ಕುಡಿದ ಮತ್ತಿನಲ್ಲಿ ಗೆಳೆಯನ ಕೊರಳಿಗೆ ಮಾಲೆ ಹಾಕಿದ ವರ; ಕೋಪದಿಂದ ಮದುವೆಯೇ ಬೇಡವೆಂದ ವಧು!

ಕುಡಿತದ ಅಮಲಿನಲ್ಲಿ ಮದುಮಗ ತನ್ನ ಸ್ನೇಹಿತನ ಕೊರಳಿಗೆ ಮದುವೆಯ ಹಾರ ಹಾಕಿದಾಗ ಕೋಪಗೊಂಡ ವಧು ಮದುವೆಯನ್ನು ರದ್ದುಗೊಳಿಸಿ ಬರಾತ್ ವಾಪಸ್ ಕಳುಹಿಸಿದ್ದಾಳೆ. ವರ ಕುಡಿದಿದ್ದನ್ನು ನೋಡಿ ವಧು ಕೋಪಗೊಂಡು, ಅವನನ್ನು ಮದುವೆಯಾಗಲು ನಿರಾಕರಿಸಿ ಮದುವೆಯನ್ನು ರದ್ದುಗೊಳಿಸಿದ್ದಾಳೆ. ಈ ಘಟನೆ ನಡೆದ ನಂತರ ಅವಳು ಮದುವೆಯ ಮೆರವಣಿಗೆಯನ್ನು ವಾಪಾಸ್ ಕಳುಹಿಸಿದಳು.

ಕುಡಿದ ಮತ್ತಿನಲ್ಲಿ ಗೆಳೆಯನ ಕೊರಳಿಗೆ ಮಾಲೆ ಹಾಕಿದ ವರ; ಕೋಪದಿಂದ ಮದುವೆಯೇ ಬೇಡವೆಂದ ವಧು!
Drunk Groom Puts Wedding Garland In Friend's Neck

Updated on: Feb 24, 2025 | 10:08 PM

ಬರೇಲಿ: ಮದ್ಯದ ಅಮಲಿನಲ್ಲಿದ್ದ ವರನೊಬ್ಬ ಮದುವೆಯ ಹಾರವನ್ನು ವಧುವಿನ ಕೊರಳಿಗೆ ಹಾಕುವ ಬದಲು ತನ್ನ ಸ್ನೇಹಿತನ ಕೊರಳಿಗೆ ಹಾಕಿದ್ದಾನೆ. ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದ ವಿವಾಹ ಸಮಾರಂಭವೊಂದರಲ್ಲಿ ಈ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ವರ ಕುಡಿದಿದ್ದನ್ನು ನೋಡಿ ವಧು ಕೋಪಗೊಂಡ ವಧು ಅವನನ್ನು ಮದುವೆಯಾಗಲು ನಿರಾಕರಿಸಿ ಮದುವೆಯನ್ನು ರದ್ದುಗೊಳಿಸಿದಳು. ಈ ಘಟನೆ ನಡೆದ ನಂತರ ಅವಳು ಮದುವೆಯ ಮೆರವಣಿಗೆಯನ್ನು ವಾಪಸ್ ಕಳುಹಿಸಿದಳು.

ಪೊಲೀಸರು ವರ ಮತ್ತು ಆತನ ತಂದೆಯ ಜೊತೆ ಮಾತನಾಡುತ್ತಿರುವ ವಿಡಿಯೋ ಅಂತರ್ಜಾಲದಲ್ಲಿ ಕಾಣಿಸಿಕೊಂಡಿದ್ದು, ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಈ ಘಟನೆಯ ವಿವರಗಳನ್ನು ವರನಿಂದ ಪೊಲೀಸರು ಕೇಳುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ಈ ಘಟನೆ ಶನಿವಾರ ರಾತ್ರಿ ನಡೆದಿದ್ದು, ಮದುವೆ ಮೆರವಣಿಗೆ ಆಗಮಿಸಿದ ಸ್ಥಳದಲ್ಲೇ ಘಟನೆ ನಡೆದಿದೆ. ವಧು-ವರರು ಮಾಲೆ ವಿನಿಮಯ ಮಾಡಿಕೊಳ್ಳುವಾಗ ವಧುವು ವರನ ಕುತ್ತಿಗೆಗೆ ಹಾರವನ್ನು ಹಾಕಿದಳು. ಆದರೆ, ಕುಡಿದ ಮತ್ತಿನಲ್ಲಿ ವರನು ವಧುವಿನ ಬದಲು ತನ್ನ ಸ್ನೇಹಿತನ ಕುತ್ತಿಗೆಗೆ ಹಾರ ಹಾಕಿದನು. ಈ ಮುಜುಗರದ ಪರಿಸ್ಥಿತಿಯಿಂದ ಕೋಪಗೊಂಡ ವಧು ಮದುವೆಗೆ ಹೋಗಲು ನಿರಾಕರಿಸಿ ಮೆರವಣಿಗೆಯನ್ನು ಹಿಂದಕ್ಕೆ ಕಳುಹಿಸಿದಳು.

ಇದನ್ನೂ ಓದಿ: ಪಾಲ್ಘರ್‌ನಲ್ಲಿ ಪಾದಚಾರಿಗೆ ಡಿಕ್ಕಿ ಹೊಡೆದು ರಸ್ತೆಯುದ್ದಕ್ಕೂ ಎಳೆದೊಯ್ದ ಕಾರು; ವಿಡಿಯೋ ವೈರಲ್


ವಧುವಿನ ಕುಟುಂಬ ಸದಸ್ಯರು ಅವಳನ್ನು ಮದುವೆಗೆ ಮನವೊಲಿಸಲು ಪ್ರಯತ್ನಿಸಿದರು. ಆದರೆ ಅವಳು ತನ್ನ ನಿರ್ಧಾರದಲ್ಲಿ ದೃಢವಾಗಿದ್ದಳು. ಆ ವರನನ್ನು ಮದುವೆಯಾಗಲು ನಿರಾಕರಿಸಿದಳು. ವಧುವಿನ ತಂದೆಯ ದೂರಿನ ಆಧಾರದ ಮೇಲೆ, ವರ ಮತ್ತು ಆತನ ಕುಟುಂಬ ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ವರ ಮತ್ತು ಆತನ ಕುಟುಂಬ ಸದಸ್ಯರ ವಿರುದ್ಧ ವರದಕ್ಷಿಣೆ ಕಿರುಕುಳ ಮತ್ತು ಸಾರ್ವಜನಿಕ ಅವಮಾನದ ಪ್ರಕರಣ ದಾಖಲಿಸಲಾಗಿದೆ.

ಪೊಲೀಸರು ಕ್ರಮ ಕೈಗೊಂಡು ವರ ಮತ್ತು ಕುಟುಂಬ ಸದಸ್ಯರಿಗೆ ದಂಡ ವಿಧಿಸಿದರು. ವರ, ಆತನ ತಂದೆ ಮತ್ತು ಇತರ ಮೂವರು ಕುಟುಂಬ ಸದಸ್ಯರು ಸೇರಿದಂತೆ ಒಟ್ಟು 5 ಜನರಿಗೆ ದಂಡ ವಿಧಿಸಲಾಯಿತು. ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ. ಅವರು ಈ ವಿಷಯದ ಬಗ್ಗೆ ತನಿಖೆಯನ್ನೂ ಪ್ರಾರಂಭಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ