Bengaluru: ಇದ್ದಕ್ಕಿದ್ದಂತೆ ನೀವು ಹೋಗುತ್ತಿರುವ ರಸ್ತೆಯಲ್ಲಿ ಬ್ಯಾಟ್‌ಮೊಬೈಲ್, ಮಿಸ್ಟರಿ ಮೆಷಿನ್, ಬಂಬಲ್ಬೀ (Bumblebee) ಕಾಣಿಸಿಕೊಂಡರೆ ನಿಮಗೆ ಹೇಗೆನ್ನಿಸಬಹುದು? ಅದರಲ್ಲೂ ಬ್ಯಾಟ್ಮ್ಯಾನ್, ಸೂಪರ್ಹೀರೋ ಅಭಿಮಾನಿಗಳಿಗಂತೂ ಪರಮಾಶ್ಚರ್ಯವೇ. ಇಂಥ ಪರಮಾಶ್ಚರ್ಯ ನಡೆದಿರುವುದು ಬೆಂಗಳೂರಿನ ಇಂದಿರಾನಗರದಲ್ಲಿ. ಇಲ್ಲಿಯ ಕಾರ್ಪೋರೇಟ್ ಆಫೀಸಿನ ಗ್ಯಾರೇಜಿನಿಂದ ಈ ವಾಹನಗಳು ಹಾದು ಹೋಗುವುದು ಮೊಬೈಲಿನಲ್ಲಿ ಸೆರೆಯಾಗಿದೆ. ನೆಟ್ಟಿಗರು ಸಿನಿಮೀಯ ರೀತಿಯ ಈ ಕಾರ್ ಪರೇಡ್ ಅನ್ನು ಕುತೂಹಲದಿಂದ ನೋಡುತ್ತಿದ್ದಾರೆ.
ಇದನ್ನೂ ಓದಿ : Viral Video: ಈ ಹೆಬ್ಬಾವುಗಳು ಸಬ್ಸ್ಟೇಷನ್ನಲ್ಲಿ ಕೆಲಸ ಹುಡುಕಿಕೊಂಡು ಬಂದಿವೆಯೇ?
‘ಕ್ರೆಡ್’ ಕಟ್ಟಡದಲ್ಲಿರುವ ಫಿನ್‌ಟೆಕ್ ಎಂಬ ಜಾಹೀರಾತು ಕಂಪೆನಿಯ ಗ್ಯಾರೇಜಿನಿಂದ ಈ ಕಾರುಗಳು ಹೊರಬರುತ್ತಿವೆ. ಭವಿಷ್ಯದಲ್ಲಿ ಬರಲಿರುವ ಐಕಾನಿಕ್ ಕಾರುಗಳ ಕಂಪೆನಿಯ ಪ್ರಚಾರ ಮತ್ತು ಅಭಿಯಾನದ ಭಾಗ ಇದಾಗಿರಬಹುದು. ಈ ವಿಡಿಯೋ ನೋಡಿದ ನೆಟ್ಟಿಗರು ತಮ್ಮ ಪ್ರತಿಕ್ರಿಯೆಗಳ ಮೂಲಕ ಹಾಸ್ಯದ ಅಲೆಯನ್ನೇ ಎಬ್ಬಿಸಿದ್ದಾರೆ.
did I just see a batmobile in Indiranagar???? pic.twitter.com/WLN3HoSZIJ
— divya pathak (@divyaappathak) September 27, 2023
ಈತನಕ ಈ ವಿಡಿಯೋ ಅನ್ನು 1.7 ಮಿಲಿಯನ್ ಜನರು ನೋಡಿದ್ದಾರೆ. 2004ರಲ್ಲಿ ಬಿಡುಗಡೆಯಾದ ‘ಟಾರ್ಝನ್ ದಿ ವಂಡರ್ ಕಾರ್’ ಸಿನೆಮಾ ನೆನಪಿಸಿಕೊಂಡಿದ್ಧಾರೆ ಒಬ್ಬರು. ನಾನು 10,000ನೆಯ ಲೈಕ್ ಕೊಟ್ಟಿದ್ದೇನೆ ಈ ವಿಡಿಯೋಗೆ ಎಂದಿದ್ದಾರೆ ಇನ್ನೊಬ್ಬರು. ಬ್ಯಾಟ್ಮೊಬೈಲ್ನಿಂದ ಏನು ಪ್ರಯೋಜನ, ಬೆಂಗಳೂರು ವಿಮಾನ ನಿಲ್ಧಾಣಕ್ಕೆ ಹೋಗಲು 3 ಗಂಟೆಗಳು ಬೇಕು ಎಂದಿದ್ದಾರೆ ಮತ್ತೊಬ್ಬರು. ಎಡಿಟಿಂಗ್ ತುಂಬಾ ಚೆನ್ನಾಗಿದೆ ಎಂದಿದ್ದಾರೆ ಮಗದೊಬ್ಬರು.
ಇದನ್ನೂ ಓದಿ : Viral Video: ನೋಯ್ಡಾ; ನಾಯಿಗೆ ಹೆದರಿ ಅಳುತ್ತಿದ್ದ ಮಗು; ಅದೇ ಲಿಫ್ಟನ್ನೇ ಬಳಸುತ್ತೇನೆಂದು ಜಗಳಕ್ಕಿಳಿದ ನಾಯಿ ಪೋಷಕ
ಎಷ್ಟೇ ತುಟ್ಟಿಯಾದ ಕಾರುಗಳಿದ್ದರೂ ಭಾರತದ ಗಲ್ಲಿಗಳಲ್ಲಿರುವ ನಾಯಿಗಳು ಇವುಗಳ ಮೇಲೆಯೇ ಮೂತ್ರ ವಿಸರ್ಜನೆ ಮಾಡುತ್ತವೆ ಎಂದಿದ್ದಾರೆ ಒಬ್ಬರು. ಕ್ರೆಡ್ನ ಮಾರ್ಕೆಟಿಂಗ್ ತಂತ್ರ ಭಾರೀ ಜೋರಾಗಿದೆ ಎಂದಿದ್ದಾರೆ ಇನ್ನೊಬ್ಬರು. ಬ್ಯಾಟ್ಮೊಬೈಲ್ಗೆ ಬೆಂಗಳೂರಿನ ರಸ್ತೆಗಳು ಸರಿಹೊಂದಲಾರವು ಎಂದಿದ್ದಾರೆ ಮತ್ತೊಬ್ಬರು. ಮಾರ್ಕೆಟಿಂಗ್ ಟೀಮ್ನ ಐಡಿಯಾ ಮೆಚ್ಚುವಂಥದ್ದೇ! ಎಂದಿದ್ದಾರೆ ಮತ್ತೊಂದಿಷ್ಟು ಜನ. ಏನೇ ಆಗಲಿ ಈ ಕಾರುಗಳೆಲ್ಲವೂ ತುಂಬಾ ಇಂಟ್ರೆಸ್ಟಿಂಗ್ ಆಗಿವೆ ಎಂದಿದ್ದಾರೆ ಹಲವಾರು ಜನ.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 12:25 pm, Fri, 29 September 23