
ಆಪ್ಟಿಕಲ್ ಇಲ್ಯೂಷನ್ (optical illusion) ಅಥವಾ ಒಗಟನ್ನು ಬಿಡಿಸುವಂತಹ ಕೆಲವು ಆಟಗಳು ಎಲ್ಲರ ಗಮನ ಸೆಳೆಯುತ್ತಿರುತ್ತವೆ. ಈ ಒಗಟಿನ ಪ್ರಶ್ನೆ ಬಿಡಿಸುವುದು ಖುಷಿಕೊಟ್ಟರೂ ನೀವು ನಿಮ್ಮ ಬುದ್ಧಿ ಖರ್ಚು ಮಾಡಬೇಕಾಗುತ್ತದೆ. ಕೆಲವರು ನೀರು ಕುಡಿದಂತೆ ಸಲೀಸಾಗಿ ಒಗಟು ಬಿಡಿಸುತ್ತಾರೆ. ಈ ಕುಟುಂಬದಲ್ಲಿ ಇಬ್ಬರೂ ಅಪ್ಪಂದಿರು, ಇಬ್ಬರೂ ಮಕ್ಕಳು ಇದ್ದರೂ ಇಲ್ಲಿರುವುದು ಮೂರೇ ಜನ, ಅದೇಗೆ ಎನ್ನುವ ಪ್ರಶ್ನೆ ನಿಮ್ಮಲ್ಲಿ ಮೂಡುತ್ತದೆ. ಈ ಪ್ರಶ್ನೆಗೆ ಉತ್ತರ ಹುಡುಕುವ ಕೆಲಸ ನಿಮ್ಮದು, ನೀವು ಈ ಟ್ರಿಕ್ಕಿ ಒಗಟು ಬಿಡಿಸಲು ರೆಡಿ ಇದ್ದೀರಾ ಎಂದುಕೊಳ್ಳುತ್ತೇವೆ.
ಕನ್ನಡ ವೈಬ್ಸ್ (kannada_vibes) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ಒಗಟಿನ ಪ್ರಶ್ನೆಗೆ ಹೀಗಿದೆ. ಬುದ್ಧಿವಂತರಿಗೆ ಮಾತ್ರ, ಮೊದಲ ಪ್ರಯತ್ನದಲ್ಲಿ ಉತ್ತರ ಹೇಳುವಿರಾ?. ಒಂದು ಕುಟುಂಬದಲ್ಲಿ 2 ಅಪ್ಪ 2 ಮಗ ಇದ್ದರು. ಆದರೂ ಅವರೆಲ್ಲರನ್ನು ಸೇರಿದರೆ ಒಟ್ಟು ಮೂವರು ಮಾತ್ರ ಆಗುತ್ತಾರೆ. ಹಾಗಾದ್ರೆ ಈ ಒಗಟು ಬಿಡಿಸಿ.
ಎಷ್ಟೇ ತಲೆ ಕೆಡಿಸಿಕೊಂಡರೂ ಈ ಒಗಟಿನ ಉತ್ತರವನ್ನು ಕಂಡುಹಿಡಿಯಲು ಸಾಧ್ಯವಾಗುತ್ತಿಲ್ಲವೇ, ಈ ಪ್ರಶ್ನೆಯನ್ನು ಸರಿಯಾಗಿ ಗಮನಿಸಿದರೆ ಅದರಲ್ಲೇ ಉತ್ತರ ಅಡಗಿದೆ. ಈ ಟ್ರಿಕ್ಕಿ ಒಗಟಿನ ಉತ್ತರ ಅಪ್ಪ, ಮಗ ಹಾಗೂ ಮೊಮ್ಮಗ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ