Video: ಸಲಿಂಗ ಪ್ರೇಮ ಪುರಾಣ, ಪತಿಯನ್ನು ತೊರೆದು ಸೊಸೆಯನ್ನೇ ಪ್ರೀತಿಸಿ ಮದುವೆಯಾದ ಮಹಿಳೆ

| Updated By: ಅಕ್ಷಯ್​ ಪಲ್ಲಮಜಲು​​

Updated on: Aug 14, 2024 | 5:49 PM

ಇತ್ತೀಚಿಗಂತೂ ಸಲಿಂಗ ಪ್ರೇಮ, ಸಲಿಂಗ ವಿವಾಹದ ಸುದ್ದಿಗಳು ಹೆಚ್ಚಾಗಿ ಕೇಳಿ ಬರುತ್ತಿರುತ್ತವೆ. ಭಾರತದಲ್ಲಿಯೂ ಇಂತಹ ಘಟನೆಗಳು ನಡೆಯುತ್ತಲೇ ಇವೆ. ಇದೀಗ ಅಂತಹದ್ದೇ ಸಲಿಂಗ ಪ್ರೇಮ ಪ್ರಸಂಗದ ಸುದ್ದಿಯೊಂದು ವೈರಲ್‌ ಆಗಿದ್ದು, ಮಹಿಳೆಯೊಬ್ಬರು ಗಂಡನನ್ನು ತೊರೆದು ತನ್ನ ಸೋದರ ಸೊಸೆಯನ್ನೇ ಪ್ರೀತಿಸಿ ವಿವಾಹವಾಗಿದ್ದಾರೆ. ಅತ್ತೆ-ಸೊಸೆಯ ಈ ವಿಚಿತ್ರ ಲವ್‌ಸ್ಟೋರಿ ಕೇಳಿ ನೆಟ್ಟಿಗರು ಫುಲ್‌ ಶಾಕ್‌ ಆಗಿದ್ದಾರೆ.

Video: ಸಲಿಂಗ ಪ್ರೇಮ ಪುರಾಣ, ಪತಿಯನ್ನು ತೊರೆದು ಸೊಸೆಯನ್ನೇ ಪ್ರೀತಿಸಿ ಮದುವೆಯಾದ ಮಹಿಳೆ
ವೈರಲ್​ ವಿಡಿಯೋ
Follow us on

ಇತ್ತೀಚಿನ ದಿನಗಳಲ್ಲಿ ಸಲಿಂಗ ಪ್ರೇಮ ಪ್ರಕರಣಗಳು ಹೆಚ್ಚಾಗುತ್ತಿವೆ. ಗಂಡು-ಗಂಡು, ಹೆಣ್ಣು-ಹೆಣ್ಣು ಮದುವೆಯಾಗುವ ಘಟನೆಗಳು ನಡೆಯುತ್ತಿವೆ. ವಿದೇಶಗಳಲ್ಲಿ ಸಲಿಂಗ ಪ್ರೇಮ, ಸಲಿಂಗ ವಿವಾಹ ಇವೆಲ್ಲವೂ ಕಾಮನ್ ಆಗಿದ್ರೂ ಕೂಡಾ ಭಾರತದಲ್ಲಿ ಇಂತವೆಲ್ಲಾ ಕಾಣ ಸಿಗುವುದು ತೀರಾ ಅಪರೂಪ. ಆದ್ರೆ ಇಲ್ಲೊಂದು ಸಲಿಂಗ ಪ್ರೇಮ ಪ್ರಕರಣದ ಸುದ್ದಿಯೊಂದು ವೈರಲ್‌ ಆಗಿದ್ದು, ಮಹಿಳೆಯೊಬ್ಬರು ಗಂಡನನ್ನು ತೊರೆದು ತನ್ನ ಸೋದರ ಸೊಸೆಯನ್ನೇ ಪ್ರೀತಿಸಿ ವಿವಾಹವಾಗಿದ್ದಾರೆ. ಅತ್ತೆ-ಸೊಸೆಯ ಈ ವಿಚಿತ್ರ ಲವ್‌ಸ್ಟೋರಿ ಕೇಳಿ ನೆಟ್ಟಿಗರು ಫುಲ್‌ ಶಾಕ್‌ ಆಗಿದ್ದಾರೆ.

ಈ ಶಾಕಿಂಗ್‌ ಘಟನೆ ಬಿಹಾರದ ಗೋಪಾಲ್ಗಂಜ್‌ ಜಿಲ್ಲೆಯಲ್ಲಿ ನಡೆದಿದ್ದು, ಇಲ್ಲಿನ ಮಹಿಳೆಯೊಬ್ಬರು ತನ್ನ ಗಂಡನನ್ನು ತೊರೆದು ಸೋದರ ಸೊಸೆಯೊಂದಿಗೆ ಸಲಿಂಗ ವಿವಾಹವಾಗಿದ್ದಾರೆ. ಕಳೆದ ಮೂರು ವರ್ಷಗಳಿಂದ ಸಲಿಂಗ ಪ್ರೀತಿಯಲ್ಲಿದ್ದ ಸುಮನ್‌ ತನ್ನ ಪತಿಯನ್ನು ತೊರೆದು ಸೊಸೆ ಶೋಭಾಳೊಂದಿಗೆ ಓಡಿ ಹೋಗಿ ಸಪ್ತಪದಿ ತುಳಿದಿದ್ದಾರೆ. ಯಾವುದೇ ಕಾರಣಕ್ಕೂ ಸೊಸೆಯನ್ನು ಬಿಟ್ಟಿರಲಾಗದೆ ಅತ್ತೆ ಸುಮನ್‌ ಸೊಸೆ ಶೋಭಾಳನ್ನು ಕುಚುಯಕೋಟ್‌ ಪೊಲೀಸ್‌ ಠಾಣೆ ವ್ಯಾಪ್ತಿಯ ಸಸಾಮುಸಾ ರೈಲು ನಿಲ್ದಾಣದ ಬಳಿ ಇರುವ ದುರ್ಗಾ ದೇವಸ್ಥಾನಕ್ಕೆ ಕರೆದೊಯ್ದು, ವಿವಾಹವಾಗಿದ್ದಾರೆ.

ಶೋಭಾ ನನ್ನ ಜೀವ. ಆಕೆಯನ್ನು ಕಳೆದುಕೊಳ್ಳುವುದನ್ನು ನಾನು ಊಹಿಸಲೂ ಸಾಧ್ಯವಿಲ್ಲ, ನಾವಿಬ್ಬರೂ ಅಗಾಧವಾಗಿ ಪ್ರೀತಿಸುತ್ತಿದ್ದು, ಒಬ್ಬರನ್ನೊಬ್ಬರು ಬಿಟ್ಟಿರಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಸಮಾಜ ಏನು ಹೇಳುತ್ತೆ ಎಂಬ ಬಗ್ಗೆ ತಲೆ ಕೆಡಿಸಿಕೊಳ್ಳದೆ ನಾವಿಬ್ಬರು ಜೊತೆಯಾಗಿ ಬಾಳಬೇಕು ಎಂಬ ನಿರ್ಧಾರವನ್ನು ತೆಗೆದುಕೊಂಡು, ದೇವಾಲಯದಲ್ಲಿ ಮದುವೆಯಾದೆವು. ಇನ್ನು ಮುಂದೆ ನಾವಿಬ್ಬರು ಒಟ್ಟಿಗೆ ಇರುತ್ತೇವೆ. ಈಗ ಯಾವ ಶಕ್ತಿಯಿಂದಲೂ ನಮ್ಮನ್ನು ದೂರ ಮಾಡಲು ಸಾಧ್ಯವಿಲ್ಲ ಎಂದು ಅತ್ತೆ ಸುಮನ್‌ ಹೇಳಿಕೊಂಡಿದ್ದಾರೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಈ ಕುರಿತ ಪೋಸ್ಟ್‌ ಒಂದನ್ನು ಅಫ್ರಾಜ್ (AfrozJournalist)‌ ಎಂಬವರು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದು, “ಸೊಸೆಯನ್ನು ಪ್ರೀತಿಸಿ ಮದುವೆಯಾದ ಅತ್ತೆ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವೈರಲ್‌ ವಿಡಿಯೋದಲ್ಲಿ ಅತ್ತೆ ಪ್ಯಾಂಟ್‌ ಶರ್ಟ್‌ ಧರಿಸಿರುವುದನ್ನು ಕಾಣಬಹುದು. ಸೊಸೆ ಕೆಂಪು ಸೀರೆ ತೊಟ್ಟು ಮದುಮಗಳಂತೆ ಅಲಂಕೃತವಾಗಿರುವುದನ್ನು ಕಾಣಬಹುದು. ದುರ್ಗಾ ದೇವಾಲಯದಲ್ಲಿ ಅತ್ತೆ ಸೊಸೆಯ ಹಣೆಗೆ ಸಿಂಧೂರ ಹಚ್ಚಿ, ಬಳಿಕ ಪರಸ್ಪರ ಹೂವಿನ ಹಾರವನ್ನು ಹಾಕಿ ದೇವಾಲಯಕ್ಕೆ ಏಳು ಸುತ್ತು ಪ್ರದಕ್ಷಿಣೆ ಹಾಕಿ ಶಾಸ್ತ್ರೋಕ್ತವಾಗಿ ವಿವಾಹವಾಗಿದ್ದಾರೆ.

ಇದನ್ನೂ ಓದಿ: ರೈಲಿನಲ್ಲಿ ನಮಾಜ್‌ ಮಾಡಲು ಮುಂದಾದ ಮುಸ್ಲಿಂ ಪ್ರಯಾಣಿಕರಿಗೆ ಸರಿಯಾಗಿ ಕ್ಲಾಸ್‌ ತೆಗೆದುಕೊಂಡ ಟಿಟಿಇ

ಆಗಸ್ಟ್‌ 12 ರಂದು ಹಂಚಿಕೊಳ್ಳಲಾದ ಈ ವಿಡಿಯೋ 4 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಅತ್ತೆ-ಸೊಸೆಯ ಈ ವಿಚಿತ್ರ ಲವ್‌ಸ್ಟೋರಿಯನ್ನು ಕೇಳಿ ನೆಟ್ಟಿಗರು ಫುಲ್‌ ಶಾಕ್‌ ಆಗಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ