AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈವೆಂಟ್​​ನಲ್ಲಿ ಭಾಗಿಯಾಗಲು ಈ ಚಾಯ್‌ವಾಲಾ ಪಡೆಯುವ ಸಂಭಾವಣೆ ಎಷ್ಟು?

ನಾಗ್ಪುರದ ಪ್ರಸಿದ್ಧ ಚಹಾ ಮಾರಾಟಗಾರ ಡಾಲಿ ಚಾಯ್ವಾಲಾ ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಅವರ ಭೇಟಿಯ ನಂತರ ವಿಶ್ವದಾದ್ಯಂತ ಸಖತ್​ ಫೇಮಸ್​​​ ಆಗಿದ್ದಾನೆ. ಇದೀಗ ದೇಶ ವಿದೇಶಗಳಲ್ಲಿ ಒಂದು ಈವೆಂಟ್‌ಗಳಲ್ಲಿ ಭಾಗಿಯಾಗಲು ಡಾಲಿ ಪಡೆಯುವ ಸಂಭಾವಣೆ ಕುರಿತ ವಿಡಿಯೋವೊಂದು ಎಲ್ಲೆಡೆ ವೈರಲ್​ ಆಗುತ್ತಿದೆ.

ಅಕ್ಷತಾ ವರ್ಕಾಡಿ
|

Updated on:Dec 07, 2024 | 12:39 PM

Share

ನಾಗ್ಪುರದ ಪ್ರಸಿದ್ಧ ಚಹಾ ಮಾರಾಟಗಾರ ಡಾಲಿ ಚಾಯ್ವಾಲಾ ಸೋಶಿಯಲ್​​ ಮೀಡಿಯಾಗಳಲ್ಲಿ ಸಖತ್​​ ಫೇಮಸ್​ ಆಗಿದ್ದು, ಇದೀಗ ಆತ ಒಂದು ಈವೆಂಟ್​​ನಲ್ಲಿ ಭಾಗಿಯಾಗಲು ಪಡೆಯುವ ಸಂಭಾವಣೆ ಕುರಿತ ವಿಡಿಯೋವೊಂದು ಎಲ್ಲೆಡೆ ಭಾರೀ ವೈರಲ್​ ಆಗುತ್ತಿದೆ. ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್‌ ಹೈದರಾಬಾದ್‌ನಲ್ಲಿ ಡಾಲಿಯ ಚಹಾದ ಅಂಗಡಿಗೆ ಭೇಟಿ ನೀಡಿದ ಬಳಿಕ ಈತ ವಿಶ್ವದಾದ್ಯಂತ ಪರಿಚಯವಾದ. ಇದೀಗ ಈತ ದೇಶ ವಿದೇಶದಾದ್ಯಂತ ಈವೆಂಟ್​​​ಗಳಲ್ಲಿ ಭಾಗಿಯಾಗುತ್ತಿದ್ದು, ಒಂದು ಈವೆಂಟ್​ಗೆ ಲಕ್ಷಾಂತರ ಹಣವನ್ನು ಪಡೆಯುತ್ತಿರುವುದಾಗಿ ವರದಿಯಾಗಿದೆ.

ಇತ್ತೀಚಿಗಷ್ಟೇ ಫುಡ್​ ಬ್ಲಾಗರ್ ಒಬ್ಬ brewwithabdu ಎಂಬ ಇನ್ಸ್ಟಾಗ್ರಾಮ್​​ ಖಾತೆಯ ಸಂದರ್ಶನದಲ್ಲಿ ಭಾಗಿಯಾಗಿದ್ದು, ಈ ವೇಳೆ ಡಾಲಿ ಚಾಯ್‌ವಾಲಾ ಪಡೆಯುವ ಸಂಭಾವಣೆಯ ಕುರಿತು ಬಹಿರಂಗಪಡಿಸಿದ್ದಾರೆ. ಈ ಫುಡ್​ ಬ್ಲಾಗರ್ ಕುವೈಟ್​ನ ಒಂದು ಕಾರ್ಯಕ್ರಮಕ್ಕೆ ಡಾಲಿಯನ್ನು ಆಹ್ವಾನಿಸಿದ್ದು, ಈತ ಈವೆಂಟ್​​ನಲ್ಲಿ ಭಾಗಿಯಾಗಲು ಬರೋಬ್ಬರೀ 5ಲಕ್ಷ ರೂ. ನಗದು ಜೊತೆಗೆ ತಂಗಲು 5ಸ್ಟಾರ್​ ಹೊಟೇಲ್​​ ವ್ಯವಸ್ಥೆಗೆ ಬೇಡಿಕೆ ಇಟ್ಟಿರುವುದಾಗಿ ಹೇಳಿಕೊಂಡಿದ್ದಾರೆ. ಸದ್ಯ ವಿಡಿಯೋ ಎಲ್ಲೆಡೆ ವೈರಲ್​ ಆಗುತ್ತಿದೆ.

ಇದನ್ನೂ ಓದಿ: ಅಲ್ಲಾ..ಹೇಳಬೇಡ,’ಜೈ ಶ್ರೀ ರಾಮ್’ ಹೇಳಬೇಕು ಎಂದು 3 ಮಕ್ಕಳಿಗೆ ಚಪ್ಪಲಿಯಲ್ಲಿ ಹೊಡೆದ ಯುವಕ

ಚಹಾ ಮಾರಾಟಗಾರ ಡಾಲಿ ಇನ್ಸ್ಟಾಗ್ರಾಮ್​​​ನಲ್ಲಿ ಬರೋಬ್ಬರಿ 4.6 ಮಿಲಿಯನ್​​ ಅಂದರೆ 40ಲಕ್ಷಕ್ಕೂ ಅಧಿಕ ಫಾಲೋವರ್ಸ್​ಗಳನ್ನು ಹೊಂದಿದ್ದಾನೆ. ಇದಲ್ಲದೇ ಯೂಟ್ಯೂಬ್​​ನಲ್ಲಿ 20ಲಕ್ಷಕ್ಕೂ ಅಧಿಕ ಸಬ್ಸ್ಕೈಬರ್ ಇದ್ದಾರೆ. ಸೋಶಿಯಲ್​ ಮೀಡಿಯಾಗಳಲ್ಲಿ ಪ್ರತೀ ತಿಂಗಳು ಲಕ್ಷ ಲಕ್ಷ ಸಂಪಾದಿಸುವುದರ ಜೊತೆಗೆ ಈವೆಂಟ್​ಗಳಿಗೂ ಬರೋಬ್ಬರಿ 5ಲಕ್ಷ ಬೇಡಿಕೆ ಇಟ್ಟಿರುವುದು ಬಹಿರಂಗವಾಗಿದೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 12:38 pm, Sat, 7 December 24

ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​​​: ಪೊಲೀಸ್ ಇಲಾಖೆಯಿಂದ ತರಬೇತಿ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​​​: ಪೊಲೀಸ್ ಇಲಾಖೆಯಿಂದ ತರಬೇತಿ
ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ನಡುವೆ ಜಗಳ: ಗಿಲ್ಲಿ ರಿಯಾಕ್ಷನ್ ನೋಡಿ..
ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ನಡುವೆ ಜಗಳ: ಗಿಲ್ಲಿ ರಿಯಾಕ್ಷನ್ ನೋಡಿ..
ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ
ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ
ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿ ಫೇಸ್​ಬುಕ್ ಪೋಸ್ಟ್: ಇಬ್ಬರ ಬಂಧನ
ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿ ಫೇಸ್​ಬುಕ್ ಪೋಸ್ಟ್: ಇಬ್ಬರ ಬಂಧನ