Viral: ಆರ್ಡರ್‌ ಮಾಡಿದ್ದು ದಹಿಪುರಿ ಆದ್ರೆ ಬಂದಿದ್ದು ಪೂರಿ, ಒಂದು ಬೌಲ್‌ ಮೊಸರು; ಅಸಮಾಧಾನ ಹೊರಹಾಕಿದ ಬೆಂಗಳೂರು ಯುವತಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Dec 18, 2024 | 4:08 PM

ಕೆಲವೊಂದು ಬಾರಿ ಆನ್‌ಲೈನ್‌ ಅಲ್ಲಿ ಬಟ್ಟೆ ಇತ್ಯಾದಿ ವಸ್ತುಗಳನ್ನುಆರ್ಡರ್‌ ಮಾಡಿದಾಗ ತಪ್ಪಾದ ಆರ್ಡರ್‌ ಬರುವ ಸಾಧ್ಯತೆಗಳು ಇರುತ್ತವೆ. ಇಲ್ಲೊಬ್ಳು ಯುವತಿಗೂ ಕೂಡಾ ಇದೇ ರೀತಿ ತಪ್ಪಾದ ಪಾರ್ಸೆಲ್‌ ಬಂದಿದ್ದು, ರೆಸ್ಟೋರೆಂಟ್‌ ಒಂದು ಈಕೆ ಆರ್ಡರ್‌ ಮಾಡಿದ್ದ ದಹಿಪುರಿ ಬದಲಿಗೆ ಪೂರಿ ಮತ್ತು ಒಂದು ಬೌಲ್‌ ಮೊಸರು ಕಳುಹಿಸಿಕೊಟ್ಟಿದೆ. ಇದರಿಂದ ಹತಾಶಳಾದ ಆಕೆ ಬೆಂಗಳೂರನ್ನು ತೊರೆಯಲು ಇರುವ 101 ಕಾರಣಗಳಲ್ಲಿ ಇದು ಕೂಡಾ ಒಂದು ಎಂದು ಸೋಷಿಯಲ್‌ ಮೀಡಿಯಾದಲ್ಲಿ ಅಸಮಾಧಾನವನ್ನು ಹೊರ ಹಾಕಿದ್ದಾಳೆ.

Viral: ಆರ್ಡರ್‌ ಮಾಡಿದ್ದು ದಹಿಪುರಿ ಆದ್ರೆ ಬಂದಿದ್ದು ಪೂರಿ, ಒಂದು ಬೌಲ್‌ ಮೊಸರು; ಅಸಮಾಧಾನ ಹೊರಹಾಕಿದ ಬೆಂಗಳೂರು ಯುವತಿ
ವೈರಲ್​​ ಪೋಸ್ಟ್​
Follow us on

ಈಗಂತೂ ಬಟ್ಟೆ-ಬರೆ ಶಾಪಿಂಗ್‌ನಿಂದ ಹಿಡಿದು ಹಣ್ಣು-ತರಕಾರಿ ಖರೀದಿಸುವವರೆಗೂ ಎಲ್ಲವೂ ಆನ್‌ಲೈನ್‌ನಲ್ಲಿಯೇ ನಡೆಯುತ್ತಿದೆ. ಜೊತೆಗೆ ಹಸಿವಾದಾಗ, ಕ್ರೇವಿಂಗ್ಸ್‌ ಆದಾಗ ಥಟ್ಟನೆ ಆನ್‌ಲೈನ್‌ ಫುಡ್‌ ಡೆಲಿವರಿ ಆಪ್‌ ಮೂಲಕ ಬೇಕಾದ ಆಹಾರಗಳನ್ನು ಕೂಡಾ ಆರ್ಡರ್‌ ಮಾಡಬಹುದಾಗಿದೆ. ಹೀಗೆ ಹೆಚ್ಚಿನವರು ಆನ್‌ಲೈನ್‌ನಲ್ಲಿಯೇ ಫುಡ್‌ ಅರ್ಡರ್‌ ಮಾಡ್ತಾರೆ. ಅದೇ ರೀತಿ ಇಲ್ಲೊಬ್ಳು ಯುವತಿ ಕೂಡಾ ಬಹಳ ಇಷ್ಟಪಟ್ಟು ದಹಿ‌ ಪುರಿ ಚಾಟ್ಸ್ ಆರ್ಡರ್‌ ಮಾಡಿದ್ದು, ಆದ್ರೆ ಆಕೆಗೆ ದಹಿಪುರಿ ಬದಲು ಪೂರಿ ಮತ್ತು ಒಂದು ಬೌಲ್‌ ಮೊಸರು ಪಾರ್ಸೆಲ್‌ ಬಂದಿದೆ. ಇದರಿಂದ ಹತಾಶಳಾದ ಆಕೆ ಬೆಂಗಳೂರನ್ನು ತೊರೆಯಲು ಇರುವ 101 ಕಾರಣಗಳಲ್ಲಿ ಇದು ಕೂಡಾ ಒಂದು ಎಂದು ಸೋಷಿಯಲ್‌ ಮೀಡಿಯಾದಲ್ಲಿ ಅಸಮಾಧಾನವನ್ನು ಹೊರ ಹಾಕಿದ್ದಾಳೆ.

ದಹಿಪುರಿ ಚಾಟ್‌ ಅಂದ್ರೆ ಬಹಳಷ್ಟು ಜನರಿಗೆ ಅಚ್ಚುಮೆಚ್ಚು. ಹೀಗೆ ಹೆಚ್ಚಿನವರು ಆಗಾಗ್ಗೆ ರಸ್ತೆಬದಿಯಲ್ಲಿ ದಹಿ ಪುರಿ ತಿನ್ತಿರ್ತಾರೆ. ಅದೇ ರೀತಿ ಬೆಂಗಳೂರಿನಲ್ಲಿ ನೆಲೆಸಿರುವ ಉತ್ತರ ಭಾರತ ಮೂಲದ ಯುವತಿಗೂ ಕೂಡಾ ದಹಿ ಪುರಿ ತಿನ್ನುವ ಆಸೆಯಾಗಿ, ಆಕೆ ಈ ಚಾಟ್ಸ್‌ ಅನ್ನು ಆನ್‌ಲೈನ್‌ ಅಲ್ಲಿ ಆರ್ಡರ್‌ ಮಾಡ್ತಾಳೆ. ಆದ್ರೆ ದಹಿ ಪುರಿ ಚಾಟ್‌ ಬದಲು ಪೂರಿ ಮತ್ತು ಒಂದು ಬೌಲ್‌ ಮೊಸರು ಪಾರ್ಸೆಲ್‌ ಬಂದಿದ್ದು, ಇದನ್ನು ಕಂಡು ಆಕೆ ಫುಲ್‌ ಶಾಕ್‌ ಆಗಿದ್ದಾಳೆ. ಮತ್ತು ಈ ಕಥೆಯನ್ನು ಆಕೆ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾಳೆ.

ವೈರಲ್​​ ಪೋಸ್ಟ್​​ ಇಲ್ಲಿದೆ ನೋಡಿ:

ಆಶಿಕಾ (snorlaxNotFound) ಎಂಬ ಹೆಸರಿನ ಯುವತಿ ಈ ಫೋಟೋವನ್ನು ತನ್ನ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದು, “ಬೆಂಗಳೂರು ತೊರೆಯಲು 101 ಕಾರಣಗಳು… ಆರ್ಡರ್‌ ಮಾಡಿದ್ದು ದಹಿ ಪುರಿ ಆದ್ರೆ ಬಂದಿದ್ದು ಪೂರಿ & ಮೊಸರು; ಇದನ್ನು ನೋಡಿ ಉತ್ತರ ಭಾರತೀಯಳಾದ ನನ್ಗೆ ತುಂಬಾ ನೋವಾಗಿದೆ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾಳೆ.

ಇದನ್ನೂ ಓದಿ:  ಕಚೇರಿಯಲ್ಲಿ ಹಿರಿಯ ವ್ಯಕ್ತಿಯನ್ನು ಗಂಟೆಗಟ್ಟಲೆ ಕಾಯಿಸಿದ ಸರ್ಕಾರಿ ನೌಕರರಿಗೆ ವಿಶಿಷ್ಟ ಶಿಕ್ಷೆ ನೀಡಿದ ಸಿಇಒ; ವಿಡಿಯೋ ವೈರಲ್‌

ಡಿಸೆಂಬರ್‌ 16 ರಂದು ಹಂಚಿಕೊಳ್ಳಲಾದ ಈ ಪೋಸ್ಟ್‌ 4.6 ಲಕ್ಷ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇದು ನಿಜಕ್ಕೂ ಹೃದಯವಿದ್ರಾವಕವಾಗಿದೆʼ ಎಂದು ತಮಾಷೆಯ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼನೀವು ಈ ಬಗ್ಗೆ ದೂರು ನೀಡಿʼ ಎಂದು ಸಲಹೆ ನೀಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ