ಬೆಂಗಳೂರು ಕ್ಯಾಬ್​​​ನಲ್ಲಿ ಓಡಾಡುವುದು ಎಷ್ಟು ಸೇಫ್? ತಮಗಾದ ಕಹಿ ಅನುಭವ ಹಂಚಿಕೊಂಡ ಯುವತಿ

ಈ ಕಾಲದಲ್ಲಿ ಯಾರನ್ನು ನಂಬುವುದು ಬಿಡುವುದು ಎಂದು ತಿಳಿಯುವುದಿಲ್ಲ. ಒಳ್ಳೆಯವರಂತೆ ಕಾಣುವ ವ್ಯಕ್ತಿಯಲ್ಲಿಯೂ ಕೆಟ್ಟತನ ಇರುತ್ತದೆ. ಕೆಟ್ಟವರಂತೆ ಕಾಣುವ ವ್ಯಕ್ತಿಗಳು ಮನಸ್ಸಿನಿಂದ ಒಳ್ಳೆಯವರಾಗಿರುತ್ತಾರೆ. ಆದರಲ್ಲಿಯೂ ಹೆಣ್ಣು ಮಕ್ಕಳು ಆಟೋ, ಬಸ್ ಕ್ಯಾಬ್ ನಲ್ಲಿ ಪ್ರಯಾಣಿಸುವಾಗ ಎಷ್ಟು ಜಾಗರೂಕರಾಗಿದ್ದರೂ ಸಾಲುವುದಿಲ್ಲ. ಬೆಂಗಳೂರಿನಲ್ಲಿ ಯುವತಿಯೊಬ್ಬಳು ಕ್ಯಾಬ್ ನಲ್ಲಿ ಪ್ರಯಾಣಿಸುತ್ತಿದ್ದ ವೇಳೆಯಲ್ಲಿ ಚಾಲಕನು ಅನುಚಿತವಾಗಿ ವರ್ತಿಸಿದ್ದು, ತನಗಾದ ಕೆಟ್ಟ ಅನುಭವವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾಳೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಬಳಕೆದಾರರು ಕಾಮೆಂಟ್ಗಳನ್ನು ಮಾಡಿದ್ದಾರೆ.

ಬೆಂಗಳೂರು ಕ್ಯಾಬ್​​​ನಲ್ಲಿ ಓಡಾಡುವುದು ಎಷ್ಟು ಸೇಫ್? ತಮಗಾದ ಕಹಿ ಅನುಭವ ಹಂಚಿಕೊಂಡ ಯುವತಿ
ವೈರಲ್​​ ಪೋಸ್ಟ್​
Image Credit source: Twitter
Edited By:

Updated on: Apr 18, 2025 | 12:19 PM

ಕಾಲ ತುಂಬಾನೇ ಕೆಟ್ಟೋಗಿದೆ. ಹೆಣ್ಣು ಮಕ್ಕಳಿ (women) ಗೆ ಸುರಕ್ಷತೆ (safety) ಯೇ ಇಲ್ಲವಾಗಿದೆ ಎನ್ನುವುದಕ್ಕೆ ನಮ್ಮ ಸುತ್ತಮುತ್ತಲಿನಲ್ಲಿ ನಡೆಯುವ ಘಟನೆಗಳೇ ಸಾಕ್ಷಿಯಾಗಿದೆ. ಸಾಮಾನ್ಯವಾಗಿ ಬಸ್ಸಿನಲ್ಲಿ, ರೈಲು ಅಥವಾ ನಡೆದುಕೊಂಡು ಹೋಗುವಾಗ ಸುತ್ತಮುತ್ತಲಿನಲ್ಲಿರುವ ಕೆಟ್ಟ ಮನಸ್ಸಿನ ವ್ಯಕ್ತಿಗಳು ಅನುಚಿತವಾಗಿ ವರ್ತಿಸುವ ಮೂಲಕ ಮಹಿಳೆಯರಿಗೆ ಅಹಿತಕರ ಅನುಭವವಾಗಿರುತ್ತದೆ. ಆದರೆ ಇದೀಗ ಶ್ರಾವಿಕಾ ಜೈನ್ (shravika jain) ಬೆಂಗಳೂರಿ (bengaluru) ನಲ್ಲಿ ರಾತ್ರಿ ಹನ್ನೊಂದು ಗಂಟೆಗೆ ಕ್ಯಾಬ್ (cab) ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ತಮಗಾದ ಅನುಭವವನ್ನು ಹಂಚಿಕೊಂಡಿದ್ದಾರೆ. ಈ ವೇಳೆಯಲ್ಲಿ ಕ್ಯಾಬ್ ಡ್ರೈವರ್ (cab driver) ತಮ್ಮೊಂದಿಗೆ ಅನುಚಿತವಾಗಿ ವರ್ತಿಸಿರುವುದನ್ನು ಹೇಳಿಕೊಂಡಿದ್ದು, ಬಳಕೆದಾರರು ಈ ಪೋಸ್ಟ್ ಗೆ ನಾನಾ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.

Shravika jain ಹೆಸರಿನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಬೆಂಗಳೂರಿನ ವಿಮಾನ ನಿಲ್ದಾಣದಿಂದ ರಾತ್ರಿ 11 ಗಂಟೆಗೆ ಪ್ರಯಾಣಿಸುತ್ತಿದ್ದ ವೇಳೆಯಲ್ಲಿ ತಮಗಾದ ಅನುಭವವನ್ನು ಸವಿವರವಾಗಿ ಹೇಳಿದ್ದಾರೆ. ಹೌದು ತಮ್ಮ ಈ ಪೋಸ್ಟ್ ನಲ್ಲಿ ‘ಈ ಬೆಂಗಳೂರು ಸುರಕ್ಷಿತ ಎಂದು ಜನರು ಹೇಳುತ್ತಾರೆ? ನಿನ್ನೆ ರಾತ್ರಿ ವಿಮಾನ ನಿಲ್ದಾಣದಿಂದ ಕ್ಯಾಬ್‌ನಲ್ಲಿ ಬಂದದ್ದು ನನ್ನ ಜೀವನದ ಅತ್ಯಂತ ಭಯಾನಕ ಅನುಭವಗಳಲ್ಲಿ ಒಂದು. ಪ್ರಯಾಣ ಪ್ರಾರಂಭವಾದ ಕೂಡಲೇ ಚಾಲಕ ನನ್ನನ್ನು ಕೆಟ್ಟ ದೃಷ್ಟಿಯಿಂದ ನೋಡಲು ಪ್ರಾರಂಭಿಸಿದ್ದಾನೆ.

ಇದನ್ನೂ ಓದಿ
ಭಾರತದ ಮೊದಲ ಕಾಫಿ ತೋಟ ತಾಣದ ಕಥೆಯನ್ನು ಹಂಚಿಕೊಂಡ ಆನಂದ್‌ ಮಹೀಂದ್ರಾ
ಕಾಲೇಜು ಪ್ರೊಫೆಸರ್‌ ಎನರ್ಜಿಗೆ ಫಿದಾ ಆದ ವಿದ್ಯಾರ್ಥಿಗಳು
ಬೆಂಗಳೂರಿನಲ್ಲಿ ಆಟೋ ಬುಕ್ ಮಾಡುವ ಟಿಪ್ಸ್ ನೀಡಬೇಕು
ಒಂದೇ ಮಂಟಪದಲ್ಲಿ, ಒಂದೇ ಸಮಯದಲ್ಲಿ ಇಬ್ಬರು ಮಹಿಳೆಯರನ್ನು ಮದುವೆಯಾದ ವ್ಯಕ್ತಿ

ಅಷ್ಟೇ ಅಲ್ಲದೇ ಈ ವೇಳೆಯಲ್ಲಿ ಕನ್ನಡ ಅರ್ಥವಾಗುತ್ತದೆಯೇ ಎಂದು ಕೇಳಿದ್ದು, ನಾನು ಹೌದು ಎನ್ನುತ್ತಿದ್ದಂತೆ, ಅವನು ಯೂಟ್ಯೂಬ್‌ನಲ್ಲಿ ಜೋರಾಗಿ ಸಂಗೀತ ಹಾಕಿ ಜೋರಾಗಿ ಹಾಡುತ್ತಾ, ತನ್ನ ತೊಡೆಗಳನ್ನು ತಟ್ಟಲು ಪ್ರಾರಂಭಿಸಿದ್ದಾನೆ. ಈ ವೇಳೆಯಲ್ಲಿ ಪರಿಸ್ಥಿತಿ ಭಯಾನಕವಾಯಿತು. ಆ ತಕ್ಷಣವೇ ನಾನು ಹಾಡಿನ ಧ್ವನಿ ಕಡಿಮೆ ಮಾಡಲು ಪದೇ ಪದೇ ಹೇಳಿದರೂ ಕೂಡ ಈ ಚಾಲಕನು ಕೆಟ್ಟ ನೋಟದಿಂದ ಪ್ರತಿಕ್ರಿಯಿಸಿದ್ದಾನೆ.

ಆತನ ಈ ಕೆಟ್ಟ ನಡವಳಿಕೆಯನ್ನು ವಿರೋಧಿಸಿದರೂ ಕೂಡ ಆತನ ವರ್ತನೆಯೂ ಮಿತಿ ಮೀರಿದ್ದು, ಕಾರಿನಲ್ಲಿ ಸಿಗರೇಟ್ ಸೇದಿದ್ದಾನೆ. ಆ ಸಮಯದಲ್ಲಿ ನಾನು ಒಂಟಿಯಾಗಿದ್ದೆ, ರಾತ್ರಿ ಬೇರೆಯಾಗಿತ್ತು. ಈ ವೇಳೆಯಲ್ಲಿ ನನ್ನ ಮೂವರು ಸ್ನೇಹಿತರು ನನಗೆ ಕರೆ ಮಾಡಿ ನನ್ನ ಸ್ಥಳವನ್ನು ಟ್ರ್ಯಾಕ್ ಮಾಡುತ್ತಿದ್ದರು.ಅದಲ್ಲದೇ, ಈ ಚಾಲಕನು ರಸ್ತೆಯ ಮಧ್ಯದಲ್ಲಿ ಕಾರನ್ನು ನಿಲ್ಲಿಸಿ ತಾನು ಟೀ ಕುಡಿಯಲು ಬಯಸುವುದಾಗಿ ಹೇಳಿದ.

ಆದರೆ ನಾನು, ನನ್ನನ್ನು ಮೊದಲು ಮನೆಗೆ ಕರೆದೊಯ್ಯುವಂತೆ ವಿನಂತಿಸಿದರೂ, ಚಾಲಕ ಹೊರಗೆ ಹೋಗಿದ್ದು ಹತ್ತು ನಿಮಿಷಗಳ ನಂತರ ಹಿಂತಿರುಗಿದ. ಈ ಪ್ರಯಾಣದ ಉಳಿದ ಭಾಗದಲ್ಲಿ ಅವನು ತನ್ನನ್ನು ಅನುಚಿತವಾಗಿ ನೋಡುತ್ತಲೇ ಇದ್ದದ್ದು ನನಗೆ ಆ ಕ್ಷಣ ಭಯಾನಕವಾಗಿತ್ತು. ಈ ವೇಳೆಯಲ್ಲೂ ನಾನು ಭಯಭೀತಳಾಗಿದ್ದೆ ಹಾಗೂ ಸುರಕ್ಷಿತವಾಗಿ ಮನೆ ತಲುಪಬೇಕೆಂದು ಪ್ರಾರ್ಥಿಸುತ್ತಿದ್ದೆ. ಆದರೆ ಅದೃಷ್ಟವಶಾತ್, ಯಾವುದೇ ಅಹಿತಕರ ಘಟನೆ ಸಂಭವಿಸದೆ ತಲುಪಿದೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ : ಹಳೆಯ ಗ್ಯಾಸ್ ಸ್ಟವ್​​ವನ್ನೇ ಶವರ್ ಆಗಿ ಪರಿವರ್ತಿಸಿದ ವ್ಯಕ್ತಿ, ಈತ ಮಾಡಿದ ಜುಗಾಡ್ ಪ್ಲಾನ್ ನೋಡಿ

ವೈರಲ್ ಪೋಸ್ಟ್ ಇಲ್ಲಿದೆ ನೋಡಿ

ಯುವತಿಯ ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಒಂಬತ್ತು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಬಳಕೆದಾರರು ಈ ಚಾಲಕ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ಮೂಲಕ ಪ್ರತಿಕ್ರಿಯಿಸಿದ್ದಾರೆ. ಅದಲ್ಲದೇ, ಬೆಂಗಳೂರು ಸಂಚಾರ ಪೊಲೀಸರು ಪ್ರತಿಕ್ರಿಯಿಸಿ, ಈ ಬಗ್ಗೆ ತನಿಖೆ ಪ್ರಾರಂಭಿಸುವ ಸಲುವಾಗಿ ನಿಮ್ಮ ನೇರ ಸಂದೇಶದ ಮೂಲಕ ತಮ್ಮ ಸಂಪರ್ಕ ವಿವರಗಳನ್ನು ನೀಡಿ ಎಂದು ಕೇಳಿದ್ದಾರೆ. ಬಳಕೆದಾರರೊಬ್ಬರು, ‘ನಿಮ್ಮ ಈ ಕೆಟ್ಟ ಅನುಭವವನ್ನು ಕೇಳಿದ ಮೇಲೆ ರಾತ್ರಿಯ ಕ್ಯಾಬ್ ನಲ್ಲಿ ಓಡಾಡುವುದು ನಿಜಕ್ಕೂ ಭಯವನ್ನುಂಟು ಮಾಡುತ್ತಿದೆ ಎಂದಿದ್ದಾರೆ. ಮತ್ತೊಬ್ಬ, ಆ ವ್ಯಕ್ತಿಯ ಮೇಲೆ ಕಠಿಣ ಕ್ರಮ ಕೈಗೊಳ್ಳಿ ಎಂದಿದ್ದಾರೆ. ಇನ್ನೊಬ್ಬರು, ಈ ರೀತಿ ಹೆಣ್ಣು ಮಕ್ಕಳ ಜೊತೆಗೆ ಅನುಚಿತವಾಗಿ ವರ್ತಿಸುವವರ ವಿರುದ್ಧ ಪೊಲೀಸ್ ಇಲಾಖೆಯೂ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದಿದ್ದಾರೆ.

ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:17 pm, Fri, 18 April 25