Cow : ಎಡೆಬಿಡದೇ ಸುರಿಯುವ ಮಳೆ. ಎಷ್ಟೊತ್ತಿನಿಂದ ಈ ಆಕಳು ಈ ಕೆಸರಿನಲ್ಲಿ ಸಿಕ್ಕಿಹಾಕಿಕೊಂಡಿದೆಯೋ ಏನೋ. ಅಂತೂ ಬೈಕ್ಸವಾರರಿಬ್ಬರು ಇಲ್ಲಿಗೆ ಬಂದು ಬೈಕ್ ನಿಲ್ಲಿಸುತ್ತಾರೆ. ಕೆಸರಿನಲ್ಲಿ ಹುದುಗಿಹೋಗಿರುವ ಆಕಳನ್ನು ಮೇಲಕ್ಕೆತ್ತಿ ನಡೆದು ಹೋಗಲು ಸಹಾಯ ಮಾಡುತ್ತಾರೆ. ಇನ್ಸ್ಟಾಗ್ರಾಮ್ನ ಆ್ಯನಿ ಅರುಣ್ ಎನ್ನುವವರು ಈ ರಸ್ತೆ ಮಾರ್ಗವಾಗಿ ಸಾಗುತ್ತಿದ್ದಾಗ ಈ ಆಕಳು ಅವರ ಕಣ್ಣಿಗೆ ಬಿದ್ದಿದೆ. ‘ನಾವು ಅಮಾಸೆಬೈಲು (Amasebailu) ಸುತ್ತಮುತ್ತಲಿನ ದಾರಿಗಳಲ್ಲಿ ಓಡಾಡುತ್ತಿದ್ದಾಗ ರಸ್ತೆಯ ಬದಿಯ ಕೆಸರಿನಲ್ಲಿ ಸಿಕ್ಕಿಬಿದ್ದಿದ್ದ ಹಸುವನ್ನು ಗಮನಿಸಿದೆವು. ನಂತರ ಅದನ್ನ ರಕ್ಷಿಸಿದೆವು. ಹತ್ತಿರದಲ್ಲಿದ್ದ ಮಹಿಳೆಯೊಬ್ಬರು ನಮಗೆ ಕೈಗಳನ್ನು ಸ್ವಚ್ಛಗೊಳಿಸಲು ಸಹಾಯ ಮಾಡಿದರು. ಒಳ್ಳೆಯ ಮಳೆ ಒಳ್ಳೆಯ ಜನ’ ಎಂದು ಅವರು ಒಕ್ಕಣೆ ಬರೆದು ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ : Viral Optical Illusion; ಇಲ್ಲಿ ಗೂಬೆಯೊಂದು ಅಡಗಿದೆ, 5 ಸೆಕೆಂಡುಗಳಲ್ಲಿ ಗುರುತಿಸಬಲ್ಲಿರೆ?
ಈ ವಿಡಿಯೋ ಅನ್ನು 3 ದಿನಗಳ ಹಿಂದೆ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳಲಾಗಿದೆ. ಈತನಕ ಸುಮಾರು 8 ಮಿಲಿಯನ್ ಜನರು ಇದನ್ನು ನೋಡಿದ್ದಾರೆ. 1.3 ಮಿಲಿಯನ್ ಜನರು ಲೈಕ್ ಮಾಡಿದ್ದಾರೆ. ಸಾವಿರಾರು ಜನರು ಪ್ರತಿಕ್ರಿಯಿಸುತ್ತಿದ್ದಾರೆ. ನೀವು ಅದ್ಭುತವಾದ ಕೆಲಸವನ್ನು ಮಾಡಿದ್ದೀರಿ ಎಂದು ಬೆನ್ನು ತಟ್ಟುತ್ತಿದ್ದಾರೆ. ಪ್ರಾಣಿ ಪಕ್ಷಿಗಳನ್ನು ಈ ಕಾಲದಲ್ಲಿಯೂ ರಕ್ಷಿಸುವವರಿದ್ದಾರೆ ಎಂದರೆ ಮಾನವೀಯತೆ ದಯೆ ಇನ್ನೂ ಉಳಿದಿದೆ ಎಂದು ಕೆಲವರು ಶ್ಲಾಘಿಸಿದ್ದಾರೆ.
ಸೋಡಿಯಮ್ನ ಕೊರತೆಯಿಂದ ಅದು ಕಸುವು ಕಳೆದುಕೊಂಡಂತಿದೆ, ಬಹುಶಃ ಆಕಳು ಗರ್ಭಧರಿಸಿರಬಹುದು ಎಂದಿದ್ದಾರೆ ಒಬ್ಬರು. ಸೋಡಿಯಂಗೂ ಇದಕ್ಕೂ ಏನೂ ಸಂಬಂಧ ಎಂದು ಮತ್ತೊಬ್ಬರು ಕೇಳಿದ್ದಾರೆ ಅದಕ್ಕೆ ಪ್ರತಿಯಾಗ ಇವರು, ಮಾಂಸಖಂಡಗಳನ್ನು ಬಲಿಷ್ಠಗೊಳಿಸುವಲ್ಲಿ ಸೋಡಿಯಂನ ಪಾತ್ರ ಮುಖ್ಯ ಎಂದಿದ್ದಾರೆ. ನೀವು ಇಲ್ಲಿ ಸಹಾಯಕ್ಕೆ ಬರುತ್ತೀರಿ ಎಂದು ಆಕೆಗೆ ಗೊತ್ತಿತ್ತು ಎನ್ನಿಸುತ್ತದೆ, ನೋಡಿ ಎಷ್ಟು ನಿರಾಳವಾದಳು ನೀವು ಸಹಾಯ ಮಾಡಿದಮೇಲೆ ಎಂದಿದ್ದಾರೆ ಮಗದೊಬ್ಬರು.
ಇದನ್ನೂ ಓದಿ : Viral: ಜಪಾನ್; ವಿಶ್ವದ ಅತ್ಯಂತ ದುಬಾರಿ ಖಾದ್ಯ ಸುಶಿಯ ಬೆಲೆ ರೂ 2 ಲಕ್ಷ; ಏನೇನೆಲ್ಲಾ ಇದೆ ಇದರಲ್ಲಿ?
ಬೈಕರ್ಸ್ ಕಮ್ಯೂನಿಟಿ ಯಾವಾಗಲು ಸಹಾಯಹಸ್ತ ಚಾಚುವಲ್ಲಿ ಮುಂದು ಎಂದು ಹೇಳಿದ್ದಾರೆ ಇನ್ನೊಬ್ಬರು. ನಿಮ್ಮ ಬಗ್ಗೆ ನನಗೆ ಮತ್ತಷ್ಟು ಪ್ರೀತಿಯುಂಟಾಗಿದೆ ಎಂದು ಒಬ್ಬರು ಹೇಳಿದ್ದಾರೆ. ಒಂದು ಜೀವವನ್ನು ರಕ್ಷಿಸುವುದಕ್ಕಿಂತ ಮಹಾಕಾರ್ಯ ಬದುಕಿನಲ್ಲಿ ಏನೂ ಇಲ್ಲ ಎಂದಿದ್ದಾರೆ ಅನೇಕರು.
ಈ ವಿಡಿಯೋ ನೋಡಿದ ನೀವು ಏನು ಹೇಳುತ್ತೀರಿ?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 2:55 pm, Sat, 12 August 23