Viral: ಸಿಂಪತಿ ಟ್ರಿಕ್ಸ್ ವರ್ಕ್ ಆಯ್ತು; ರ‍್ಯಾಪಿಡೊ ಕ್ಯಾಬ್ ಚಾಲಕನ ಮೋಸದಾಟದಿಂದ ಪಾರದ ಕಥೆಯನ್ನು ಹಂಚಿಕೊಂಡ ಬೆಂಗಳೂರಿನ ಯುವಕ
ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾದ ರೆಡ್ಡಿಟ್‌ನಲ್ಲಿ ಬಳಕೆದಾರರು ಕೆಲವೊಂದು ಕುತೂಹಲಕಾರಿ ಕಥೆಗಳನ್ನು, ಅನುಭವಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಬೆಂಗಳೂರಿನ ಯುವಕನೊಬ್ಬ ಕೂಡಾ ತನ್ನ ಬುದ್ಧಿವಂತಿಕೆಯಿಂದ ಸಿಂಪತಿ ಟ್ರಿಕ್ಸ್ ಬಳಸಿ, ರ‍್ಯಾಪಿಡೊ ಕ್ಯಾಬ್ ಚಾಲಕನ ವಂಚನೆಯಿಂದ ಸ್ವಲ್ಪದರಲ್ಲಿಯೇ ಪಾರಾದ ಕಥೆಯನ್ನು ಹಂಚಿಕೊಂಡಿದ್ದಾನೆ. ಈ ಪೋಸ್ಟ್ ಇದೀಗ ಸಖತ್ ವೈರಲ್ ಆಗುತ್ತಿದೆ.
ಕ್ಯಾಬ್‌ಗಳಲ್ಲಿ ಪ್ರಯಾಣಿಸುವುದು ಎಷ್ಟು ಅನುಕೂಲಕರವೋ ಕೆಲವೊಮ್ಮೆ ಅಷ್ಟೇ ಡೇಂಜರ್ ಕೂಡಾ ಹೌದು. ಯಾಕಂದ್ರೆ ಕೆಲವೊಮ್ಮೆ ಮುಗ್ಧ ಗ್ರಾಹಕರನ್ನೇ ಟಾರ್ಗೆಟ್ ಮಾಡಿ ಕ್ಯಾಬ್ ಚಾಲಕರು ಅವರಿಂದ ಹಣವನ್ನು ಪೀಕುವಂತಹ ಕೆಲಸಗಳನ್ನು ಮಾಡುತ್ತಾರೆ. ಇಂತಹ ಸಾಕಷ್ಟು ಸ್ಕ್ಯಾಮ್‌ಗಳ ಕುರಿತ ಸುದ್ದಿಗಳ ಬಗ್ಗೆ ನೀವು ಈ ಹಿಂದೆಯೂ ಕೇಳಿರುತ್ತೀರಿ ಅಲ್ವಾ. ಇದೀಗ ಇಲ್ಲೊಬ್ಬ ಯುವಕನಿಗೂ ರ‍್ಯಾಪಿಡೊ ಕ್ಯಾಬ್ ಚಾಲಕ ಪಂಗನಾಮ ಹಾಕಲು ಹೊರಟಿದ್ದು, ಯುವಕ ತನ್ನ ಬುದ್ಧಿವಂತಿಕೆಯಿಂದ ಸಿಂಪತಿ ಟ್ರಿಕ್ಸ್ ಬಳಸಿ, ವಂಚನೆಯಿಂದ ಸ್ವಲ್ಪದರಲ್ಲಿಯೇ ಪಾರಾಗಿದ್ದಾನೆ. ತನ್ನ ಸಣ್ಣ ಗೆಲುವಿನ ಈ ಕಥೆಯನ್ನು ಆತ ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದಾನೆ.
ಬೆಂಗಳೂರಿನ 25 ವರ್ಷದ ಯುವಕ ಸೆಂಟ್ರಲ್ ಕಾಲೇಜಿನಿಂದ ಹೂಡಿಗೆ ಹೋಗಲು ರ‍್ಯಾಪಿಡೊ ಕ್ಯಾಬ್ ಬುಕ್ ಮಾಡ್ತಾನೆ. ರಾತ್ರಿ ತಡ ಆಗಿದ್ದರಿಂದ ಹಾಗೂ ತುಂಬಾ ಮಳೆ ಬರುತ್ತಿದ್ದ ಕಾರಣ ಆ ಚಾಲಕನಿಗೆ 2.6 ರೇಟಿಂಗ್ಸ್ ಇದ್ರೂ ಕೂಡಾ ಆತನ ಅದೇ ಕ್ಯಾಬ್ ಬುಕ್ ಮಾಡ್ತಾನೆ. ಆದರೆ ಈ ಕ್ಯಾಬ್‌ನಲ್ಲಿ ಯುವಕನಿಗೆ ತಾನು ಅಂದುಕೊಂಡಂತೆ ಪ್ರಯಾಣವು ಸುಲಭವಾಗಿರಲಿಲ್ಲ. ಇನ್ನೇನು ತಾನು ಹೋಗಬೇಕಿದ್ದ ಸ್ಥಳ ತಲುಪಬೇಕು ಎನ್ನುವಷ್ಟರಲ್ಲಿ ಕ್ಯಾಬ್ ಚಾಲಕ 600 ರೂ. ಚಾರ್ಜ್ ಆಯ್ತು ಎಂದು ಹೇಳಿ ವಂಚಿಸಲು ಮುಂದಾಗಿದ್ದಾನೆ. ನಾನು ಬುಕ್ ಮಾಡಿದಾಗ 385 ರೂ. ಇತ್ತು, ಆದ್ರೆ ಇವಾಗ ಈತ ಏನಕ್ಕೆ ಇಷ್ಟು ಜಾಸ್ತಿ ಚಾರ್ಜ್ ಮಾಡಿದ್ದಾನೆ ಎಂದು ಯೋಚಿಸಿ ಕರೆಕ್ಟಾಗಿ ಲಿಸ್ಟ್ ತೋರಿಸಿ ಎಂದು ಯುವಕ ಹೇಳ್ತಾನೆ. ಆ ಸಂದರ್ಭದಲ್ಲಿ ಹಿಂದಿನ ಸ್ಕ್ರೀನ್‌ಶಾರ್ಟ್ ಲಿಸ್ಟ್ ತೋರಿಸಿ ಚಾಲಕ ಮೋಸ ಮಾಡಲು ಮುಂದಾಗುತ್ತಾನೆ.
Cab Scam Alert: My Tactical Escape byu/Sharp-Celery-6745 inbangalore
ಈತನ ಮೋಸದಾಟವನ್ನು ಅರಿತ ಯುವಕ ಈತನಿಗೆ ಸರಿಯಾಗಿ ಬುದ್ಧಿ ಕಲಿಸಲೇಬೇಕು ಎಂದು ನನ್ನ ಸರ್ವರ್ ಸರಿಯಿಲ್ಲ ಎಂದು ಶಪಿಸುತ್ತಾ ಸದ್ಯಕ್ಕೆ ನಾನು 385 ರೂ. ಹಣವನ್ನು ಪಾವತಿ ಮಾಡುತ್ತೇನೆ. ಸರ್ವರ್ ಬಂದ ಬಳಿಕ ನಿಮಗೆ ಆನ್‌ಲೈನ್ ಪೇಮೆಂಟ್ ಮಾಡ್ತೇನೆ ಎಂದು ಹೇಳ್ತಾನೆ. ಇದಕ್ಕೆ ಚಾಲಕ ಒಪ್ಪದಿದ್ದಾಗ ಸರ್ ನಾನು ಹಣ ಪಾವತಿ ಮಾಡ್ತೇನೆ ಎಂದು ಸುಮಾರು 20 ರಿಂದ 25 ನಿಮಿಷಗಳ ಕಾಲ ಅಲ್ಲೇ ನಿಂತು ಯುವಕ ಸಿಂಪತಿಯ ನಾಟವಾಡುವಾಡುತ್ತಾನೆ. ಇನ್ನೂ ಈತನ ಸರ್ವರ್ ಬರುವುದನ್ನು ಕಾದರೆ ನನ್ನ ನಿದ್ದೆಯೇ ಹಾಳಾಗುತ್ತದೆ ಎಂದು ಕ್ಯಾಬ್ ಡ್ರೈವರ್ 385 ರೂಪಾಯಿಯನ್ನು ತೆಗೆದುಕೊಂಡು ಸೀದಾ ಅಲ್ಲಿಂದ ಹೊರಡು ಬಿಡುತ್ತಾನೆ. ಪರಿಸ್ಥಿಯನ್ನು ಕೂಲ್ ಆಗಿ ನಿಭಾಯಿಸಿ ಮೋಸದಿಂದ ಪಾರಾದ ತನ್ನ ಸಣ್ಣ ಗೆಲುವಿನ ಹೆಮ್ಮೆಯ ಕಥೆಯನ್ನು ಯುವಕ ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದಾನೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ 50 ಕೋಟಿ ರೂ. ಬೆಲೆಯ ಐಷಾರಾಮಿ ಅಪಾರ್ಟ್‌ಮೆಂಟ್ ಖರೀದಿಸಿದ ನಾರಾಯಣ ಮೂರ್ತಿ
Sharp_Celery-6745 ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ಪೋಸ್ಟ್ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಪರಿಸ್ಥಿತಿಯನ್ನು ಉತ್ತಮವಾಗಿ ನಿಭಾಯಿಸಲು ಇದೊಂದು ಉತ್ತಮ ಮಾರ್ಗʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇದು ಸಣ್ಣ ಗೆಲುವಲ್ಲ, ದೊಡ್ಡ ಗೆಲುವು; ಯಾವುದೇ ಗಲಾಟೆಯನ್ನು ಮಾಡದೆ ವಂಚನೆಯಿಂದ ಎಸ್ಕೇಪ್ ಆದದ್ದು ನಿಜಕ್ಕೂ ಗ್ರೇಟ್ʼ ಎಂದು ಹೇಳಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:27 pm, Sat, 7 December 24