ಬೆಂಗಳೂರು, ಮಾ. 26: ಅತಿ ವೇಗವಾಗಿ (Speed) ವಾಹನ (vehicle) ಚಲಾಯಿಸುವುದರಿಂದ ಅಪಘಾತಗಳು ಸಂಭವಿಸುವ ಸಾಧ್ಯತೆ ಇರುತ್ತದೆ. ಹೀಗಿದ್ದರೂ ಕೂಡಾ ಕೆಲವರು ಸಂಚಾರ ನಿಯಮಗಳನ್ನೆಲ್ಲಾ(traffic rules) ಉಲ್ಲಂಘಿಸಿ ವೇಗವಾಗಿ ಗಾಡಿ ಓಡಿಸ್ತಾರೆ. ಅದರಲ್ಲೂ ಡೆಲಿವರಿ ಏಜೆಂಟ್‌ಗಳು (delivery agent) ಗ್ರಾಹಕರಿಗೆ ಅವರ ಪಾರ್ಸೆಲ್ (parcel) ಸಮಯಕ್ಕೆ ಸರಿಯಾಗಿ ತಲುಪಿಸಬೇಕು ಎಂಬ ಉದ್ದೇಶದಿಂದ ಅತಿವೇಗವಾಗಿ ಗಾಡಿ ಓಡಿಸಿಕೊಂಡು ಹೋಗ್ತಾರೆ. ಅದೇ ರೀತಿ ಇಲ್ಲೊಬ್ಬ ಡೆಲಿವರಿ ಸ್ವಿಗ್ಗಿ ಡೆಲಿವರಿ ಬಾಯ್ (delivery boy) ಫುಡ್ ಡೆಲಿವರಿ ಮಾಡೋ ಅರ್ಜೆಂಟ್‌ನಲ್ಲಿ ವೇಗವಾಗಿ ಗಾಡಿ ಓಡಿಸಿ ವೃದ್ಧ ದಂಪತಿಗೆ ಗುದ್ದಿದ್ದಾನೆ. ಪರಿಣಾಮ ಮಹಿಳೆಯ ಕಾಲಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಟ್ಯಾಕ್ಸಿಗಳಂತೆ ಇವರ ಮಿತಿಗಳನ್ನು ಕೂಡಾ ನಿಯಂತ್ರಿಸಿ ಎಂದು ವ್ಯಕ್ತಿಯೊಬ್ಬರು ಸೋಷಿಯಲ್ ಮೀಡಿಯಾದಲ್ಲಿ ಕಿಡಿ ಕಾರಿದ್ದಾರೆ.
ಈ ಘಟನೆ ನಮ್ಮ ಬೆಂಗಳೂರಿನಲ್ಲಿ ನಡೆದಿದ್ದು, ಸ್ವಿಗ್ಗಿ ಡೆಲಿವರಿ ಬಾಯ್ ವೇಗದ ಚಾಲನೆಗೆ ವೃದ್ಧ ದಂಪತಿ ನೋವು ಅನುಭವಿಸಬೇಕಾದ ಪರಿಸ್ಥಿತಿ ಬಂದಿದೆ. ಹೌದು ರಸ್ತೆಯಲ್ಲಿ ಹೋಗ್ತಿದ್ದ ವೃದ್ಧ ದಂಪತಿಗೆ ಡೆಲಿವರಿ ಬಾಯ್ ಬೈಕ್ ಡಿಕ್ಕಿ ಹೊಡೆದಿದ್ದು, ಪರಿಣಾಮ ಮಹಿಳೆಗೆ ಸಣ್ಣಪುಟ್ಟ ಗಾಯಗಳಾಗಿವೆ.
Heard a loud bang near my home this afternoon. An elderly couple had been hit by a #Swiggy delivery rider. The woman, in her 60s, was in severe pain — I rushed her to a nearby hospital. Thankfully, no fractures.
Delivery bikes are constantly zipping through our roads, often in a… pic.twitter.com/Vi4TkPXqr8
— Sivasubramaniam Jayaraman (@JsivaUrbantranz) March 24, 2025
ಈ ಕುರಿತ ಪೋಸ್ಟ್ ಒಂದನ್ನು ಶಿವಸುಬ್ರಮಣ್ಯಂ ಜಯರಾಮನ್ (Sivasubhramaniam Jayaraman) ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, “ಇಂದು ಮಧ್ಯಾಹ್ನ ನನ್ನ ಮನೆಯ ಬಳಿ ದೊಡ್ಡ ಸದ್ದು ಕೇಳಿಸಿತು. ಅದೇನೆಂದರೆ ಸ್ವಿಗ್ಗಿ ಡೆಲಿವರಿ ಬಾಯ್ ವಾಹನ ವೃದ್ಧ ದಂಪತಿಗೆ ಡಿಕ್ಕಿ ಹೊಡೆದಿದೆ. 60 ರ ಆಸುಪಾಸಿನ ಆ ಮಹಿಳೆ ನೋವಿನಿಂದ ಒದ್ದಾಡುತ್ತಿದ್ದರು, ನಾನು ತಕ್ಷಣ ಅವರನ್ನು ಆಸ್ಪತ್ರೆಗೆ ಸೇರಿಸಿದೆ ಅದೃಷ್ಟವಶಾತ್ ಅವರಿಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ. ಡೆಲಿವರಿ ಏಜೆಂಟ್‌ಗಳು ಬೈಕ್‌ಗಳನ್ನು ಅತಿವೃಗವಾಗಿ ಚಲಾಯಿಸುತ್ತಾರೆ, ಇದೊಂದು ಗಂಭೀರ ಸುರಕ್ಷತಾ ಸಮಸ್ಯೆಯಾಗಿದ್ದು, ಸರ್ಕಾರವು ಟ್ಯಾಕ್ಸಿಗಳಂತೆ ಡೆಲಿವರಿ ವಾಹನಗಳ ವೇಗವನ್ನು ಗಂಟೆಗೆ 50 ಕಿಮೀ ಗೆ ಮಿತಿಗೊಳಿಸಬೇಕು” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
ಅವರು ಹಂಚಿಕೊಂಡಿರುವ ಫೋಟೋದಲ್ಲಿ ವೃದ್ಧ ಮಹಿಳೆಯ ಕಾಲಿಗೆ ಪ್ಲಾಸ್ಟರ್ ಸುತ್ತಿರುವ ದೃಶ್ಯವನ್ನು ಕಾಣಬಹುದು. ಇದಕ್ಕೆ ಪ್ರತಿಕ್ರಿಯಿಸಿದ ಸ್ವಿಗ್ಗಿ ತಮ್ಮ ಡೆಲಿವರಿ ಏಜೆಂಟ್‌ನಿಂದ ವೃದ್ಧ ದಂಪತಿಗಾದ ತೊಂದರೆಗೆ ನಾವು ಕ್ಷಮೆ ಕೋರುತ್ತೇವೆ ಎಂದು ಹೇಳಿದೆ.
ಇದನ್ನೂ ಓದಿ: ಜಸ್ಟ್ ಪಾಸಾದ್ರೆ ಸಾಕು, ಇದಕ್ಕಿಂತ ಕಮ್ಮಿ ಅಂಕ ಬೇಡ; ದೈವಕ್ಕೆ ಚೀಟಿ ಮುಖಾಂತರ ಮನವಿಯಿಟ್ಟ ವಿದ್ಯಾರ್ಥಿ
ಮಾರ್ಚ್ 24 ರಂದು ಶೇರ್ ಮಾಡಲಾದ ಈ ಪೋಸ್ಟ್ 30 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಹೌದು ಡೆಲಿವರಿ ಏಜೆಂಟ್‌ಗಳು ಹೆಚ್ಚಾಗಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿ ವಾಹನ ಓಡಿಸ್ತಾರೆʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಈ ವೇಗದ ಚಾಲನೆ ಬಗ್ಗೆ ವಿತರಣಾ ಅಪ್ಲಿಕೇಷನ್ ಬ್ರ್ಯಾಂಡ್‌ಗಳು ಕಾಳಜಿ ವಹಿಸುದೇ ಇಲ್ಲʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:33 pm, Wed, 26 March 25