AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ತನ್ನ ಆಟೋವನ್ನು ಬಲೂನ್‌ಗಳಿಂದ ಅಲಕರಿಸಿ ಕಂದಮ್ಮನನ್ನು ಮನೆಗೆ ಸ್ವಾಗತಿಸಿದ ತಂದೆ

ಮನೆಗೆ ಹೊಸ ಅತಿಥಿ ಆಗಮನವಾಗುತ್ತದೆ ಎಂದರೆ ಆ ಖುಷಿಯನ್ನು ವಿವರಿಸಲು ಪದಗಳಿಲ್ಲ. ಇದೀಗ ವ್ಯಕ್ತಿಯೊಬ್ಬರು ತಂದೆಯಾದ ಖುಷಿಯಲ್ಲಿದ್ದು, ನವಜಾತ ಶಿಶುವನ್ನು ಮನೆಗೆ ವೆಲ್ಕಮ್ ಮಾಡಲು ತನ್ನ ಆಟೋವನ್ನು ಬಲೂನ್‌ಗಳಿಂದ ಸಿಂಗರಿಸಿದ್ದಾರೆ. ಈ ಹೃದಯಸ್ಪರ್ಶಿ ವಿಡಿಯೋ ಸದ್ಯ ನೆಟ್ಟಿಗರ ಗಮನ ಸೆಳೆದಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ತನ್ನ ಆಟೋವನ್ನು ಬಲೂನ್‌ಗಳಿಂದ ಅಲಕರಿಸಿ ಕಂದಮ್ಮನನ್ನು ಮನೆಗೆ ಸ್ವಾಗತಿಸಿದ ತಂದೆ
ವೈರಲ್‌ ವಿಡಿಯೋImage Credit source: Instagram
ಸಾಯಿನಂದಾ
|

Updated on: Sep 07, 2026 | 1:21 PM

Share

ಮನೆಗೆ ಮಗುವಿನ ಆಗಮನವಾಗುತ್ತಿದ್ದಂತೆ ಆ ಖುಷಿಯೇ ಬೇರೆ. ಆದರೆ ಈ ಕ್ಷಣವನ್ನು ಆಚರಿಸಲು ದುಬಾರಿ ವಸ್ತುಗಳೇ ಬೇಕಿಲ್ಲ. ಇದ್ದರಲ್ಲೇ ಖುಷಿ ಕಾಣುವ ಮನಸ್ಸು ಬೇಕು. ಹೌದು, ಆಟೋ ಚಾಲಕರಾಗಿರುವ ಈ ತಂದೆ (father), ತಮಗೆ ಮಗು ಹುಟ್ಟಿದ ಖುಷಿಯಲ್ಲಿ ತಮ್ಮ ಬದುಕಿಗೆ ಆಧಾರವಾಗಿರುವ ಆಟೋವನ್ನೇ ಬಣ್ಣ ಬಣ್ಣದ ಬಲೂನ್‌ಗಳಿಂದ ಅಲಂಕರಿಸಿದ್ದಾರೆ. ಈ ಆಟೋದಲ್ಲೇ ನವಜಾತ ಶಿಶುವನ್ನು ಮನೆಗೆ ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

ನವಜಾತ ಶಿಶುವನ್ನು ಗ್ರ್ಯಾಂಡ್ ವೆಲ್ಕಮ್ ಮಾಡಿದ ತಂದೆ

ದಿ ನಿರ್ಭಯ್ ಇಂಡಿಯಾ (thenirbhayindia) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ಆಟೋ ಚಾಲಕನು ತನ್ನ ಮಗುವನ್ನು ಮನೆಗೆ ಬರಮಾಡಿಕೊಳ್ಳಲು ಆಟೋವನ್ನು ಬಲೂನ್ ಗಳಿಂದ ಸಿಂಗರಿಸುತ್ತಿರುವುದನ್ನು ಕಾಣಬಹುದು. ಅದೇ ಅಲಂಕಾರಗೊಂಡ ಆಟೋದಲ್ಲಿ ತನ್ನ ಮಡದಿ ಹಾಗೂ ಮಗುವನ್ನು ಮನೆಗೆ ಕರೆದುಕೊಂಡು ಬಂದಿದ್ದಾರೆ. ಬಣ್ಣ ಬಣ್ಣಗಳಿಂದ ಬಲೂನ್‌ಗಳಿಂದ ಆಟೋ ಆಕರ್ಷಕವಾಗಿ ಕಾಣುತ್ತಿರುವುದನ್ನು ನೀವಿಲ್ಲಿ ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಮಗಳು ಕಾರ್ ಓಡಿಸುವ ವಿಷ್ಯವನ್ನು ತನ್ನ ಆಪ್ತ ಸ್ನೇಹಿತರಿಗೆ ಹೇಳಿ ಖುಷಿಪಟ್ಟ ತಂದೆ

ಈ ವಿಡಿಯೋ ಇಪ್ಪತ್ತ್ಮೂರು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಹ್ಯಾಪಿನೆಸ್ ಮುಖ್ಯ ಎಂದಿದ್ದಾರೆ. ಇನ್ನೊಬ್ಬರು, ಕೈಯಲ್ಲಿ ದುಡ್ಡು ಇಲ್ಲದಿದ್ರೂ ಹೃದಯ ಶ್ರೀಮಂತಿಕೆಯಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಶುಭಾಶಯಗಳು ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us