Viral: ಕಾರ್ಪೊರೇಟ್ ಕೆಲಸದ ಸ್ಥಳಗಳಲ್ಲಿನ ಐದು ವಿಷಕಾರಿ ಅಂಶಗಳನ್ನು ಟೀಕಿಸಿದ ಸ್ಟಾರ್ಟ್ಅಪ್ ಸಂಸ್ಥಾಪಕಿ

ಇಂದಿನ ದಿನಗಳಲ್ಲಿ ಸೌಲಭ್ಯ ಹೆಚ್ಚಿದಷ್ಟೂ ಕಾರ್ಪೊರೇಟ್ ಕೆಲಸದಲ್ಲಿ ಒತ್ತಡವೂ ಹೆಚ್ಚುತ್ತಿದೆ. ಇಷ್ಟೇ ಹೊತ್ತಿನಲ್ಲಿ ಇಂತಿಷ್ಟು ಕೆಲಸ ಮುಗಿಸಬೇಕೆನ್ನುವ ನಿಯಮವು ಉದ್ಯೋಗಿಗಳನ್ನು ನರಳುವಂತೆ ಮಾಡಿದೆ. ಹೌದು, ಭಾರತೀಯ ಕೆಲಸದ ಸ್ಥಳಗಳಲ್ಲಿ ಸಾಮಾನ್ಯೀಕರಿಸಲಾದ ಐದು ವಿಷಕಾರಿ ಅಭ್ಯಾಸಗಳ ಬಗ್ಗೆ ಬೆಂಗಳೂರಿನ ಸ್ಟಾರ್ಟ್ಅಪ್ ಸಂಸ್ಥಾಪಕಿಯೊಬ್ಬರು ಮಾತನಾಡಿದ್ದಾರೆ. ಈ ಪೋಸ್ಟ್ ಆನ್ಲೈನ್ ನಲ್ಲಿ ಚರ್ಚೆಯನ್ನು ಹುಟ್ಟುಹಾಕಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Viral: ಕಾರ್ಪೊರೇಟ್ ಕೆಲಸದ ಸ್ಥಳಗಳಲ್ಲಿನ ಐದು ವಿಷಕಾರಿ ಅಂಶಗಳನ್ನು ಟೀಕಿಸಿದ ಸ್ಟಾರ್ಟ್ಅಪ್ ಸಂಸ್ಥಾಪಕಿ
ಸಾಂದರ್ಭಿಕ ಚಿತ್ರ
Image Credit source: Pinterest

Updated on: Jun 11, 2026 | 10:59 AM

ಕಾರ್ಪೊರೇಟ್ (Corporate) ಜಗತ್ತೇ ಹಾಗೆ, ಕೈ ತುಂಬಾ ಸಂಬಳವಿದ್ರೂ ಒತ್ತಡ ಹೆಚ್ಚೇ ಇರುತ್ತದೆ. ಹೀಗಾಗಿ ಈ ಕೆಲಸದ ಸ್ಥಳಗಳಲ್ಲಿ ಕೆಲ ಉದ್ಯೋಗಿಗಳು ಅನುಭವಿಸುವ ಒತ್ತಡ ಹೇಳತೀರದು. ಜವಾಬ್ದಾರಿಗಳಿಂದ ತಪ್ಪಿಸಿಕೊಳ್ಳಲಾಗದೇ ಅನಿವಾರ್ಯಕ್ಕೆ ಕೆಲಸ ಮಾಡುವವರು ಇದ್ದಾರೆ. ಇದೀಗ ಬೆಂಗಳೂರು (Bengaluru) ಮೂಲದ ಸ್ಟಾರ್ಟ್ಅಪ್ ಸಂಸ್ಥಾಪಕಿಯೊಬ್ಬರು ಭಾರತೀಯ ಕೆಲಸದ ಸ್ಥಳಗಳಲ್ಲಿ ಸರ್ವೇ ಸಾಮಾನ್ಯವಾಗಿರುವ ವಿಷಕಾರಿ ವಿಷಯಗಳನ್ನು ಟೀಕಿಸಿದ್ದಾರೆ. ಲಿಂಕ್ಡ್ ಇನ್ ಪೋಸ್ಟ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಬೆಂಗಳೂರು ಮೂಲದ ಸ್ಟಾರ್ಟ್ಅಪ್ ಸಂಸ್ಥಾಪಕಿ ಅಲೂನಾ (Aloona) ಲಿಂಕ್ಡ್ ಇನ್ ಪೋಸ್ಟ್ ನಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ನಲ್ಲಿ ಭಾರತೀಯ ಕೆಲಸದ ಸ್ಥಳಗಳಲ್ಲಿ ಸಾಮಾನ್ಯೀಕರಿಸಲ್ಪಟ್ಟ ವಿಷಕಾರಿ ವಿಷಯಗಳಿವು, ಆದರೆ ಕೆಲಸದ ಸ್ಥಳಗಳಲ್ಲಿ ಈ ರೀತಿಯಾಗಬಾರದು ಎಂದು ಹೇಳಿದ್ದಾರೆ.

ವೈರಲ್ ಪೋಸ್ಟ್ ಇಲ್ಲಿದೆ

ಮಧ್ಯರಾತ್ರಿಯಲ್ಲಿ ಉದ್ಯೋಗಿಗಳಿಗೆ ಕರೆ ಮಾಡಲು ನಿರ್ಧರಿಸುವ ವ್ಯಕ್ತಿಯೂ ವೇಳಾಪಟ್ಟಿಯನ್ನು ಅತ್ಯುತ್ತಮವಾಗಿಸಬೇಕಾಗಿದೆ. ವಾರಾಂತ್ಯದ ಸಭೆಗಳು, ಉದ್ಯೋಗಿಗಳ ಮೇಲೆ ಕಿರುಚುವುದು, ಇತರರ ಮುಂದೆ ನಿಂದಿಸುವುದು, ಸಾರ್ವಜನಿಕವಾಗಿ ಅವಮಾನನಿಸುವುದು ಸರಿಯಲ್ಲ ಎಂದಿದ್ದಾರೆ.

ಉದ್ಯೋಗಿಗಳು ಅನಾರೋಗ್ಯದಿಂದ ಬಳಲುತ್ತಿರುವಾಗ, ಆಸ್ಪತ್ರೆಯಲ್ಲಿರುವಾಗ ಕೆಲಸದ ಸ್ಥಳಗಳಿಂದ ಕರೆಗಳು ಬರುವುದು ಸರಿಯಲ್ಲ. ಶುಕ್ರವಾರ-ಸಂಜೆ ಹಠಾತ್ ತುರ್ತು ಪರಿಸ್ಥಿತಿಗಳು ಸೇರಿದಂತೆ ಐದು ಪ್ರಚಲಿತ ವಿಷಕಾರಿ ಅಭ್ಯಾಸಗಳನ್ನು ಕಟುವಾಗಿ ಟೀಕಿಸಿದ್ದಾರೆ. ಇದರಲ್ಲಿ ಯಾವುದು ಸರಿಯಿಲ್ಲ. ಸಮಸ್ಯೆ ಅವರುಗಳದ್ದೇ, ನೀವಲ್ಲ ಎಂಬುದನ್ನು ನೆನಪಿಡಿ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಒಂದೇ ಕಂಪನಿಯಲ್ಲಿ 11 ವರ್ಷ ಕೆಲಸ ಮಾಡಿದ್ರೂ ಜಾಬ್‌ನಿಂದ ತೆಗೆದು ಹಾಕಿದ ಕಂಪನಿ

ಈ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ವಿಷಕಾರಿ ವಿಷಯಗಳು ಸರ್ವೇ ಸಾಮಾನ್ಯವಾಗುತ್ತಿದೆ. ಇದು ಉದ್ಯೋಗಿಗಳನ್ನು ಮಾನಸಿಕವಾಗಿ ಹಿಂಸಿಸುತಿದೆ ಎಂದಿದ್ದಾರೆ. ಇನ್ನೊಬ್ಬರು, ಇದು ಅನೇಕ ಭಾರತೀಯ ಸಂಸ್ಥೆಗಳಲ್ಲಿ ಕಾಣಸಿಗುವ ವಿಷಯ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಉದ್ಯೋಗಿಗಳು ರಾಜೀನಾಮೆ ನೀಡಲು ಈ ಅಂಶಗಳೇ ಕಾರಣ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 10:59 am, Thu, 11 June 26

Follow Us