Video: ತನ್ನ ಮಾಲೀಕಳ ಜೊತೆಗೆ ಮುನಿಸಿಕೊಂಡು ಗುರ್ ಎಂದ ಮರಿಯಾನೆ

ಪುಟಾಣಿ ಆನೆಗಳ ಮುದ್ದಾದ ವಿಡಿಯೋಗಳು ಆಗಾಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತದೆ. ಅವುಗಳ ಆಟ ತುಂಟಾಟ ಕಂಡರೆ ಅಪ್ಪಿ ಮುದ್ದಾಡಬೇಕೇನಿಸುತ್ತದೆ. ಆದರೆ ಇಲ್ಲೊಂದು ಮರಿಯಾನೆ ತನ್ನ ಮಾಲೀಕಳ ಜೊತೆಗೆ ಕೋಪಿಸಿಕೊಂಡಿದೆ. ಈ ಪುಟಾಣಿ ಆನೆಯೂ ಕೋಪಿಸಿಕೊಂಡಿದ್ದರ ಹಿಂದಿನ ಕಾರಣ ತಿಳಿದ್ರೆ ನೀವು ಶಾಕ್ ಆಗ್ತೀರಾ. ಈ ಕುರಿತಾದ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

Video: ತನ್ನ ಮಾಲೀಕಳ ಜೊತೆಗೆ ಮುನಿಸಿಕೊಂಡು ಗುರ್ ಎಂದ ಮರಿಯಾನೆ
ವೈರಲ್ ವಿಡಿಯೋ
Image Credit source: Instagram

Updated on: Sep 05, 2025 | 2:33 PM

ಪ್ರಾಣಿಗಳು (Animals) ತಮ್ಮ ಭಾವನೆಗಳನ್ನು ವಿಭಿನ್ನ ರೀತಿಯಲ್ಲಿ ತೋರ್ಪಡಿಸುತ್ತವೆ. ಯಾರು ತನ್ನನ್ನು ಪ್ರೀತಿ, ಕಾಳಜಿಯಿಂದ ನೋಡಿಕೊಳ್ಳುತ್ತಾರೋ ಅವರ ಜೊತೆಯಲ್ಲಿ ಮಗುವಿನಂತೆ ವರ್ತಿಸುತ್ತವೆ. ಸಲುಗೆ ಬೆಳೆಸಿಕೊಂಡು ಮುದ್ದಾಡುತ್ತವೆ, ಸಿಟ್ಟು ಬಂದರೆ ಕೋಪಿಸಿಕೊಳ್ಳುತ್ತವೆ. ಈ ಮರಿಯಾನೆಯೂ (Baby elephant) ಅದೇ ರೀತಿ ಮಾಡಿದೆ. ತನ್ನ ಕೇರ್ ಟೇಕರ್‌ ತನ್ನ ಜೊತೆಗೆ ಆಟ ಆಡಲು ಬರುತ್ತಿಲ್ಲ ಎನ್ನುವ ಒಂದೇ ಕಾರಣಕ್ಕೆ ಮುನಿಸಿಕೊಂಡಿದೆ. ಈ ಪುಟಾಣಿ ಮರಿಯಾನೆಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು ನೆಟ್ಟಿಗರ ಗಮನ ಸೆಳೆಯುತ್ತಿದೆ.

wildlife.report ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾಗಿದ್ದು, ಶೀರ್ಷಿಕೆಯಲ್ಲಿ ಈ ಮರಿಯಾನೆಯೂ ತನ್ನ ಧ್ವನಿಯನ್ನು ಹೆಚ್ಚಿಸಿ, ತನ್ನ ಆರೈಕೆ ಮಾಡುವವಳ ಗಮನ ಸೆಳೆಯಲು ಪ್ರಯತ್ನಿಸುತ್ತಿದೆ. ಆಕೆ ಆಟ ಆಡಲು ಬರಲು ನಿರಾಕರಿಸಿದಾಗ ಜೋರಾಗಿ ಘರ್ಜಿಸಿ ಕೋಪವನ್ನು ಹೊರಹಾಕಿದೆ ಎಂದು ಬರೆದುಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ತಾಯಾನೆ ಹಚ್ಚಹಸಿರಾದ ಹುಲ್ಲನ್ನು ತಿನ್ನುತ್ತಿದೆ. ಇತ್ತ ಪುಟಾಣಿ ಆನೆಯೂ ಮಾಲೀಕಳನ್ನು ತನ್ನ ಜೊತೆಗೆ ಆಟ ಆಡಲು ಬರುವಂತೆ ಕರೆದಿದೆ. ಆಕೆಯು ಓಲ್ಲೆ ಎಂದು ಸುಮ್ಮನೆ ನಿಂತುಕೊಂಡಾಗ ಈ ಮರಿಯಾನೆಯು ಗುರ್‌ ಗುರ್ ಎಂದು ಜೋರಾಗಿ ಸದ್ದು ಮಾಡುವುದನ್ನು ನೀವಿಲ್ಲಿ ನೋಡಬಹುದು.

ಇದನ್ನೂ ಓದಿ
ಸತ್ತು ಹೋದ ಆನೆಯ ತಲೆಬುರುಡೆಯನ್ನು ಕಂಡು ರೋಧಿಸಿದ ಹೆಣ್ಣಾನೆ
ಹುಟ್ಟಿದ ನಂತರ ಮೊದಲ ಬಾರಿಗೆ ನೀರಿನ ಸ್ಪರ್ಶ
ನೋಡ ನೋಡುತ್ತಿದ್ದಂತೆ ನಡುರಸ್ತೆಯಲ್ಲೇ ಮಿನಿ ಟ್ರಕನ್ನು ಉರುಳಿಸಿದ ಆನೆ
ತಾಯಿಯಿಂದ ಬೆರ್ಪಟ್ಟು ಕೇರಳದ ಶಾಲಾ ಆವರಣಕ್ಕೆ ಎಂಟ್ರಿ ಕೊಟ್ಟ ಮರಿಯಾನೆ

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ಓದಿ:Video: ಸತ್ತು ಹೋದ ಆನೆಯ ತಲೆಬುರುಡೆಯನ್ನು ಕಂಡು ರೋಧಿಸಿದ ಹೆಣ್ಣಾನೆ

ಈ ವಿಡಿಯೋವನ್ನು ಇದುವರೆಗೆ ಹಲವಾರು ಬಳಕೆದಾರರು ವೀಕ್ಷಿಸಿದ್ದು, ಬಳಕೆದಾರರು ತಾಯಾನೆ ಅಲ್ಲಿನ ಪರಿಸ್ಥಿತಿ ಅರ್ಥ ಆಗಿದೆ. ಹೇ ಪುಟಾಣಿ ಇಲ್ಲಿ ಬಾ ಆಹಾರ ಕೊಡುವೆ ಎಂದು ಕರೆಯುವಂತಿದೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ಈ ಪುಟಾಣಿ ಆನೆಯೊಂದಿಗೆ ಆಟವಾಡಿ ಎಂದು ಕಾಮೆಂಟ್ ಮಾಡಿದ್ದಾರೆ. ಈ ಮರಿಯಾನೆ ಕೋಪಿಸಿಕೊಂಡ ರೀತಿ ಎಷ್ಟು ಮುದ್ದಾಗಿದೆ. ಯಾರಿಗೂ ಕೂಡ ಈ ಆನೆಯ ಜೊತೆ ಆಟ ಆಡದೇ ಇರಲು ಮನಸ್ಸು ಬರಲ್ಲ ಎಂದು ಇನ್ನೊಬ್ಬರು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ