Viral : ಬೆಂಗಳೂರು ಚೆನ್ನಾಗಿಲ್ಲ, ಇದು ಸಂಪೂರ್ಣ ಕೊಳಕು ನಗರ ಎಂದು ಟೀಕಿಸಿದ ವ್ಯಕ್ತಿ

ಮಾಯಾನಗರಿ ಬೆಂಗಳೂರು ಅದೆಷ್ಟೋ ಜನರಿಗೆ ಬದುಕು ನೀಡಿದೆ. ಜಿಲ್ಲೆ ಹಾಗೂ ಪರರಾಜ್ಯಗಳಿಂದ ಬಂದ ಜನರು ಇಲ್ಲಿ ನೆಲೆಸಿದ್ದಾರೆ. ಹೌದು, ಇಲ್ಲಿಗೆ ಯಾರು ಬಂದರೂ ಕೂಡ ಎಲ್ಲರನ್ನು ಪ್ರೀತಿಯಿಂದ ಅಪ್ಪಿಕೊಂಡ ಸಿಲಿಕಾನ್ ಸಿಟಿ ಬೆಂಗಳೂರಿನ ಬಗ್ಗೆ ವ್ಯಕ್ತಿಯೊಬ್ಬನು ಕೆಟ್ಟದಾಗಿ ಮಾತನಾಡಿದ್ದಾನೆ. ಹೌದು, ಉದ್ಯೋಗ ಅರಸಿ ಬಂದು ಇಲ್ಲಿಯೇ ನೆಲೆಸಿರುವ ಪರಭಾಷಿಕನು ಬೆಂಗಳೂರನ್ನು ಕೊಳಕು ನಗರ ಎಂದಿದ್ದಾನೆ. ಇದು ಬಳಕೆದಾರರನ್ನು ಕೆರಳಿಸಿದ್ದು ಈ ಪೋಸ್ಟ್‌ಗೆ ಬಳಕೆದಾರರು ಖಾರವಾಗಿ ಕಾಮೆಂಟ್ ಮಾಡಿದ್ದಾರೆ.

Viral : ಬೆಂಗಳೂರು ಚೆನ್ನಾಗಿಲ್ಲ, ಇದು ಸಂಪೂರ್ಣ ಕೊಳಕು ನಗರ ಎಂದು ಟೀಕಿಸಿದ ವ್ಯಕ್ತಿ
ವೈರಲ್ ಪೋಸ್ಟ್
Image Credit source: Twitter/Peter Adams/Stone/Getty Images

Updated on: Jul 09, 2025 | 7:02 PM

ಬೆಂಗಳೂರು (Bengaluru) ಎಂದ ಕೂಡಲೇ ಮೊದಲು ನೆನಪಿಗೆ ಬರುವುದೇ ಟ್ರಾಫಿಕ್ ಸಮಸ್ಯೆ. ಅದು ಬಿಟ್ಟರೆ, ಇಲ್ಲಿ ನೆಲೆಸಿರುವ ಜನರಿಗೆ ಬೇರೆ ಯಾವುದೇ ಸಮಸ್ಯೆಯಿಲ್ಲ. ಹೀಗಾಗಿ ಓದು ಮುಗಿಯುತ್ತಿದ್ದಂತೆ ಯುವಕ ಯುವತಿಯರು ಉದ್ಯೋಗ ಅರಸುತ್ತಾ ಬೆಂಗಳೂರಿನತ್ತ ಮುಖ ಮಾಡುತ್ತಾರೆ. ಹೀಗಾಗಿ ಇಲ್ಲಿ ಬೆಂಗಳೂರಿಗರಿಗಿಂತ ಬೇರೆ ಜಿಲ್ಲೆ ಹಾಗೂ ರಾಜ್ಯದ ಜನರೇ ಹೆಚ್ಚು. ಹೀಗಿರುವಾಗ ಇಲ್ಲೊಬ್ಬ ವ್ಯಕ್ತಿಗೆ ಬೆಂಗಳೂರು ಚೆನ್ನಾಗಿಲ್ಲವಂತೆ, ಇದು ಕೊಳಕು ನಗರ, ಇಲ್ಲಿನ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ (transport system) ಬಗ್ಗೆ ಟೀಕಿಸಿದ್ದಾನೆ. ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಬಳಕೆದಾರರ ಅಸಮಾಧಾನಕ್ಕೆ ಕಾರಣವಾಗಿದೆ.

@rishabhvansal97@ ಹೆಸರಿನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿಕೊಳ್ಳಲಾಗಿದೆ. ಇದರಲ್ಲಿ, ಬೆಂಗಳೂರು ನಗರ ಸಂಪೂರ್ಣ ಕೊಳಕು ಪ್ರದೇಶ. ಕಳೆದ 30 ನಿಮಿಷಗಳಿಂದ ನಾನು ಕ್ಯಾಬ್ ಅಥವಾ ಆಟೋ ಬುಕ್ ಮಾಡಲು ಪ್ರಯತ್ನಿಸುತ್ತಿದ್ದೇನೆ – ಏನೂ ಇಲ್ಲ. ಈಗ ಈ ಸರ್ಕಾರ ಉಬರ್ ಮತ್ತು ಓಲಾವನ್ನು ಸಹ ನಿಷೇಧಿಸಲು ನಿರ್ಧರಿಸಿದೆ. ಮೊದಲು ಅವರು ಬೈಕ್ ಟ್ಯಾಕ್ಸಿಗಳನ್ನು ನಿಷೇಧಿಸಿದರು. ಈಗ ಇದು? ಇದು ಯಾವ ರೀತಿಯ ಮಾಫಿಯಾ ಅಸಂಬದ್ಧ ವರ್ತನೆ. ಮೂಲಸೌಕರ್ಯವಿಲ್ಲ, ಸರಿಯಾದ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇಲ್ಲ. ನಿರಂತರ ಭಾಷೆಯ ಅಡೆತಡೆಗಳು – ಇದು ಒಂದು ತಮಾಷೆ ಅಷ್ಟೇ. ರಾಜ್ಯ ಸರ್ಕಾರ ಇಲ್ಲಿನ ಕಚೇರಿಗಳನ್ನು ಮುಚ್ಚುವಂತೆ ಹೇಳಬೇಕು ಎಂದು ಪೋಸ್ಟ್‌ನಲ್ಲಿ ಬರೆದುಕೊಳ್ಳಲಾಗಿದೆ.

ಇದನ್ನೂ ಓದಿ
ನಿಜವಾದ ಟಾಮ್ ಆ್ಯಂಡ್ ಜೆರಿ; ಒಟ್ಟಿಗೇ ಊಟ ಮಾಡುವ ಬೆಕ್ಕು-ಇಲಿ ವಿಡಿಯೋ ವೈರಲ್
ಕೆಳಗಿಂದ ಮೇಲೆ ಹರಿವ ನೀರಿನಲ್ಲಿ ದೋಣಿ ಬಿಟ್ಟ ಸಚಿವ ಶಿವರಾಜ್ ಸಿಂಗ್ ಚೌಹಾಣ್
ಸಾಮಾನ್ಯ ಆಟೋರಿಕ್ಷಾ ದರಕ್ಕೆ ಹೋಲಿಸಿದ್ರೆ ಆ್ಯಪ್ ಆಧಾರಿತ ಆಟೋ ಬಲು ದುಬಾರಿ
ಮನೆಯಲ್ಲಿ ಯಾರೂ ಇಲ್ಲದಿದ್ದಾಗ 3ನೇ ಮಹಡಿಯ ಕಿಟಕಿಯಿಂದ ಹೊರಗೆ ನೇತಾಡಿದ ಮಗು

ಇದನ್ನೂ ಓದಿ : Video : ಇದು ಎಐ ಎಫೆಕ್ಟ್ : ಅಜ್ಜಿಯ ಹುಟ್ಟುಹಬ್ಬಕ್ಕೆ ಅಜ್ಜನನ್ನೇ ಸ್ವರ್ಗದಿಂದ ಧರೆಗಿಳಿಸಿದ ಮೊಮ್ಮಗಳು

ಜುಲೈ 6 ರಂದು ಶೇರ್ ಮಾಡಲಾದ ಈ ಪೋಸ್ಟ್ ಒಂದು ಲಕ್ಷ ಅರವತ್ತು ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ಮತ್ತೆ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಅದೇ ವ್ಯಕ್ತಿ ಜನರೇ, ಕ್ಷಮಿಸಿ, ಇದು ಬೆಂಗಳೂರಿನ ಬಗ್ಗೆ ಅಲ್ಲ. ಬೆಂಗಳೂರು ಚೆನ್ನಾಗಿದೆ. ಇಷ್ಟು ವರ್ಷಗಳಿಂದ ಈ ನಗರವನ್ನು ಆಳುತ್ತಿರುವ ಮೂರ್ಖ, ಭ್ರಷ್ಟ ಸರ್ಕಾರದ ಬಗ್ಗೆ ಎನ್ನುತ್ತಾ ಸಮರ್ಥನೆ ಕೊಟ್ಟಿದ್ದಾನೆ. ಬಳಕೆದಾರರೊಬ್ಬರು, ಬಿಡಿ ಸಹೋದರ, ಯಾರು ನಿಮ್ಮನ್ನು ಇಲ್ಲಿ ಉಳಿದುಕೊಳ್ಳಿ ಎಂದು ಕೇಳುತ್ತಿಲ್ಲ, ನಮ್ಮ ರಾಜ್ಯದ ಬಗ್ಗೆ ನಮಗೆ ಚೆನ್ನಾಗಿ ತಿಳಿದಿದೆ. ಮೆಟ್ರೋ ಜೊತೆಗೆ ಅತ್ಯುತ್ತಮ ಸಾರ್ವಜನಿಕ ಸಾರಿಗೆಯೂ ಇದೆ. ಸ್ವಲ್ಪ ಜನದಟ್ಟಣೆ ಇದೆ ಎಂದು ನಾನು ಒಪ್ಪುತ್ತೇನೆ ಆದರೆ ಪರವಾಗಿಲ್ಲ ಎಂದಿದ್ದಾರೆ.

ವೈರಲ್ ಪೋಸ್ಟ್ ಇಲ್ಲಿದೆ ನೋಡಿ

ಮತ್ತೊಬ್ಬರು, ಬಿಟ್ಟು ಬಿಡಿ ಎಂಬ ಮಾತು ಸುಲಭ, ನಿಮ್ಮ ಸ್ವಂತ ನಗರವನ್ನು ಮೊದಲು ಅಭಿವೃದ್ಧಿ ಪಡಿಸಿ, ನೀವು ಕೊಳಕು ಕಾರ್ಪೋರೇಟ್ ಗುಲಾಮರು. ನಿಮ್ಮ ಊರಿನಲ್ಲಿರುವ ನಿಮ್ಮ ಸ್ಥಳೀಯ ಶಾಸಕ ಅಥವಾ ಸಂಸದರಿಗೆ ಈ ಪ್ರಶ್ನೆ ಕೇಳಿ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಜನರು ವೈಯುಕ್ತಿಕ ಸಾರಿಗೆಯಲ್ಲಿ ಸ್ವಲ್ಪ ಹಣವನ್ನು ಹೂಡಿಕೆ ಮಾಡಲು ಏಕೆ ಸಾಧ್ಯವಿಲ್ಲ ಎಂದು ನನಗೆ ಇನ್ನೂ ಅರ್ಥವಾಗುತ್ತಿಲ್ಲ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ