ಮುಂಬೈನ ಕುರ್ಲಾ ರೈಲ್ವೆ ಪ್ಲ್ಯಾಟ್​ಫಾರ್ಮ್​ಗೆ ಈ ಆಟೋ ತಲುಪಿದ್ದು ಹೇಗೆ?

| Updated By: ಶ್ರೀದೇವಿ ಕಳಸದ

Updated on: Oct 17, 2022 | 12:38 PM

Auto-rickshaw Runs On Railway Platform: ಈ ವಿಡಿಯೋ ವೀಕ್ಷಿಸಿದ ನೆಟ್ಟಿಗರು, ಮಧ್ಯರಾತ್ರಿಯಲ್ಲಿ ರೈಲ್ವೇ ಪೊಲೀಸ್ ಸಿಬ್ಬಂದಿ​ ಮತ್ತು ಭದ್ರತಾ ಸಿಬ್ಬಂದಿ ನಿದ್ದೆ ಮಾಡುತ್ತಿತ್ತೆ? ಎಂದು ಪ್ರಶ್ನಿಸಿದ್ದಾರೆ.

ಮುಂಬೈನ ಕುರ್ಲಾ ರೈಲ್ವೆ ಪ್ಲ್ಯಾಟ್​ಫಾರ್ಮ್​ಗೆ ಈ ಆಟೋ ತಲುಪಿದ್ದು ಹೇಗೆ?
Auto rickshaw Runs On Kurla Railway Platform In Mumbai
Follow us on

Viral Video : ಸಿನೆಮಾಗಳಲ್ಲಿ ಎಂಥ ರೀತಿಯ ಸಾಹಸಗಳನ್ನೂ ನೋಡಬಹುದು. ಆದರೆ ವಾಸ್ತವದಲ್ಲಿ? ಇತ್ತೀಚೆಗೆ ಮುಂಬೈನ ಕುರ್ಲಾ ರೈಲ್ವೇ ಸ್ಟೇಷನ್ನಿನ ಪ್ಲ್ಯಾಟ್​ಫಾರ್ಮ್​ ಗೆ ಆಟೋ ಬಂದ ವಿಡಿಯೋ ವೈರಲ್ ಆಗಿದೆ. ನೆಟ್ಟಿಗರು ಮಿಶ್ರಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ಈ ವಿಡಿಯೋ ಅನ್ನು ತಮಾಷೆಯಾಗಿ ಸ್ವೀಕರಿಸುತ್ತಿದ್ದಾರೆ. ಇನ್ನೂ ಕೆಲವರು ರೈಲ್ವೆ ಇಲಾಖೆಯ ಸಿಬ್ಬಂದಿಯ ನಿರ್ಲಕ್ಷ್ಯವನ್ನು ಪ್ರಶ್ನಿಸುತ್ತಿದ್ದಾರೆ. ಅಷ್ಟೇ ಅಲ್ಲ, ಪೊಲೀಸರನ್ನು ಟ್ಯಾಗ್​ ಮಾಡಿ ವಿಡಿಯೋ ಕೂಡ ಹಂಚಿಕೊಂಡಿದ್ದಾರೆ.

 

ಇದನ್ನೂ ಓದಿ
ಉತ್ತರಪ್ರದೇಶದ ಶಾಲಾ ಬಸ್ಸಿನಲ್ಲಿ ಹೆಬ್ಬಾವು ಪತ್ತೆ, ವಿಡಿಯೋ ವೈರಲ್
ತರುಣಿಯೊಬ್ಬಳಿಗೆ ಡೇಟಿಂಗ್​ ಸಲಹೆ ನೀಡಿದ ಜೋ ಬೈಡನ್, ನೆಟ್ಟಿಗರಿಂದ ಮಿಶ್ರಪ್ರತಿಕ್ರಿಯೆ
ಅಪ್ಪನಿಗೆ ಕೆಲಸ ಸಿಕ್ಕಾಗ ಮಗಳು ಸಂಭ್ರಮಿಸಿದ ಪರಿ ಇದು
ವಿಸ್ತಾರಾ ಏರ್​ಲೈನ್ಸ್​ನಲ್ಲಿ ಪ್ರಯಾಣಿಕರಿಗೆ ಕೊಟ್ಟ ಊಟದಲ್ಲಿ ಜಿರಳೆ ಪತ್ತೆ

ಟ್ವೀಟ್​ನ ದೂರಿನನ್ವಯ ಎಚ್ಚೆತ್ತುಕೊಂಡ ರೈಲ್ವೆ ಪೊಲೀಸರು, ಆಟೋ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ ಮತ್ತು ಆಟೋರಿಕ್ಷಾ ಅನ್ನು ವಶಪಡಿಸಿಕೊಂಡಿದ್ದಾರೆ. ನಂತರ ನ್ಯಾಯಾಲಯದ ಮುಂದೆ ಆರೋಪಿಯನ್ನು ಹಾಜರುಪಡಿಸಿದಾಗ ನ್ಯಾಯಾಲಯವು ಸೂಕ್ತ ಶಿಕ್ಷೆಯನ್ನು ವಿಧಿಸಿದೆ.

ಅಕ್ಟೋಬರ್ 12 ರಂದು ಈ ಘಟನೆ ನಡೆದಿದೆ. ಸ್ಟೇಷನ್ನಿನ ಹಿಂಭಾಗದ ಗೇಟ್​ನಿಂದ ಆಟೋ ಪ್ರವೇಶಿಸಿದೆ. ಯಾವಾಗ ರೈಲು ನಿಲ್ದಾಣ ತಲುಪಲು ತಡವಾಗುತ್ತದೆಯೋ ಆಗ ಆಟೋಗಳು ಹೀಗೆ ಸಹಾಯ ಮಾಡುತ್ತವೆ ಎಂದು ನೆಟ್ಟಿಗರು ತಮಾಷೆಯಾಗಿ ಪ್ರತಿಕ್ರಿಯಿಸಿದ್ಧಾರೆ. ಸೆಕ್ಯೂರಿಟಿ ಎಲ್ಲಿ ಮಾಯವಾಗಿದ್ದರು? ಇದು ಸರ್ಕಾರದ ಅವ್ಯವಸ್ಥೆಯನ್ನು ತೋರಿಸುತ್ತದೆ ಎಂದು ಮತ್ತೊಬ್ಬರು ಹೇಳಿದ್ದಾರೆ. ಒಂದು ದಿನ ಆಟೋವಾಲಾಗಳು ರೈಲ್ವೆ ಪ್ಲ್ಯಾಟ್​ಫಾರ್ಮಿನ ಮೇಲೆಯೇ ಪಾರ್ಕ್​ ಮಾಡುವ ಸಂದರ್ಭ ಬರಬಹುದು ಎಂದು ಮಗದೊಬ್ಬರು ಭವಿಷ್ಯ ನುಡಿದಿದ್ದಾರೆ.

ನಿಮಗೆ ಏನೆನ್ನಿಸುತ್ತಿದೆ ಈ ವಿಡಿಯೋ ನೋಡುತ್ತಿದ್ದಂತೆ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:36 pm, Mon, 17 October 22