Video: ಉದ್ಯೋಗಿಗಳಿಗೆ ಸರ್ಪ್ರೈಸ್ ಆಗಿ ಐಫೋನ್‌ ನೀಡಿ ನಗು ಮೂಡಿಸಿದ ಬಾಸ್

ಬಾಸ್ ಚೆನ್ನಾಗಿ ನಡೆದುಕೊಂಡರೆ ಉದ್ಯೋಗಿಗಳಿಗೂ ಕೆಲಸ ಮಾಡಲು ಮನಸ್ಸು ಬರುತ್ತದೆ. ಆದರೆ ಇದೀಗ ಇಲ್ಲೊಬ್ಬ ಬಾಸ್ ಉದ್ಯೋಗಿಗಳಿಗೆ ವಿಶೇಷ ಉಡುಗೊರೆ ನೀಡಿ ಸರ್ಪ್ರೈಸ್ ನೀಡಿದ್ದಾನೆ. ಈ ಗಿಫ್ಟ್ ಗೇಮ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ನೆಟ್ಟಿಗರ ಹೃದಯ ಗೆದ್ದಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಉದ್ಯೋಗಿಗಳಿಗೆ ಸರ್ಪ್ರೈಸ್ ಆಗಿ ಐಫೋನ್‌ ನೀಡಿ ನಗು ಮೂಡಿಸಿದ ಬಾಸ್
ವೈರಲ್‌ ವಿಡಿಯೋ
Image Credit source: Instagram

Updated on: Sep 27, 2026 | 1:12 PM

ಕೆಲಸ ಮಾಡುವ ಸ್ಥಳದಲ್ಲಿ ಬಾಸ್ ವರ್ತನೆಯು ಬಹಳ ಮುಖ್ಯವಾಗುತ್ತದೆ. ಕಂಪನಿ (company) ಉದ್ಯೋಗಿಗಳನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎನ್ನುವುದರ ಮೇಲೆ ಉದ್ಯೋಗಿಗಳ ಕೆಲಸ ನಿರ್ಧಾರವಾಗುತ್ತದೆ. ಹೀಗಿರುವಾಗ ಯುಎಇ ಮೂಲದ ಕಂಪನಿಯೊಂದರಲ್ಲಿ ಉದ್ಯೋಗಿಗಳಿಗೆ ಬಾಸ್ ನೀಡಿದ ಸರ್ಪ್ರೈಸ್ ಗಿಫ್ಟ್ ಎಲ್ಲರ ಗಮನ ಸೆಳೆಯುತ್ತಿದೆ. ಚಾಕೊಲೇಟ್ ಯಿಂದ ಪ್ರಾರಂಭವಾಗಿ ಐಫೋನ್ ವರೆಗೆ ಈ ಗಿಫ್ಟ್ ಗೇಮ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಉದ್ಯೋಗಿಗಳಿಗೆ ಕಂಪನಿಯಿಂದ ಸರ್ಪ್ರೈಸ್ ಗಿಫ್ಟ್

ಹಸೀನಾ ನಿಶಾದ್ (haseena_nishad) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ಉದ್ಯೋಗಿಗಳು ಮೇಜಿನ ಮೇಲಿದ್ದ ಪ್ಯಾಕ್ ಮಾಡಿದ ಗಿಫ್ಟ್ ಬಾಕ್ಸ್‌ಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಉದ್ಯೋಗಿಗಳು ಬಾಕ್ಸ್ ತೆರೆದಾಗ ಕೆಲವರಿಗೆ ಐಫೋನ್ ಸಿಕ್ಕಿದೆ. ಇನ್ನು ಕೆಲವರ ಬಾಕ್ಸ್ ನಲ್ಲಿ ಚಾಕೊಲೇಟ್ ಇದ್ದಿತು. ಈ ರೀತಿ ವಿಶೇಷ ಗಿಫ್ಟ್ ಗೆ ಎಲ್ಲರ ಮೊಗದಲ್ಲಿ ನಗು ಮೂಡಿದೆ. ಆದರೆ ಈ ಗಿಫ್ಟ್ ಬಾಕ್ಸ್‌ನಲ್ಲಿ ಚಾಕೊಲೇಟ್ ಸಿಕ್ಕ ಉದ್ಯೋಗಿಗಳಿಗೆ ಮತ್ತೊಂದು ಸರ್ಪ್ರೈಸ್ ಕಾದಿರುವುದನ್ನು ನೀವು ಕಾಣಬಹುದು. ಚಾಕೊಲೇಟ್ ಇದ್ದವರಿಗೆ ಐಫೋನ್ ನೀಡಲಾಗಿದೆ.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ನಮ್ಮ ಕಂಪನಿಯಲ್ಲಿ ಈ ರಾಜ್ಯಗಳ ಪುರುಷರಿಗೆ ನೀಡಲ್ಲ ಜಾಬ್; ಚರ್ಚೆಗೆ ಕಾರಣವಾಯ್ತು ಬೆಂಗಳೂರಿನ ಸಿಇಒ ಪೋಸ್ಟ್

ದುಬಾರಿ ಬೆಲೆಯ ಗಿಫ್ಟ್ ನೋಡಿ ನೆಟ್ಟಿಗರು ಶಾಕ್

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ಇಂತಹ ಸರ್ಪ್ರೈಸ್ ಕೊಟ್ಟರೆ ಉದ್ಯೋಗಿಗಳಿಗೂ ಕೆಲಸ ಮಾಡಲು ಮನಸ್ಸಾಗುತ್ತದೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ಈ ರೀತಿ ಎಲ್ಲಾ ಕಂಪನಿಗಳಿಂದ ಸಿಗಲಿ ಎಂದು ತಮಾಷೆಯ ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಈ ಕಂಪನಿ ಉದ್ಯೋಗಿಗಳು ನಿಜಕ್ಕಿ ಫುಣ್ಯವಂತರು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us