಡಿರುತ್ತೀರಿ ಅಲ್ವಾ. ಅದೇ ರೀತಿ ಇಲ್ಲೊಬ್ಬಳು ನಾರ್ತ್‌ ಇಂಡಿಯನ್‌ ಯುವತಿ ಕೂಡಾ ಬೆಂಗಳೂರು ಬೆಳೆದದ್ದು ಉತ್ತರ ಭಾರತೀಯರಿಂದ ಎಂಬ ಸ್ಟೇಟ್‌ಮೆಂಟ್‌ ನೀಡಿದ್ದಾಳೆ. ಹೌದು ಯುವಕನೊಬ್ಬ ಮೈಕ್‌ ಹಿಡಿದು ಬೆಂಗಳೂರಿನಲ್ಲಿ ನಿಮಗೆ ಶಾಕಿಂಗ್‌ ಅನಿಸಿದ ಕಲ್ಚರ್‌ ಯಾವುದು ಎಂಬ ಪ್ರಶ್ನೆಯನ್ನು ಕೇಳಿದಾಗ, ಇದಕ್ಕೆ ಬೋಲ್ಡ್‌ ಆಗಿ ಉತ್ತರಿಸಿದ ಆಕೆ ನನಗೆ ಇಲ್ಲಿನ ಸಂಸ್ಕೃತಿಯ ಬಗ್ಗೆ ಏನು ಶಾಕ್‌ ಆಗಿಲ್ಲ, ಇಲ್ಲಿನ ಜನ ಮಾತ್ರ ಸುಮ್ಮಸುಮ್ಮನೇ ಉತ್ತರ ಭಾರತೀಯರನ್ನು ದ್ವೇಷ ಮಾಡ್ತಾರೆ, ಆದ್ರೆ ಬೆಂಗಳೂರು ಈ ಮಟ್ಟಿಗೆ ಬೆಳೆದಿದ್ದೇ ಉತ್ತರ ಭಾರತೀಯರು ಇಲ್ಲಿಗೆ ಬಂದಿರುವುದರಿಂದ, ಹೆಚ್ಚಿನವರು ಈ ಸತ್ಯವನ್ನು ಒಪ್ಪಿಕೊಳ್ಳಲು ತಯಾರಿಲ್ಲ ಎಂಬ ಹೇಳಿಕೆಯನ್ನು ನೀಡಿದ್ದಾಳೆ. ಕೆಲವರು ಈಕೆಯ ಹೇಳಿಕೆಯನ್ನು ವಿರೋಧಿಸಿದರೆ, ಇನ್ನೂ ಕೆಲವರು ಆಕೆ ಸತ್ಯವನ್ನೇ ಹೇಳಿದ್ದಾಳೆ ಎಂದು ಯುವತಿಯ ಪರ ಬ್ಯಾಟಿಂಗ್‌ ಬೀಸಿದ್ದಾರೆ.

ಉತ್ತರ ಭಾರತ ಮೂಲದ ಯುವತಿಯೊಬ್ಬಳು ಬೆಂಗಳೂರು ಇದು ಈ ಮಟ್ಟಿಗೆ ಇದೆ ಎಂದ್ರೆ ಅದಕ್ಕೆ ಉತ್ತರ ಭಾರತೀಯರೇ ಕಾರಣ ಎಂದು ಹೇಳಿದ್ದಾಳೆ. ಯುವಕನೊಬ್ಬ ಬೆಂಗಳೂರಿನ ಸಂಸ್ಕೃತಿಯ ಬಗ್ಗೆ ಪ್ರಶ್ನೆ ಕೇಳಿದಾಗ ಆಕೆ, ಇಲ್ಲಿನ ಸಂಸ್ಕೃತಿಯ ಬಗ್ಗೆ ಏನು ಶಾಕ್‌ ಆಗಿಲ್ಲ, ಆದ್ರೆ ಇಲ್ಲಿನ ಜನ ಸುಮ್ಮಸುಮ್ಮನೇ ಉತ್ತರ ಭಾರತೀಯರನ್ನು ದ್ವೇಷ ಮಾಡ್ತಾರೆ. ನಾವು ಉತ್ತರದವರು ಎಂದು ತಿಳಿದಾಗ ವಿಭಿನ್ನವಾಗಿ ವರ್ತಿಸ್ತಾರೆ, ಅದರಲ್ಲೂ ಆಟೋ ಚಾಲಕರು ತುಸು ಹೆಚ್ಚೇ ಆಟೋ ಬಾಡಿಗೆಯನ್ನು ನಮ್ಮಿಂದ ವಸೂಲಿ ಮಾಡ್ತಾರೆ. ಮತ್ತು ನಮ್ಮನ್ನು ಹಿಂದಿವಾಲಾಗಳು ಅಂತ ಕರಿತಾರೆ. ಹೀಗಿದ್ದರೂ ಈ ನಗರ ನನಗೆ ತುಂಬಾನೇ ಇಷ್ಟ. ಆದ್ರೆ ಇಲ್ಲಿನ ಜನ ಮಾತ್ರ ನಮ್ಮ ಜೊತೆ ವಿಚಿತ್ರವಾಗಿ ವರ್ತಿಸ್ತಾರೆ. ಆದರೆ ವಾಸ್ತವ ಏನಂದ್ರೆ ಬೆಂಗಳೂರು ಈ ಮಟ್ಟಿಗೆ ಬೆಳೆದದ್ದು ಮಾತ್ರ ಉತ್ತರ ಭಾರತೀಯರಿಂದಲೇ. ಈ ವಾಸ್ತವವನ್ನು ಒಪ್ಪಿಕೊಳ್ಳಲು ಇಲ್ಲಿನ ಜನ ತಯಾರಿಲ್ಲ ಎಂಬ ಹೇಳಿಕೆಯನ್ನು ನೀಡಿದ್ದಾಳೆ.

ಇದನ್ನೂ ಓದಿ: ಮೀನಿಗಾಗಿ ಬೀಸಿದ್ದ ಬಲೆಯಲ್ಲಿ ಸಿಕ್ಕಿಹಾಕಿಕೊಂಡ 15 ಅಡಿ ಉದ್ದದ ದೈತ್ಯ ಹೆಬ್ಬಾವು

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

WokePandemic ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ 6.7 ಲಕ್ಷ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಉತ್ತರ ಭಾರತೀಯ ಕಾರಣದಿಂದ ಬೆಂಗಳೂರು ಅಭಿವೃದ್ಧಿ ಹೊಂದಿದ್ದು ಅಂದಾದ್ರೆ, ಉತ್ತರ ಭಾರತದಲ್ಲಿ ಏಕೆ ಬೆಂಗಳೂರಿನಂತ ಹೈಟೆಕ್‌ ನಗರವಿಲ್ಲʼ ಎಂಬ ಪ್ರಶ್ನೆ ಕೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼನಗರದ ಅಭಿವೃದ್ಧಿಗೆ ಎಲ್ಲರೂ ಕೊಡುಗೆ ನೀಡಿದ್ದಾರೆ. ಆದರೂ ಉತ್ತರ ಭಾರತೀಯರ ಮೇಲೆ ಏಕೆ ದ್ವೇಷʼ ಎಂದು ಹೇಳಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಸಿಟಿ ರವಿ ವಿರುದ್ಧ ರಾಷ್ಟ್ರಪತಿಗೆ ಪತ್ರ, ಮೋದಿ ಭೇಟಿ ಮಾಡುವೆ: ಹೆಬ್ಬಾಳ್ಕರ್
ಸಿಟಿ ರವಿ ವಿರುದ್ಧ ರಾಷ್ಟ್ರಪತಿಗೆ ಪತ್ರ, ಮೋದಿ ಭೇಟಿ ಮಾಡುವೆ: ಹೆಬ್ಬಾಳ್ಕರ್
ಭದ್ರಾವತಿ ಉಕ್ಕು ಕಾರ್ಖಾನೆಗೆ ಪುನಶ್ಚೇತನ: ಕುಮಾರಸ್ವಾಮಿ ಗುಡ್ ನ್ಯೂಸ್
ಭದ್ರಾವತಿ ಉಕ್ಕು ಕಾರ್ಖಾನೆಗೆ ಪುನಶ್ಚೇತನ: ಕುಮಾರಸ್ವಾಮಿ ಗುಡ್ ನ್ಯೂಸ್
ಸಿಟಿ ರವಿ ಅಶ್ಲೀಲ ಪದ ಬಳಸಿದ ವಿಡಿಯೋ ಬಿಡುಗಡೆ ಮಾಡಿದ ಲಕ್ಷ್ಮೀ ಹೆಬ್ಬಾಳ್ಕರ್
ಸಿಟಿ ರವಿ ಅಶ್ಲೀಲ ಪದ ಬಳಸಿದ ವಿಡಿಯೋ ಬಿಡುಗಡೆ ಮಾಡಿದ ಲಕ್ಷ್ಮೀ ಹೆಬ್ಬಾಳ್ಕರ್
ಕೊಹ್ಲಿ, ರೋಹಿತ್ ತಂಡಗಳನ್ನು ಸೋಲಿಸಿ 25 ಸಾವಿರ ರೂ. ಗೆದ್ದ ಯುವ ಆಟಗಾರ
ಕೊಹ್ಲಿ, ರೋಹಿತ್ ತಂಡಗಳನ್ನು ಸೋಲಿಸಿ 25 ಸಾವಿರ ರೂ. ಗೆದ್ದ ಯುವ ಆಟಗಾರ
ಬಳ್ಳಾರಿ: ಮನೆಯಿಂದ ದೂರವಾಗಿ 25 ವರ್ಷಗಳ ಬಳಿಕ ಪತ್ತೆಯಾದ ಮಹಿಳೆ
ಬಳ್ಳಾರಿ: ಮನೆಯಿಂದ ದೂರವಾಗಿ 25 ವರ್ಷಗಳ ಬಳಿಕ ಪತ್ತೆಯಾದ ಮಹಿಳೆ
ನೆಲಮಂಗಲ: ಬೆಳ್ಳಂ ಬೆಳಗ್ಗೆ ಬಾರ್ ತೆರದು ಅಕ್ರಮವಾಗಿ ಮದ್ಯ ಮಾರಾಟ
ನೆಲಮಂಗಲ: ಬೆಳ್ಳಂ ಬೆಳಗ್ಗೆ ಬಾರ್ ತೆರದು ಅಕ್ರಮವಾಗಿ ಮದ್ಯ ಮಾರಾಟ
ನಿಜಕ್ಕೂ ಎಲಿಮಿನೇಟ್ ಆದ್ರಾ ತ್ರಿವಿಕ್ರಂ?; ಅಭಿಮಾನಿಗಳಿಗೆ ಬಿಗ್ ಶಾಕ್
ನಿಜಕ್ಕೂ ಎಲಿಮಿನೇಟ್ ಆದ್ರಾ ತ್ರಿವಿಕ್ರಂ?; ಅಭಿಮಾನಿಗಳಿಗೆ ಬಿಗ್ ಶಾಕ್
ಅಯ್ಯಪ್ಪ ಮಾಲೆ ಧರಿಸಿದ ಬಳಿಕ ಈ ತಪ್ಪುಗಳನ್ನು ಮಾಡಲೇಬಾರದು
ಅಯ್ಯಪ್ಪ ಮಾಲೆ ಧರಿಸಿದ ಬಳಿಕ ಈ ತಪ್ಪುಗಳನ್ನು ಮಾಡಲೇಬಾರದು
Daily horoscope: ಸೋಮವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಸೋಮವಾರದ ದಿನ ಭವಿಷ್ಯ ತಿಳಿಯಿರಿ
ನೆಲಮಂಗಲ ಅಪಘಾತ: ದುರಂತಕ್ಕೂ ಮುನ್ನ ಚಂದ್ರಮ್ ಕೊನೆಯ ದೃಶ್ಯ ಇಲ್ಲಿದೆ ನೋಡಿ
ನೆಲಮಂಗಲ ಅಪಘಾತ: ದುರಂತಕ್ಕೂ ಮುನ್ನ ಚಂದ್ರಮ್ ಕೊನೆಯ ದೃಶ್ಯ ಇಲ್ಲಿದೆ ನೋಡಿ