ಪ್ರಪಂಚವು ವಿಚಿತ್ರವಾದ ಆಚರಣೆಗಳು ಮತ್ತು ಸಂಪ್ರದಾಯಗಳಿಂದ ತುಂಬಿವೆ. ವಿಶ್ವದ ಹಲವು ದೇಶಗಳಲ್ಲಿ ನಾನಾ ಸಂಪ್ರದಾಯಗಳು, ರೀತಿ ರಿವಾಜು, ನಂಬಿಕೆಗಳು ಆಚರಣೆಯಲ್ಲಿವೆ. ಇಂದಿಗೂ ಈ ಆಧುನಿಕ ತಾಂತ್ರಿಕ ಜಗತ್ತಿನಲ್ಲಿ ತಮ್ಮ ಹಳೆಯ ಸಂಪ್ರದಾಯಗಳಲ್ಲಿ ಬದುಕುವ ಜನರಿದ್ದಾರೆ. ಅಂತಹದ್ದೇ ವಿಚಿತ್ರ ಆಚರಣೆಯೊಂದನ್ನು ಚೀನಾದಲ್ಲಿ ಆಚರಿಸಲಾಗುತ್ತದೆ. ಹೌದು ಇಲ್ಲಿ ಜನರು ಒಬ್ಬರಿಗೊಬ್ಬರು ಮುಖಕ್ಕೆ ಮಸಿ ಬಳಿಯುವ ಮೂಲಕ ಈ ವಿಶಿಷ್ಟ ಹಬ್ಬವನ್ನು ಆಚರಿಸುತ್ತಾರೆ. ಈ ಕುರಿತ ವಿಡಿಯೋವೊಂದು ಇದೀಗ ವೈರಲ್ ಆಗುತ್ತಿದೆ.
ನೈಋತ್ಯ ಚೀನಾದ ಯನ್ನಾನ್ ಪ್ರಾಂತ್ಯದ ಮೊಜಿಯಾಂಗ್ ಎಂಬ ಪ್ರದೇಶದಲ್ಲಿ ಮುಖಕ್ಕೆ ಮಸಿ ಬಳಿಯುವ ವಿಶಿಷ್ಟ ಹಬ್ಬವನ್ನು ಆಚರಿಸಲಾಗುತ್ತದೆ. ಇದು ಇಲ್ಲಿನ ಜನಾಂಗದವರ ಸಾಂಪ್ರದಾಯಿಕ ಹಬ್ಬವಾಗಿದ್ದು, ಸುಮಾರು ಸಾವಿರ ವರ್ಷಗಳ ಹಿಂದಿನ ಈ ಸಂಪ್ರದಾಯವನ್ನು ಇಲ್ಲಿನ ಜನರು ಇಂದಿಗೂ ಆಚರಿಸುತ್ತಾ ಬರುತ್ತಿದ್ದಾರೆ. ದುಷ್ಟ ಶಕ್ತಿಗಳನ್ನು ಹೋಗಲಾಡಿಸಲು, ವಿಪತ್ತುಗಳು ಅಥವಾ ಯಾವುದೇ ಆಪತ್ತುಗಳು ಬರಬಾರದೆಂದು ಹಾಗೂ ಸಂತೋಷ, ಆರೋಗ್ಯ ವೃದ್ಧಿಸಲು ಮುಖಕ್ಕೆ ಮಸಿ ಬಳಿದು ಈ ವಿಶಿಷ್ಟ ಆಚರಣೆಯನ್ನು ಜನರು ಸಂಭ್ರಮದಿಂದ ಆಚರಿಸುತ್ತಾರೆ.
Black Face Festival in Mojiang, Yunnan.
This unique tradition has a history of more than 1000 years. It is said that black ash can drive away bad luck.
[📹 mychinatrip]pic.twitter.com/4gWMQu0VTI
— Massimo (@Rainmaker1973) May 9, 2024
ಈ ಕುರಿತ ವಿಡಿಯೋವೊಂದನ್ನು @Rainmaker1973 ಎಂಬ ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್ ವಿಡಿಯೋದಲ್ಲಿ ಜನರು ಒಬ್ಬರಿಗೊಬ್ಬರು ಮುಖಕ್ಕೆ ಮಸಿ ಬಳಿದು, ಖುಷಿಯಲ್ಲಿ ಕುಣಿದು ಕುಪ್ಪಳಿಸುತ್ತಾ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿರುವ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಖಾಲಿ ಬಿಯರ್ ಬಾಟಲಿಯಿಂದಲೇ ಲಕ್ಷಾಧಿಪತಿಯಾದ ವ್ಯಕ್ತಿ
ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 1 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಎಂತಹ ವಿಚಿತ್ರ ಆಚರಣೆಯಲ್ಲವೇ ಎಂದು ನೆಟ್ಟಿಗರು ಈ ಸಾಂಪ್ರದಾಯಿಕ ಹಬ್ಬವನ್ನು ಕಂಡು ಆಶ್ಚರ್ಯಚಕಿತರಾಗಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ