ಈ ಸಮಾಜದಲ್ಲಿ ಒಂದಲ್ಲಾ ಒಂದು ಬೆಚ್ಚಿ ಬೀಳಿಸುವಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಇಲ್ಲೊಂದು ಅಂತಹದ್ದೇ ಘಟನೆ ನಡೆದಿದ್ದು, ಪಾನಮತ್ತ ಆಟೋ ಚಾಲಕನ ವರ್ತನೆಯಿಂದ ಭಯಬಿದ್ದ ಮಹಿಳೆಯೊಬ್ಬರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಚಲಿಸುತ್ತಿದ್ದ ಆಟೋದಿಂದಲೇ ಹೊರ ಜಿಗಿದಿದ್ದಾರೆ. ಹೌದು ಆಟೋದಲ್ಲಿದ್ದ ಮಹಿಳೆ ಗಾಡಿ ನಿಲ್ಲಿಸಿ ಎಂದು ಎಷ್ಟೇ ಕೇಳಿದರೂ ಆತ ರಾಂಗ್ ಲೊಕೇಷನ್ ಕಡೆ ರಿಕ್ಷಾ ಓಡಿಸಿಕೊಂಡು ಹೋಗಿದ್ದು, ಇದರಿಂದ ಭಯಗೊಂಡ ಮಹಿಳೆ ಪ್ರಾಣ ರಕ್ಷಣೆಗಾಗಿ ಚಲಿಸುತ್ತಿದ್ದ ಆಟೋದಿಂದ ಹೊರ ಹಾರಿದ್ದಾರೆ. ಈ ಕುರಿತ ಸುದ್ದಿಯೊಂದು ಇದೀಗ ಭಾರೀ ವೈರಲ್ ಆಗುತ್ತಿದೆ.
ಈ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಪಾನಮತ್ತ ಚಾಲಕನ ವರ್ತನೆಯಿಂದ ಭಯಗೊಂಡು ಮಹಿಳೆಯೊಬ್ಬರು ಚಲಿಸುತ್ತಿದ್ದ ಆಟೋದಿಂದ ಹೊರ ಜಿಗಿದಿದ್ದಾರೆ. ಹೌದು ಆಕೆ ಗಾಡಿ ನಿಲ್ಲಿಸಿ ಎಂದು ಕೇಳಿದರೂ ಚಾಲಕ ರಾಂಗ್ ಲೊಕೇಷನ್ ಕಡೆಗೆ ಹೋಗಿದ್ದಾನೆ. ಆ ಮಹಿಳೆ ಹೊರಮಾವಿನಿಂದ ಥಣಿಸಂದ್ರಕ್ಕೆ ಹೋಗಲು ನಮ್ಮ ಯಾತ್ರಿ ಆಪ್ಲಿಕೇಷನ್‌ನಲ್ಲಿ ಆಟೋ ಬುಕ್ ಮಾಡಿದ್ದರು. ಆದ್ರೆ ಆಟೋ ಚಾಲಕ ಥಣಿಸಂದ್ರದ ಬದಲು ಹೆಬ್ಬಾಳದ ಕಡೆಗೆ ಗಾಡಿ ಓಡಿಸಿಕೊಂಡು ಹೋಗಿದ್ದಾನೆ. ಆಟೋ ನಿಲ್ಲಿಸಿ ಎಂದು ಎಷ್ಟೇ ಕೇಳಿದರೂ ಆತ ಸೀದಾ ಹೋಗಿದ್ದಾನೆ. ಚಾಲಕನ ಈ ವರ್ತನೆಯಿಂದ ಭಯಗೊಂಡು ಮಹಿಳೆ ಆಟೋದಿಂದ ಜಿಗಿದಿದ್ದಾರೆ.
ಇದನ್ನೂ ಓದಿ: ತಪಾಸಣೆಯ ನೆಪದಲ್ಲಿ ಮಹಿಳಾ ರೋಗಿಗಳ ಮೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ ಡಾಕ್ಟರ್; ವಿಡಿಯೋ ವೈರಲ್
#Nammayatri
Namma Yatri Auto Issue!
My wife booked a auto from Horamavu to Thanisandra, Bangalore, but the driver was drunk and took her towards the wrong location near Hebbal. Despite repeatedly asking him to stop, he didn’t listen, forcing her to jump out of the moving auto. pic.twitter.com/qAulNu3yc9— Azhar Khan (@AzharKh35261609) January 2, 2025
ಮಹಿಳೆಯ ಪತಿ ಅಜರ್ ಖಾನ್ (AzharKh35261609) ಈ ಬಗೆಗಿನ ಪೋಸ್ಟ್ ಒಂದನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, “ನನ್ನ ಪತ್ನಿ ಹೊರಮಾವಿನಿಂದ ಥಣಿಸಂದ್ರಕ್ಕೆ ಆಟೋವನ್ನು ಬುಕ್ ಮಾಡಿದ್ದಳು. ಆದರೆ ಆಟೋ ಚಾಲಕ ಕುಡಿದು ಹೆಬ್ಬಾಳದ ಕಡೆ ಆಕೆಯನ್ನು ಕರೆದೊಯ್ದಿದ್ದಾನೆ. ಆಟೋ ನಿಲ್ಲಿಸುವಂತೆ ಕೇಳಿಕೊಂಡರೂ ಆತ ಸೀದಾ ಹೋಗಿದ್ದಾನೆ, ಇದರಿಂದ ನನ್ನ ಪತ್ನಿ ಚಲಿಸುತ್ತಿರುವ ಆಟೋದಿಂದ ಜಿಗಿದಿದ್ದಾಳೆ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ನಮ್ಮ ಯಾತ್ರಿ ʼನಿಮ್ಮ ಪತ್ನಿಗೆ ಉಂಟಾದ ಅನಾನುಕೂಲತೆಗಾಗಿ ನಾವು ಕ್ಷಮೆಯನ್ನು ಕೇಳುತ್ತೇವೆ. ಆ ಚಾಲಕನ ಖಾತೆಯನ್ನು ಅಮಾನತುಗೊಳಿಸುವ ಮೂಲಕ ನಾವು ತಕ್ಷಣದ ಕ್ರಮವನ್ನು ಕೈಗೊಂಡಿದ್ದೇವೆʼ ಎಂದು ಹೇಳಿದೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ