Viral: ತಿಂಗಳಿಗೆ 80 ಸಾವಿರ ರೂ ದುಡಿದ್ರು ಸೇವಿಂಗ್ಸ್ ಇಲ್ಲ; ಬೇಸರ ವ್ಯಕ್ತಪಡಿಸಿದ ವ್ಯಕ್ತಿ
ಈಗಿನ ಕಾಲದಲ್ಲಿ ಎಷ್ಟು ದುಡಿದ್ರೂ ಕಡಿಮೆಯೇ. ತಿಂಗಳ ಸಂಬಳದಲ್ಲಿ ಒಂದೇ ಒಂದು ರೂಪಾಯಿ ಉಳಿಯಲ್ಲ. ಇದೀಗ ಈ ವ್ಯಕ್ತಿಯದ್ದು ಇದೇ ಗೋಳು. ದೆಹಲಿ ಮೂಲದ 34 ವರ್ಷದ ವ್ಯಕ್ತಿಯೊಬ್ಬರು ತಮ್ಮ ಸಾಲವನ್ನು ತೀರಿಸಿದ್ದಾರಂತೆ. ಲೋನ್ ಕ್ಲಿಯರ್ ಆದ್ಮೇಲೂ ಯಾವುದೇ ಉಳಿತಾಯವಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಈ ರೆಡ್ಡಿಟ್ ಪೋಸ್ಟ್ ಸದ್ಯ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ಇಂದಿನ ದುಬಾರಿ ದುನಿಯಾದಲ್ಲಿ ಬದುಕೋದು ಕಷ್ಟ. ಲಕ್ಷ ಲಕ್ಷ ಸಂಬಳ ಬರ್ತಾ ಇದ್ರು ತಿಂಗಳ ಕೊನೆಯಲ್ಲಿ ದುಡ್ಡು ಉಳಿಯಲ್ಲ ಎಂದು ಹೇಳೋದನ್ನು ಕೇಳಿರಬಹುದು. ಆದರೆ ದೆಹಲಿ ವ್ಯಕ್ತಿ ತಿಂಗಳಿಗೆ 80,000 ರೂ ಗಳಿಸುತ್ತಿದ್ರು ಎಐ ಕಾರಣದಿಂದ ಕೆಲಸ (job) ಕಳೆದುಕೊಳ್ಳುವ ಭಯದಲ್ಲಿದ್ದಾರೆ. ಒಂದೇ ಒಂದು ರೂಪಾಯಿ ಉಳಿತಾಯ ಇಲ್ಲ, ಕೆಲಸ ಕಳೆದುಕೊಂಡರೆ ತನ್ನ ಹೆಂಡ್ತಿ ಮಗಳನ್ನು ಹೇಗೆ ಸಾಕುವುದು ಎನ್ನುವ ಚಿಂತೆ ಕಾಡಿದೆ. ಹೀಗಾಗಿ ಈ ವ್ಯಕ್ತಿ ರೆಡ್ಡಿಟ್ ನಲ್ಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಸಾಲ ತೀರಿಸಿದ್ರೂ ಉಳಿತಾಯ ಮಾಡೋಕಾಗ್ತಿಲ್ಲ
ಆರ್/ ಇಂಡಿಯಾಫೈನಾನ್ಸ್ (Indian Finance) ರೆಡ್ಡಿಟ್ ನಲ್ಲಿ ತನ್ನ ಕಷ್ಟವನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ಗೆ ಸಾಲ ಮುಕ್ತ ಆದರೆ ಜೀರೋ ಉಳಿತಾಯ ಎಂಬ ಶೀರ್ಷಿಕೆ ನೀಡಲಾಗಿದೆ. ಸಾಲ ಮುಗಿದಿದೆ, ಆದರೆ ಉಳಿತಾಯ ಇನ್ನೂ ಶೂನ್ಯವಾಗಿದೆ. ಸಾಲವನ್ನು ತೀರಿಸಲು ಬಹಳ ಸಮಯ ತೆಗೆದುಕೊಂಡಿತು. ಹೊಸ ಜೀವನವನ್ನು ಆರಂಭಿಸಬೇಕೆಂದು ಕೊಂಡಿರುವೆ. ಆದರೆ ಉದ್ಯೋಗ ಅಭದ್ರತೆಯ ಚಿಂತೆ ಕಾಡುತ್ತಿದೆ ಎಂದಿದ್ದಾರೆ.
ರೆಡ್ಡಿಟ್ ಪೋಸ್ಟ್ ಇಲ್ಲಿದೆ
Debt Free But 0 Savings by u/faham5896 in IndiaFinance
ತಿಂಗಳ ಬಾಡಿಗೆಯೇ 30,000 ರೂ, ಉಳಿತಾಯ ಎಲ್ಲಿಂದ?
ಮನೆ ಬಾಡಿಗೆಗೆ ತಿಂಗಳಿಗೆ 30,000 ರೂಪಾಯಿಗಳನ್ನು ಖರ್ಚು ಮಾಡುತ್ತೇನೆ. ಬಾಡಿಗೆಯೇ ತಿಂಗಳ ಸಂಬಳವನ್ನು ಅರ್ಧಕರ್ಧ ತಿಂದು ಹಾಕುತ್ತವೆ. ಇದರಿಂದ ಉಳಿತಾಯ ಕಷ್ಟವಾಗುತ್ತಿದೆ. ಇತ್ತ ಪತ್ನಿ ಮತ್ತು ಮಗಳ ಜೀವನ ಪರಿಸ್ಥಿತಿಗಳಿಗೆ ನಾನು ಯಾವುದನ್ನೇ ರಾಜಿ ಮಾಡಿಕೊಳ್ಳಲು ಬಯಸುವುದಿಲ್ಲ. ಕುಟುಂಬಕ್ಕೆ ಆರಾಮದಾಯಕ ವಾತಾವರಣವನ್ನು ಒದಗಿಸಲು ಬಯಸುತ್ತೇನೆ ಎಂದು ಇಲ್ಲಿ ಹೇಳಿದ್ದಾರೆ.
ಕೆಲ್ಸ ಕಳೆದುಕೊಂಡ್ರೆ ಜೀವನ ನಿರ್ವಹಣೆ ಕಷ್ಟಕರ
ಕೆಲಸ ಕಳೆದುಕೊಂಡರೆ, ಉಳಿತಾಯವಿಲ್ಲದೆ ಕುಟುಂಬದ ಅಗತ್ಯಗಳನ್ನು ಪೂರೈಸುವುದು ಕಷ್ಟಕರವಾಗುತ್ತದೆ. ಎಐ ಬಳಕೆ ಹೆಚ್ಚುತ್ತಿರುವ ಬಗ್ಗೆ ಮತ್ತು ಸ್ವತಂತ್ರ ಕೆಲಸಕ್ಕಾಗಿ ಅವಕಾಶಗಳು ಕಡಿಮೆಯಾಗುತ್ತಿದೆ. ಉದ್ಯೋಗ ನಷ್ಟವಾದರೆ ಜೀವನ ನಿರ್ವಹಣೆ ಕಷ್ಟಕರ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಸಂದರ್ಶನದಲ್ಲಿ ಪ್ರಾಮಾಣಿಕ ಉತ್ತರ ನೀಡಿ ಸಂದರ್ಶಕನ ಮನಸ್ಸು ಗೆದ್ದ ಯುವಕ
ಈ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು ನೆಟ್ಟಿಗರು ಧೈರ್ಯ ತುಂಬಿದ್ದಾರೆ. ಒಬ್ಬ ಬಳಕೆದಾರ, ಮಾಸಿಕ ಖರ್ಚು ವೆಚ್ಚಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲಿ ನೀಡಿಲ್ಲ ಎಂದಿದ್ದಾರೆ. ಮತ್ತೊಬ್ಬರು ಎಮರ್ಜೆನ್ಸಿ ಫಂಡ್ ಎಂದು ಇಂತಿಷ್ಟು ಹಣ ಎತ್ತಿಡಿ ಎಂದು ಸಲಹೆ ನೀಡಿದ್ದಾರೆ. ಇನ್ನೊಬ್ಬರು, ಬೇರೆ ಉದ್ಯೋಗ ಹುಡುಕುವತ್ತ ಗಮನ ಕೊಡಿ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




