Viral Video: ಅಳುತ್ತಿರುವ ಯುವತಿಯನ್ನು ಸಮಾಧಾನಿಸುತ್ತಿರುವ ಬೆಕ್ಕಿನ ವಿಡಿಯೋ ವೈರಲ್

Cats : ಮನುಷ್ಯಸಂಬಂಧಗಳ ಅರ್ಥ ಕಳೆದುಕೊಳ್ಳುತ್ತಿರುವ ಇಂದಿನ ದಿನಗಳಲ್ಲಿ ಪ್ರಾಣಿಗಳೇ ಮೇಲು ಎಂದ ಕೆಲವರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಬೆಡ್ರೂಮ್​ನಲ್ಲಿ ಯಾಕೆ ಈ ಯವತಿ ಕ್ಯಾಮೆರಾ ಫಿಕ್ಸ್ ಮಾಡಿದ್ದಾರೆ? ಬೆಕ್ಕು ಈಕೆಯನ್ನು ಸಮಾಧಾನಿಸುವ ವಿಡಿಯೋ ಅನ್ನು ರೆಕಾರ್ಡ್ ಮಾಡಿದ್ದು ಯಾಕೆ? ಎಂದು ಕೇಳಿದ್ದಾರೆ ಕೆಲವರು.

Viral Video: ಅಳುತ್ತಿರುವ ಯುವತಿಯನ್ನು ಸಮಾಧಾನಿಸುತ್ತಿರುವ ಬೆಕ್ಕಿನ ವಿಡಿಯೋ ವೈರಲ್
Follow us
ಶ್ರೀದೇವಿ ಕಳಸದ
|

Updated on: Aug 12, 2023 | 5:30 PM

Cat Lover : ಬೆಕ್ಕುಗಳು ಎಷ್ಟೇ ಸೊಕ್ಕಿನ ಮುದ್ದೆ ಎನ್ನಿಸಿಕೊಂಡರೂ ತನ್ನನ್ನು ಸಾಕಿದವರ ಮನಸ್ಸನ್ನು ಮಾತ್ರ ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತವೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ಗಮನಿಸಿ. ಯುವತಿಯೊಬ್ಬಳು ದುಃಖದಲ್ಲಿದ್ದಾಳೆ. ನಿಧಾನಕ್ಕೆ ಅವಳ ಬಳಿ ಬಂದ ಬೆಕ್ಕು ಆಕೆಯ ಮೈದಡವಿ, ಮೈಯೇರಿ ಸಮಾಧಾನಿಸುತ್ತದೆ. ರೆಡ್ಡಿಟ್​ನಲ್ಲಿ (Reddit) ಹಂಚಿಕೊಂಡ ಈ ವಿಡಿಯೋ ನೋಡಿದ ನೆಟ್ಟಿಗರು ಭಾವುಕರಾಗುತ್ತಿದ್ದಾರೆ. ಮನುಷ್ಯ ಮತ್ತು ಬೆಕ್ಕುಗಳ ನಡುವಿನ ಪ್ರೀತಿಯನ್ನು ಅವರು ಕೊಂಡಾಡುತ್ತಿದ್ದಾರೆ. ನಮ್ಮ ಮನೆಯ ಬೆಕ್ಕುಗಳು ಕೂಡ ಹೀಗೆಯೇ ವರ್ತಿಸುತ್ತವೆ. ಮನುಷ್ಯಮನುಷ್ಯನಿಗಿಂತ ಸಾಕುಪ್ರಾಣಿಗಳಿಗೆ ಮನುಷ್ಯನ ಮನಸ್ಸು ಅರ್ಥವಾಗುತ್ತದೆ ಮತ್ತವು ಸೂಕ್ಷ್ಮವಾಗಿ ಸ್ಪಂದಿಸುತ್ತವೆ ಎನ್ನುತ್ತಿದ್ದಾರೆ.

ಇದನ್ನೂ ಓದಿ : Viral Video: ಚೆನ್ನೈ; ಭಾರತ ಸುತ್ತಿದ ಹಿಜಾಬಿ ಸೋಲೋ ಬೈಕ್ ರೈಡರ್ ರೇಷ್ಮಾ ಕಾಸೀಮ್​ ನೂರ್

20 ಗಂಟೆಗಳ ಹಿಂದೆ ಹಂಚಿಕೊಂಡ ಈ ವಿಡಿಯೋಗೆ 37,000 ಜನರು ಲೈಕ್ ಮಾಡಿದ್ದಾರೆ. ಪ್ರತಿಕ್ರಿಯಿಸುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಇದು ಬಹಳ ಬುದ್ಧಿವಂತ, ಹೃದಯವಂತ ಮತ್ತು ಕಾಳಜಿಯುಳ್ಳ ಬೆಕ್ಕು, ಇದನ್ನು ಪಡೆದವರು ಅದೃಷ್ಟವಂತರು ಎನ್ನುತ್ತಿದ್ದಾರೆ. ನನಗೆ ಕುತ್ತಿಗೆಯ ಶಸ್ತ್ರಚಿಕಿತ್ಸೆಯಾದಾಗ ನಾನು ತುಂಬಾ ನೋವಿನಿಂದ ಬಳಲುತ್ತಿದ್ದೆ. ಹಾಸಿಗೆಯಲ್ಲಿದ್ದಷ್ಟು ದಿನಗಳ ಕಾಲ ಬೆಕ್ಕು ನನ್ನ ಭುಜಕ್ಕೆ ತಲೆ ಇಟ್ಟು ಮಲಗುತ್ತಿತ್ತು ಎಂದಿದ್ದಾರೆ ಮತ್ತೊಬ್ಬರು.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಯುವತಿಯನ್ನು ಸಮಾಧಾನಿಸುವ ಬೆಕ್ಕಿನ ವಿಡಿಯೋ ನೋಡಿ

Cat comforts her crying owner by u/sh0tgunben in AnimalsBeingBros

ನಿಜಕ್ಕೂ ಇದು ಒಳ್ಳೆಯ ಬೆಕ್ಕು, ಮನುಷ್ಯರ ಮೇಲೆ ನಂಬಿಕೆ ಕಳೆದುಕೊಂಡಾಗ ಪ್ರಾಣಿಗಳೇ ಮನುಷ್ಯರಿಗೆ ಸ್ನೇಹಿತರು ಎಂದಿದ್ದಾರೆ ಒಬ್ಬರು. ಕೊವಿಡ್​ಗೆ ಒಳಗಾದಾಗ ನಾನು ನನ್ನ ಗಂಡ ಬೇರೆ ಬೇರೆ ಕೋಣೆಯಲ್ಲಿ ವಾಸಿಸುತ್ತಿದ್ದೆವು. ಆಗ ನನ್ನ ಮೊಲ ಹಗಲೂ ರಾತ್ರಿ ನನ್ನೊಂದಿಗಿದ್ದು ನಾನು ಚೇತರಿಸಿಕೊಳ್ಳುವಲ್ಲಿ ಸಹಾಯ ಮಾಡಿತು ಎಂದಿದ್ದಾರೆ ಇನ್ನೊಬ್ಬರು. ಬೆಡ್ರೂಮ್​ನಲ್ಲಿ ಕ್ಯಾಮೆರಾ ಫಿಕ್ಸ್ ಮಾಡಿದವರು ಯಾರು ಈ ವಿಡಿಯೋದಲ್ಲಿ? ಎಂದು ಕೇಳಿದ್ಧಾರೆ ಮತ್ತೊಬ್ಬರು.

ಇದನ್ನೂ ಓದಿ : Viral Video: ಅಮಾಸೆಬೈಲು; ಕೆಸರಿನಲ್ಲಿ ಹೂತುಹೋಗಿದ್ದ ಆಕಳನ್ನು ರಕ್ಷಿಸಿದ ಬೈಕ್​ ಸವಾರರು

ಕೆಲವರು, ಎಲ್ಲಾ ಸರಿ ಆದರೆ ಬೆಡ್​ರೂಮ್​ನಲ್ಲಿ ಕ್ಯಾಮೆರಾ ಇಟ್ಟಿರುವುದು ಏಕೆ? ರೆಕಾರ್ಡ್ ಮಾಡಿರುವ ಉದ್ದೇಶವೇನು ಎಂದು ಕೇಳಿದ್ದಾರೆ. ಇದೂ ರೀಲ್ ಮಾಡುವ ಉದ್ದೇಶಕ್ಕೇ ಮಾಡಿರಬೇಕು ಎಂದಿದ್ದಾರೆ ಒಂದಿಷ್ಟು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ