
ಬೆಂಗಳೂರು, ಜುಲೈ 03: ಓದು ಮುಗಿಯುತ್ತಿದ್ದಂತೆ ಹೆಚ್ಚಿನವರು ಬೆಂಗಳೂರು (Bengaluru), ಚೆನ್ನೈ, ಮುಂಬೈ ಹೀಗೆ ದೊಡ್ಡ ದೊಡ್ಡ ನಗರಗಳಿಗೆ ತೆರಳುತ್ತಾರೆ. ಆದರೆ ಇದೀಗ ಯುವತಿಯೊಬ್ಬಳ ನಿರ್ಧಾರ ಎಲ್ಲರ ಗಮನ ಸೆಳೆದಿದೆ. ಐಐಟಿ ಪದವೀಧರೆ ಸ್ನೇಹಾ ಪ್ರಿಯಾ ಗುರುಗ್ರಾಮದ (Gurgaon) ಪ್ರತಿಷ್ಠಿತ ಕಂಪನಿಯೊಂದು ನೀಡಿದ್ದ ವಾರ್ಷಿಕ 32 ಲಕ್ಷ ರೂ ಸಂಬಳದ ಜಾಬ್ ಆಫರ್ ತ್ಯಜಿಸಿ ಬೆಂಗಳೂರಿನಲ್ಲೇ ಉಳಿಯುವ ನಿರ್ಧಾರ ಮಾಡಿದ್ದಾಳೆ. ತನ್ನ ಈ ನಿರ್ಧಾರದ ಹಿಂದಿನ ಕಾರಣ ಬಿಚ್ಚಿಟ್ಟಿದ್ದು ಇದು ನೆಟ್ಟಿಗರನ್ನು ಹುಬ್ಬೇರಿಸುವಂತೆ ಮಾಡಿದೆ.
ಸ್ನೇಹ ಪ್ರಿಯಾ (snehapriya9955) ಹೆಸರಿನ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಬೆಂಗಳೂರಿನ ಆಕಾಶದಲ್ಲಿ ಮೂಡಿದ ಸುಂದರ ಕಾಮನಬಿಲ್ಲಿನ ವಿಡಿಯೋ ಜತೆಗೆ ತನ್ನ ನಿರ್ಧಾರದ ಬಗ್ಗೆ ಹೇಳಿದ್ದಾಳೆ. ಈ ದಿನದಲ್ಲಿ ನಾನು ಗುರುಗ್ರಾಮದಲ್ಲಿರಬೇಕಿತ್ತು. ಅಲ್ಲೇ ನನ್ನ ವೃತ್ತಿಜೀವನದ ಹೊಸ ಅಧ್ಯಾಯ ಆರಂಭಿಸಬೇಕಿತ್ತು. ಈ ಹಿನ್ನಲೆಯಲ್ಲಿ ಬೆಂಗಳೂರನ್ನು ತೊರೆಯ ಬೇಕಿತ್ತು. ಆದರೆ ನಾನು ಸಿಲಿಕಾನ್ ಸಿಟಿಯಲ್ಲೇ ಉಳಿಯುವ ನಿರ್ಧಾರ ಮಾಡಿದೆ. ನನ್ನ ಈ ನಿರ್ಧಾರದ ಸಂದರ್ಭದಲ್ಲಿದ್ದ ಗೊಂದಲ ಹಾಗೂ ಅನುಮಾನಗಳಿಗೆ ಬೆಂಗಳೂರು ನಗರವು ಆಕಾಶದಲ್ಲಿ ಜಂಟಿ ಕಾಮನಬಿಲ್ಲುಗಳನ್ನು ಮೂಡಿಸುವ ಮೂಲಕ ವಿದಾಯ ಹೇಳಿತು ಎಂದು ಬರೆದುಕೊಂಡಿದ್ದಾಳೆ. ಅನೇಕ ಬಾರಿ ನಮ್ಮ ಅತ್ಯುತ್ತಮ ವೃತ್ತಿಪರ ನಿರ್ಧಾರ ಎಂದರೆ ಅತಿ ಹೆಚ್ಚು ಸಂಬಳದ ಆಫರ್ ಒಪ್ಪಿಕೊಳ್ಳುವ ಬದಲು ನಮ್ಮ ಮನಸ್ಸಿನ ನೆಮ್ಮದಿಗೆ ಬೆಲೆ ಕೊಡೋದು ಎಂದು ಕ್ಲಿಪ್ ಜತೆಗೆ ಉಲ್ಲೇಖಿಸಿದ್ದಾಳೆ.
ಇದನ್ನೂ ಓದಿ: ಸ್ಯಾಲರಿ ಹೈಕ್ ಕಡಿಮೆಯಾದದ್ದಕ್ಕೆ ಜಾಬ್ ರಿಸೈನ್ ಮಾಡಿದ ಬೆಂಗಳೂರಿನ ಯುವಕ
ಈ ವಿಡಿಯೋ ನಾಲ್ಕು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ನಾನು ಕಾಮನ ಬಿಲ್ಲನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದಿದ್ದಾರೆ. ಇನ್ನೊಬ್ಬರು, ಬೆಂಗಳೂರನ್ನು ತೊರೆದು ಹೋಗುವುದು ಅರಗಿಸಿಕೊಳ್ಳಲಾಗದ ಚಾಲೆಂಜ್ ಎಂದು ಹೇಳಿದ್ದಾರೆ. ಮತ್ತೊಬ್ಬರು, ಒಬ್ಬ ವ್ಯಕ್ತಿ ಬೆಂಗಳೂರರನ್ನು ತೊರೆದು ಹೋಗಲು ಬಯಸಿದ್ರು, ಬೆಂಗಳೂರು ಮಾತ್ರ ಆತನನ್ನು ಬಿಡಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ